Advertisement

ಕಪ್ಪತಗುಡ್ಡ: ಹೈಕೋರ್ಟ್‌-ಸರಕಾರದಿಂದ ಉತ್ತಮ ನಡೆ

02:56 PM Mar 18, 2017 | Team Udayavani |

ಹುಬ್ಬಳ್ಳಿ: ಕಪ್ಪತಗುಡªದ ವಿಚಾರವಾಗಿ ಹೈಕೋರ್ಟ್‌ ನಿರ್ಧಾರ ಸ್ವಾಗತಾರ್ಹ. ಸರಕಾರವೂ ಉತ್ತಮ ನಡೆ ಇರಿಸಿದೆ. ಇದೇ ರೀತಿ ಬಲಾಡ್ಯರಿಂದ ಅರಣ್ಯ ಮತ್ತು ಕಂದಾಯ ಭೂಮಿ ಕಬಳಿಕೆ ಪ್ರಕರಣದ ವಿರುದ್ಧವೂ ಸರಕಾರ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಲಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ತಿಳಿಸಿದರು. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪಗುಡ್ಡದ ವಿಷಯವಾಗಿ ಬಲ್ಡೋಟಾ ಕಂಪೆನಿಯ ಹುನ್ನಾರದ ಮೇರೆಗೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಕಪ್ಪತಗುಡ್ಡ ಸಂರಕ್ಷಣೆ ನಿಟ್ಟಿನಲ್ಲಿ ಗದಗ ತೋಂಟದ ಡಾ| ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಹೋರಾಟ ಹಾಗೂ ಜನರ ಒತ್ತಡಕ್ಕೆ ಪೂರಕವಾಗಿ ರಾಜ್ಯ ಸರಕಾರ ಸ್ಪಂದಿಸಿದೆ.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲರ ಯತ್ನ ಹಾಗೂ ಸರಕಾರದ ಪರವಾಗಿ ವಕೀಲರ ಉತ್ತಮ ವಾದ ಮಂಡನೆಯೊಂದಿಗೆ ಕಾನೂನು ಹೋರಾಟದಲ್ಲಿ ಗಣಿ ಕಂಪನಿಯ ಹುನ್ನಾರ ನಡೆಯಲಿಲ್ಲ ಎಂದರು. ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಘೋಷಣೆ ಅಷ್ಟೇ ಅಲ್ಲ. ಗದುಗಿನ ತೋಂಟದಾರ್ಯ ಮಠ, ಹುಲಕೋಟಿಯ ಕೆ.ಎಚ್‌. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಗುಡ್ಡದ ಸೆರಗಿನ ಗ್ರಾಮಸ್ಥರು ಅಲ್ಲಿನ ಅರಣ್ಯ ಪ್ರದೇಶ ಇನ್ನಷ್ಟು ಹೆಚ್ಚುವ ನಿಟ್ಟಿನಲ್ಲಿ ಶ್ರಮ ವಹಿಸಬೇಕೆಂದರು. 

ಕ್ರಮ ಕೈಗೊಳ್ಳಲಿ: ರಾಜ್ಯದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಸಚಿವರು ಹಾಗೂ ಅನೇಕ ಬಲಾಡ್ಯರು ಕಬಳಿಕೆ ಮಾಡಿದ್ದು, ಇದರ ತೆರವಿಗೆ ಸರಕಾರ ಕ್ರಮಕೈಗೊಳ್ಳಬೇಕು. ಬೆಂಗಳೂರಿನ ಜಕ್ಕೂರು ಬಳಿ 177.28 ಎಕರೆ ಸರಕಾರಿ ಜಮೀನು ಕಬಳಿಕೆಯಾಗಿದ್ದು, ಇದರಲ್ಲಿ ಸಚಿವ ಆರ್‌.ವಿ. ದೇಶಪಾಂಡೆ ಕುಟುಂಬದ್ದು 5 ಎಕರೆ ಇದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅವರ ಸಂಬಂಧಿ ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಕುಟುಂಬದವರು 100 ಎಕರೆಯಷ್ಟು ಗೋಮಾಳ ಭೂಮಿ ಕಬಳಿಕೆ ಮಾಡಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ ಸಹೋದರರು ಪದಾಧಿಕಾರಿಗಳಾಗಿರುವ ಕರ್ನಾಟಕ ಜಿಮಖಾನ ಕ್ಲಬ್‌ ಹುಬ್ಬಳ್ಳಿಯ ದೇಶಪಾಂಡೆ ನಗರದ ಸಾರ್ವಜನಿಕ ಬಳಕೆ ಮೈದಾನವನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಹಿರೇಮಠ. ಇಂತಹ ಎಲ್ಲ ಪ್ರಕರಣಗಳ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಎಲ್ಲ ರಂಗಗಳಲ್ಲೂ ಅಪನಂಬಿಕೆ ಹೆಚ್ಚತೊಡಗಿದೆ.

Advertisement

ಇತ್ತೀಚೆಗೆ ನ್ಯಾಯಾಂಗದ ಕೆಲವೊಂದು ತೀರ್ಮಾನಗಳು ಕಳವಳ ಮೂಡಿಸುವಂತಾಗಿದೆ. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳೇ ಇಲ್ಲ ಎಂಬ ಹೊಸ ರಾಗ ತೆಗೆದಿದೆ. ಮುಂದೆ ಬಿ ರಿಪೋರ್ಟ್‌ ಸಲ್ಲಿಸಿದರೂ ಅಚ್ಚರಿಯಿಲ್ಲ. ಇದೆಲ್ಲವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next