Advertisement

ಕಪ್ಪತ್ತಗುಡ್ಡದ ಬೆಂಕಿ ಹತೋಟಿಗೆ

03:16 PM Feb 18, 2020 | Suhan S |

ಮುಂಡರಗಿ: ತಾಲೂಕಿನ ಹಾರೋಗೇರಿ ಮತ್ತು ಹಿರೇವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವ ಹಿನ್ನೆಲೆಯಲ್ಲಿ ಅಂದಾಜು 15 ಹೆಕ್ಟೇರ್‌ ಪ್ರದೇಶದಲ್ಲಿ ಗುಡ್ಡ ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ.

Advertisement

ವಲಯ ಅರಣ್ಯಾಧಿಕಾರಿ ಎಸ್‌.ಎಂ. ಶಿವರಾತ್ರೀಶ್ವರಸ್ವಾಮಿ ನೇತೃತ್ವದಲ್ಲಿ 25 ಜನ ಸಿಬ್ಬಂದಿ ಐದು ಗಂಟೆಗಳ ನಿರಂತರ ಪ್ರಯತ್ನದ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿ, ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ತಪ್ಪಿಸಿದ್ದಾರೆ.

ಕಪ್ಪತ್ತಗುಡ್ಡದ ಪ್ರದೇಶದಲ್ಲಿ ಮತ್ತೆ-ಮತ್ತೆ ಬೆಂಕಿ ಬೀಳುವುದನ್ನು ತಪ್ಪಿಸಲು ಹೆಚ್ಚಿನ ಕಾವಲು ಗೋಪುರಗಳು, ಸಿಸಿ ಟಿವಿಗಳನ್ನು ಅಳವಡಿಸುವ ಕ್ರಮ ಕೈಕೊಳ್ಳುವುದು ಅವಶ್ಯವಿದೆ ಎಂಬ ಮಾತುಗಳು ಕೇಳಿಬಂದಿವೆ. ಬೆಂಕಿಯು ಬಿದ್ದ ಮೇಲೆ ನಂದಿಸಲು ಹೋಗುವುದು, ಬೆಂಕಿಯಿಂದಾಗಿ ಹಾನಿಯು ಸಂಭವಿಸದ ನಂತರ ಪಶ್ಚಾತಾಪ ಪಡುವುದಕ್ಕಿಂತಲೂ, ಮೊದಲು ಬೆಂಕಿಯು ಬೀಳದಂತೆ ಮುನ್ನಚ್ಚರಿಕೆಯ ಕ್ರಮಗಳನ್ನು ಜರುಗಿಸಿ ಕಪ್ಪತ್ತಗುಡ್ಡದಲ್ಲಿರುವ ಅಪರೂಪದ ಸೂಕ್ಷ್ಮ ಸಸ್ಯವೈವಿಧ್ಯತೆ, ಪ್ರಾಣಿಗಳು, ಪಕ್ಷಿಗಳು, ಸರಿಸೃಪಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಮಾತನಾಡಿ, ಅಂದಾಜು 15 ಹೆಕ್ಟೇರ್‌ ಆರಣ್ಯ ಪ್ರದೇಶವು ಬೆಂಕಿಗೆ ಆಹುತಿಯಾಗಿದೆ. ಸಮತಟ್ಟಾದ ಪ್ರದೇಶದಲ್ಲಿರುವ ಗಿಡಗಳಿಗೆ ಯಾವುದೆ ಹಾನಿಯು ಸಂಭವಿಸಿಲ್ಲ. ಗುಡ್ಡದ ಮೇಲಾºಗದಲ್ಲಿ ಬಾಧೆಯ ಹುಲ್ಲು ಮಾತ್ರ ಸಂಪೂರ್ಣವಾಗಿ ನಾಶವಾಗಿದೆ. ಗುಡ್ಡದ ರಕ್ಷಣೆಯ ಕುರಿತು ಸಾರ್ವಜನಿಕರಿಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಗುಡ್ಡ ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಂಡಿದೆ ಎಂದರು.

ಕಪ್ಪತ್ತಗುಡ್ಡದ ರಕ್ಷಣೆಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಕಪ್ಪತ್ತಗುಡ್ಡದ ಈ ಸಂಪತ್ತು ಉಳಿಯಬೇಕು ಇದನ್ನು ರಕ್ಷಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ. ಸುಜಾನ್‌ ಕಂಪನಿಯ ಪವನ್‌ ವಿದ್ಯುತ್‌ ಕಂಬಗಳಲ್ಲಿ ಶಾರ್ಟ್‌ ಸರ್ಕಿಟ್‌ ಉಂಟಾಗಿ ಬೆಂಕಿ ಬಿದ್ದಿರುವ ಘಟನೆಯು ನಡೆದಿದೆ. ಗಾಳಿ ವಿದ್ಯುತ್‌ ಕಂಪನಿಯ ವಿರುದ್ಧ ಅರಣ್ಯ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next