Advertisement
* ಭಾರತದ ಮೇಲೆ ನಿರೀಕ್ಷೆಯ ಭಾರಹೌದು, ಕಪಿಲ್ ಮೂಡಿಸಿದ ಕ್ರಿಕೆಟ್ ಕ್ರೇಜ್ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಭಾರತದಲ್ಲಿ ಟೆಸ್ಟ್ ಜತೆಗೆ ಏಕದಿನ ಸರಣಿಗೆ ಹೆಚ್ಚಿನ ಪ್ರಾಶಸ್ತ್ಯ ಲಭಿಸಿತು. ಯುವ ಜನತೆ ಭಾರೀ ಮಟ್ಟದಲ್ಲಿ ಈ ಪಂದ್ಯಗಳಿಗೆ ಮುಗಿಬೀಳತೊಡಗಿತು. ಪ್ರತಿಯೊಂದು ವರ್ಲ್ಡ್ಕಪ್ ಬಂಗಾದಲೂ ಭಾರತದ ನಿರೀಕ್ಷೆಗಳು ಗರಿಗೆದರುತ್ತಿದ್ದವು. ಆದರೆ ಭಾರತ ಮತ್ತೂಮ್ಮೆ ವಿಶ್ವಕಪ್ ಎತ್ತುವುದನ್ನು ಕಣ್ತುಂಬಿಸಿಕೊಳ್ಳಲು 2011ರ ತನಕ ಕಾಯಬೇಕಾಯಿತು. ಅಂದು ಧೋನಿ ಪಡೆ ಮೋಡಿಗೈಯುವ ಮೂಲಕ ದೇಶದ ಅಪಾರ ಕ್ರಿಕೆಟ್ ಅಭಿಮಾನಿಗಳ ಕನಸನ್ನು ನನಸಾಗಿಸಿತು.
1983ರಿಂದ 2011-ಈ 28 ವರ್ಷಗಳ ಅವಧಿಯ ವಿಶ್ವಕಪ್ ಕೂಟಗಳಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ, ಕಾತರಕ್ಕೆ ಮಿತಿ ಇರಲಿಲ್ಲ. ಎರಡು ಸಲ ಭಾರತದ ಆತಿಥ್ಯದಲ್ಲೇ ಕೂಟ ನಡೆದಾಗಲೂ ಕಪ್ ಮರೀಚಿಕೆಯೇ ಆಗಿ ಉಳಿಯಿತು. 2003ರಲ್ಲಿ ಸೌರವ್ ಗಂಗೂಲಿ ಪಡೆಗೆ ಅದ್ಭುತವೊಂದನ್ನು ಸಾಧಿಸುವ ಅವಕಾಶ ಬಾಗಿಲಿಗೆ ಬಂದಿತ್ತು. ಆದರೆ ನಸೀಬು ಕೈಕೊಟ್ಟಿತು. ಆದರೆ 2011 ಅದೃಷ್ಟ ತಂದಿತ್ತಿತು. ಧೋನಿ ಟೀಮ್ ವಿಶ್ವ ಸಾಮ್ರಾಟನಾಗಿ ಮೆರೆಯಿತು. * ಬಲಿಷ್ಠ ತಂಡಗಳ ಸಾಹಸಗಾಥೆ
ವಿಶ್ವಕಪ್ ಗೆದ್ದ ಭಾರತದ ಈ ಎರಡೂ ತಂಡಗಳು ಅತ್ಯಂತ ಬಲಿಷ್ಠವಾಗಿದ್ದವು. 1983ರಲ್ಲಿ ದಾಖಲಾದದ್ದು ಅಚ್ಚರಿಯ ಫಲಿತಾಂಶವಾದರೂ ಟ್ರೋಫಿ ಎತ್ತಲು ಭಾರತ ಅರ್ಹವಾಗಿಯೇ ಇತ್ತು. ಅಮೋಘ ಆಲ್‌ರೌಂಡ್ ಪ್ರದರ್ಶನ, ಕಪಿಲ್ ಅವರ ದಿಟ್ಟ ನಾಯಕತ್ವ, ಇಂಗ್ಲೆಂಡ್ ಟ್ರ್ಯಾಕ್‌ಗಳ ಭರ್ಜರಿ ಲಾಭ ಭಾರತವನ್ನು ಬಹಳ ಎತ್ತರಕ್ಕೆ ಏರಿಸಿತು. 2003ರಲ್ಲಿ ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗ ನಿರೀಕ್ಷೆಯಷ್ಟು ಘಾತಕವಾಗಿರಲಿಲ್ಲ. ಗಂಗೂಲಿ ಫೈನಲ್ ತನಕ ತಂಡವನ್ನು ಮುನ್ನಡೆಸಿದರೂ ಕಪ್ ಎಟುಕಲಿಲ್ಲ.
Related Articles
Advertisement