Advertisement
ನಂಜನಗೂಡು: ತಾಲೂಕಿನ ಬಿಳಗರೆ ಹೋಬಳಿಯ ದಶಕಗಳ ಕನಸಿನ ಫಲವಾಗಿ ಮಂಗಳವಾರ ತಗಡೂರಿನಕೊಮ್ಮನ ಕರೆಗೆಕಪಿಲಾ ನೀರು ಹರಿಯಿತು. ಸುತ್ತೂರು ಬಳಿಯ ಪಂಪ್‌ಹೌಸಿನಿಂದ ತಗಡೂರು ಕರೆಗೆ ಕಪಿಲಾ ನೀರು ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಕಾದಿದ್ದ ಜನತೆ ಯಲ್ಲಿ ಮಂಗಳವಾರ ನೀರು ಬಂದು ತಲುಪಿದಾಗ ಆನಂದ ಭಾಷ್ಪ ಕಾಣಿಸಿಕೊಂಡಿತು. ತಮ್ಮ ಕ್ಷೇತ್ರ ವ್ಯಾಪ್ತಿಯ ಕರೆಗೆ ನೀರು ಬರುವ ಸಮಯ ದಲ್ಲಿ ಖುದ್ದು ಹಾಜರಿದ್ದ ಶಾಸಕ ಡಾ|ಯತೀಂದ್ರಅವರುಜನತೆ ಸಂತೋಷದಕಡಲಲ್ಲಿತಾವೂ ಭಾಗಿಯಾಗಿದ್ದೂ ಅಲ್ಲದೆ ಆಗಮಿಸಿದ ನದಿ ನೀರಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ಕೆರೆಗೆ ನೀರು ಹರಿಯುವ ಮೂಲಕ ತಂದೆ ಸಿದ್ದರಾಮಯ್ಯ ಹಾಗೂ ತಮ್ಮ ಕನಸು ನನಸಾಗಿದೆ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ 233 ಕೋಟಿ ರೂ. ಯೋಜನೆ ಸಿದ್ಧಪಡಿಸಿ, ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಲಾಗಿತ್ತು. ನನ್ನ ಅವಧಿಯಲ್ಲಿ ನೀರು ಬಂದಿದೆ ಎಂದರು.
ದರೊಂದಿಗೆ ಮಳೆಯಾಶ್ರಿತ ಪ್ರದೇಶವಾದ ನಂಜನ ಗೂಡು, ಚಾ.ನಗರ, ಯಳಂದೂರು ತಾಲೂಕಿನಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲಿದೆ ಎಂದರು. ಈ ವೇಳೆ ತಗಡೂರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಆರ್.ಮಹದೇವು, ತಗಡೂರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಹಾಡ್ಯ ರಂಗಸ್ವಾಮಿ ಸೇರಿದಂತೆ ತಗಡೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Related Articles
ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ದೊಡ್ಡಕೆರೆಗೆ ನಂಜನಗೂಡು ತಾಲೂಕಿನ ಸುತ್ತೂರಿನ ಪಂಪ್‌ಹೌಸ್‌ನಿಂದ ನೀರು ಹರಿಸಲು ಮಂಗಳವಾರ ಚಾಲನೆ ನೀಡಲಾಗಿದೆ.
Advertisement
ಸುತ್ತೂರಿನ ಕಬಿನಿ ನದಿಯಿಂದ ಪೈಪ್ ಮೂಲಕ ನೀರು ಹರಿಸುವಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಅಲ್ಲಿಂದ ನಂಜನಗೂಡುತಾಲೂಕಿನ ತಗಡೂರು ಗ್ರಾಮದಕೊಮ್ಮಗೆರೆಗೆ ನೀರು ತಲುಪಿತು. ಅಲ್ಲಿಂದ ಉಮ್ಮತ್ತೂರುಕೆರೆಯ ಕಡೆಗೆ ಹರಿಸಲಾಗಿದೆ. ಆ ನೀರು ನಂಜನಗೂಡು ತಾಲೂಕಿನ ಚುಂಚನಹಳ್ಳಿ ಹಾಗೂ ಹನುಮನಪುರ ನಡುವೆ ಇರುವ ವಿತರಣಾ ತೊಟ್ಟಿಗೆ ಮಂಗಳವಾರ ಸಂಜೆ ತಲುಪಿದೆ. ಇಲ್ಲಿಂದ ತಾಲೂಕಿನ ಉಮ್ಮತ್ತೂರು ಕೆರೆಗೆ3 ಕಿ.ಮೀ. ಅಂತರದವರೆಗೆ ಪೈಪ್‌ಲೈನ್ ಮೂಲಕ ಹರಿದು, ನಂತರ2 ಕಿ.ಮೀ. ದೂರ ಭೂಮಿಯ ಮೇಲೆ ಗುರುತ್ವಾಕರ್ಷಣ ಶಕ್ತಿಯ ಮೂಲಕ ಹರಿದು ಉಮ್ಮತ್ತೂರುಕೆರೆಗೆ ನೀರು ತಲುಪಬೇಕಿದೆ. ವಿದ್ಯುತ್ ಅಡಚಣೆ ಉಂಟಾಗದಿದ್ದಲ್ಲಿ ಬುಧವಾರ ಬೆಳಗಿನ ಜಾವದ ವೇಳೆಗೆ ಉಮ್ಮತ್ತೂರುಕೆರೆಗೆ ನೀರು ಬರಬಹುದೆಂದು ನಿರೀಕ್ಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉಮ್ಮತ್ತೂರು ಕೆರೆ ಪಕ್ಕ ಕೊಟ್ಟೂರು ಬಸವೇಶ್ವರ ದೇವಾಲಯದ ಮುಂದೆ ರೈತರು ನಡೆಸುತ್ತಿದ್ದ ಚಳವಳಿಯನ್ನು ತಾತ್ಕಾಲಿಕ ವಾಗಿ ಹಿಂತೆಗೆದುಕೊಳ್ಳಲಾಯಿತು. ಕೆರೆಗೆ ನೀರು ತುಂಬಿದ ಬಳಿಕ ಸೆ.2ರಂದು ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ಗಂಗೆ ಪೂಜೆ ಸಲ್ಲಿಸುವುದು. ಒಂದು ವೇಳೆ ನೀರು ಮತ್ತೆ ಸ್ಥಗಿತವಾದರೆ ಅದೇ ಸ್ಥಳದಲ್ಲಿ ನಾನೂ ನಿಮ್ಮ ಜೊತೆ ಪ್ರತಿಭಟನೆ ಮುಂದುವರಿಸುತ್ತೇನೆ ಎಂದು ಶಾಸಕ ಎನ್. ಮಹೇಶ್ ಭರವಸೆ ನೀಡಿದ್ದಾರೆ ಎಂದು ಕಬ್ಬುಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿ ದರು. ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎನ್. ಮಹೇಶ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘಟನೆ ಗಳ ಮುಖಂಡ ಸಿ.ಎಂ. ಕೃಷ್ಣಮೂರ್ತಿ ಭೇಟಿ ನೀಡಿದ್ದರು. ಜಿಲ್ಲಾಧ್ಯಕ್ಷಹೊನ್ನೂರು ಪ್ರಕಾಶ್,ಹೆಬ್ಬಸೂರು ಬಸವಣ್ಣ, ಹಾಡ್ಯವಿ, ಮಹೇಶ್,ಕುಮಾರ್ ಇತರರಿದ್ದರು.