Advertisement
ನಿಮ್ಮ ಬಳೆಗಳನ್ನು ಕಳಚಿಟ್ಟು, ನೀವು ಏನು ಮಾಡುತ್ತೀರಿ ಎಂಬುದನ್ನು ಪ್ರದರ್ಶಿಸಿ ಎಂದು ಕಪಿಲ್ ಸಿಬಲ್ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.
ಯುಪಿಎ ಆಡಳಿತಾವಧಿಯಲ್ಲಿ ಮಹಿಳಾ ಸಂಸದೆಯೊಬ್ಬರು ಅಂದು ಮನಮೋಹನ್ ಸಿಂಗ್ ಅವರಿಗೆ ನಿಮಗೆ ತೊಟ್ಟುಕೊಳ್ಳಲು ಬಳೆಗಳನ್ನು ಕಳುಹಿಸಿಕೊಡಲೇ ಎಂದು ಕೇಳಿದ್ದರು. ಅಂದು ಹಾಗೆ ಹೇಳಿದ್ದ ಸಂಸದೆ ಈಗ ಸಚಿವೆಯಾಗಿದ್ದಾರೆ. ಹಾಗಾದರೆ ಆ ಸಚಿವೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಳೆ ಕಳುಹಿಸಿ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಪಾಕ್ ಸೈನಿಕರು ಅಂದು ದಾಳಿ ನಡೆಸಿ ಯೋಧರನ್ನು ಹತ್ಯೆಗೈಯುತ್ತಿದ್ದ ವೇಳೆ ಮನಮೋಹನ್ ಸಿಂಗ್ ವಿರುದ್ಧ ಸಂಸದೆಯಾಗಿದ್ದ ಸ್ಮೃತಿ ಇರಾನಿ 2013ರಲ್ಲಿ ಇಂಧೋರ್ ನಲ್ಲಿ ನಡೆದಿದ್ದ ಬಹಿರಂಗ ಸಮಾರಂಭದಲ್ಲಿ ವ್ಯಂಗ್ಯವಾಡಿದ್ದರು.
Related Articles
Advertisement
ಪಾಕಿಸ್ತಾನ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರಕ್ಕೆ ತಿಳಿದಿದ್ದರೂ ಕೂಡಾ, ಪಠಾಣ್ ಕೋಟ್ ಗೆ ಬರುವಂತೆ ಐಎಸ್ಐಗೆ ಕರೆ ಕೊಡುತ್ತಾರೆ, ಅವರು ಪಾಕ್ ಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಹೇಳಿ ಬರುತ್ತಾರೆ. ಹಾಗಾಗಿ ಪಾಕಿಸ್ತಾನದಿಂದ ತನಗೆ ಯಾವುದೇ ನಿರೀಕ್ಷೆ ಇಲ್ಲ ಎಂಬುದನ್ನು ಪ್ರಧಾನಿ ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ಯಾವುದೇ ಆಲಿಂಗನ ಮತ್ತು ಹುಟ್ಟುಹಬ್ಬದ ಆಚರಣೆ ಬೇಕಾಗಿಲ್ಲ ಎಂದು ಸಿಬಲ್ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.