Advertisement

ಕನ್ಯಾನ ಸರಸ್ವತಿ ವಿದ್ಯಾಲಯ: ಉಚಿತ ವೈದ್ಯಕೀಯ ಶಿಬಿರ

03:52 PM May 06, 2018 | |

ಕನ್ಯಾನ: ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಲಯನ್ಸ್‌ ಮತ್ತು ಲಿಯೊ ಕ್ಲಬ್‌, ಕದ್ರಿ ಹಿಲ್ಸ್‌, ಮಂಗಳೂರು ಮತ್ತು ಗುರು ಎಜುಕೇಶನ್‌ ಟ್ರಸ್ಟ್‌, ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಇವರ ಆಶ್ರಯದಲ್ಲಿ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಆಸ್ಪತ್ರೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

Advertisement

ಗುರು ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ವಿಘ್ನರಾಜ್‌ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಆಸ್ಪತ್ರೆಯ ವೈದ್ಯೆ ಡಾ| ನಿಶ್ಚಿತಾ ಉದ್ಘಾಟಿಸಿದರು. ಲಯನ್ಸ್‌ ಮತ್ತು ಲಿಯೊ ಕ್ಲಬ್‌ನ ಉಪಾಧ್ಯಕ್ಷ ಡಾ| ಸುರೇಶ್‌ ನೆಗಳಗುಳಿ ಅವರು, ಇಂತಹ ಸಾರ್ವಜನಿಕ ಉಪಯುಕ್ತ ಕೆಲಸಗಳನ್ನು ಹಳ್ಳಿ ಪ್ರದೇಶದಲ್ಲಿ ನಡೆಸಿ ಶ್ರೀ ಸರಸ್ವತಿ ವಿದ್ಯಾಲಯವು ಮಹತ್ತರವಾದ ಕೊಡುಗೆಯನ್ನು ನೀಡಿದೆ ಎಂದು ಅವರು ಹೇಳಿದರು.

ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕ ಈಶ್ವರ ಪ್ರಸಾದ್‌ ಪ್ರಸ್ತಾವಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಮಧುರಾ ಈಶ್ವರ ಪ್ರಸಾದ್‌ ಸ್ವಾಗತಿಸಿದರು. ಲಯನ್ಸ್‌ ಮತ್ತು ಲಿಯೊ ಕ್ಲಬ್‌ನ ಕಾರ್ಯದರ್ಶಿ ಶಂಕರ ನಾರಾಯಣ ಕಾರಂತ ವಂದಿಸಿದರು. ಶಿಕ್ಷಕಿ ಶ್ರೀಲತಾ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಹೃದ್ರೋಗ, ಕಿವಿ, ಮೂಗು, ಗಂಟಲು ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ಚಿಕಿತ್ಸೆ, ಮಧುಮೇಹ, ರಕ್ತ ಪರೀಕ್ಷೆ, ಔಷಧ ವಿತರಣೆ, ಸಂಪೂರ್ಣ ಆರೋಗ್ಯ ತಪಾಸಣೆ ಮೊದಲಾದವುಗಳ ಪ್ರಯೋಜನವನ್ನು 200ಕ್ಕೂ ಹೆಚ್ಚು ಮಂದಿ ಉಚಿತವಾಗಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next