Advertisement

ಕಪಟ ನಾಟಕ ಪಾತ್ರಧಾರಿಯ ಹಾಡುಗಳ ಹಂಗಾಮಾ!

09:55 AM Nov 05, 2019 | Naveen |

ಯಾವುದೇ ಸಿನಿಮಾ ಆರಂಭಿಕವಾಗಿ ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟು ಹಾಕಿ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದುಕೊಳ್ಳೋದೇ ಹಾಡುಗಳ ಮೂಲಕ. ಆದರೆ ಕಥೆಗೆ ಪೂರಕವಾಗಿ ಅಂಥಾ ಮೋಡಿ ಮಾಡೋದು ಬಲು ತ್ರಾಸದಾಯಕ ಕೆಲಸ. ಆದರೆ ಅದರಲ್ಲಿ ಕಪಟ ನಾಟಕ ಪಾತ್ರಧಾರಿ ಚಿತ್ರದ ಸಂಗೀತ ನಿರ್ದೇಶಕ ಆದಿಲ್ ನದಾಫ್ ಗೆದ್ದಿದ್ದಾರೆ. ಒಂದೇ ಸಲಕ್ಕೆ ಭಿನ್ನವಾಸ ಸಂಗೀತದ ಪಟ್ಟುಗಳೊಂದಿಗೆ ಕಿವಿ ಸೋಕಿ ನೇರವಾಗಿ ಮನಸಿಗಿಳಿಯೋ ಹಾಡುಗಳನ್ನು ಸೃಷ್ಟಿಸುವ ಮೂಲಕ ನದಾಫ್ ಕನ್ನಡ ಚಿತ್ರರಂಗದ ಭರವಸೆಯ ಸಂಗೀತ ನಿರ್ದೇಶಕರಾಗಿಯೂ ನೆಲೆ ಕಂಡುಕೊಂಡಿದ್ದಾರೆ.

Advertisement

ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ಸಖತ್ ಸೌಂಡ್ ಮಾಡಿದ್ದೇ ಹಾಡುಗಳ ಮೂಲಕ. ಆರಂಭದಲ್ಲಿ ಆಡಿಯೋ ಬಿಡುಗಡೆಯಾಗಿ ಆ ನಂತರದಲ್ಲಿ ಲಿರಿಕಲ್ ವೀಡಿಯೋ ಸಾಂಗುಗಳು ಹೊರ ಬಂದಿದ್ದೇ ಕಪಟ ನಾಟಕ ಪಾತ್ರಧಾರಿ ರಾಗಗಳ ಮೂಲಕವೇ ಎಲ್ಲರನ್ನೂ ಪರವಶಗೊಳಿಸಿ ಬಿಟ್ಟಿದ್ದ. ಕಥೆಗೆ ಪೂರಕವಾದ ಸಾಹಿತ್ಯ ಮತ್ತು ಸಂಗೀತದ ಮೂಲಕ ಈ ಹಾಡುಗಳು ಸೃಷ್ಟಿಸಿರೋ ಹಂಗಾಮಾ ಈ ವರ್ಷದ ದಾಖಲೆಯೂ ಹೌದು. ಮಾಮೂಲಿ ಜಾಡನ್ನು ಮೀರಿಕೊಂಡಂತಿರೋ ಈ ಸಿನಿಮಾ ಹಾಡುಗಳೆಲ್ಲವೂ ಒಂದನ್ನೊಂದು ಮೀರಿಸುವಂತೆ ದೊಡ್ಡ ಮಟ್ಟದಲ್ಲಿಯೇ ಹಿಟ್ ಆಗಿವೆ.

ಹಸಿದಾ ಶಿಖನೂ ಬೇಟೆಯಾಡಿದೆ ಎಂಬ ಹಾಡಂತೂ ಉತ್ಕೃಷ್ಟ ಸಾಹಿತ್ಯ ಮತ್ತು ಅದಕ್ಕೆ ತಕ್ಕುದಾದ ಸಾಹಿತ್ಯದಿಂದ ಸಂಗೀತ ಪ್ರೇಮಿಗಳನ್ನು ಚಕಿತಗೊಳಿಸಿದೆ. ಇನ್ನು `ಯಾಕೆ ಅಂತ ಗೊತ್ತಿಲ್ಲ ಕಂಡ್ರಿ ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ ಎಂಬ ಹಾಡಂತೂ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ. ಹೀಗೆ ಹಾಡುಗಳು ತಾನೇ ತಾನಾಗಿ ಸರ್ವವ್ಯಾಪಿಯಾಗಿ ಬಿಟ್ಟರೆ ಯಾವ ಸಿನಿಮಾಗಳಿಗೇ ಆದರೂ ಗೆಲುವೆಂಬುದು ಸಲೀಸು. ಈ ನಿಟ್ಟಿನಲ್ಲಿ ನೋಡೋದಾದರೆ ಅದಕ್ಕೆ ತಕ್ಕುದಾದ ಕಂಟೆಂಟು ಹೊಂದಿರೋ ಕಪಟ ನಾಟಕ ಪಾತ್ರಧಾರಿಯ ಗೆಲುವು ನಿಶ್ಚಿತವೆಂಬಂತಿದೆ. ಬಾಲು ನಾಗೇಂದ್ರ ಮತ್ತು ಸಂಗೀತಾ ಭಟ್ ಜೋಡಿ ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಫೇಮಸ್ ಆಗಿ ಬಿಟ್ಟಿದೆ. ಈ ಗೆಲುವಿನ ಆಟ ಇದೇ ನವೆಂಬರ್ ಎಂಟನೇ ತಾರೀಕಿನಿಂದ ಶುಭಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next