Advertisement

ಕಂತಿಹೊಂಡ ಕಾಂಕ್ರೀಟ್‌, ಡಾಮರು ಘಟಕ ಪರಿಸರಕ್ಕೆ ಹಾನಿ: ಪ್ರತಿಭಟನೆ

12:26 PM Feb 23, 2017 | Team Udayavani |

ಕುಂದಾಪುರ: ಐಆರ್‌ಬಿ ಸಂಸ್ಥೆ  ಕುಂದಾಪುರ – ಕಾರವಾರ ಚತುಷ್ಪಥ  ಹೆದ್ದಾರಿ ಕಾಮಗಾರಿಗಾಗಿ ಅರೆಹೊಳೆಬಳಿಯ ಕಂತಿಹೊಂಡದಲ್ಲಿ ನಿರ್ಮಿಸಲಾದ ಕಾಂಕ್ರೀಟ್‌ ಹಾಗೂ ಡಾಮರು ಘಟಕದಿಂದ ಬರುವ ಧೂಳಿನಿಂದಾಗಿ ಪರಿಸರ ಹಾಳಾಗಿದ್ದಲ್ಲದೇ ಪರಿಸರದ ಎರಡು ರಸ್ತೆಗಳಿಗೆ ಹಾನಿಯಾಗಿದ್ದು ಅದರ ಬಗ್ಗೆ ಕೂಡಲೇ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ಅರೆಹೊಳೆ ಹಾಗೂ ಉಳ್ಳೂರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಈ ಪ್ಲಾಂಟ್‌ ಹೊರಸೂಸುವ ಜಲ್ಲಿಕಲ್ಲುಗಳು ಹಾಗೂ ಇತರ ವಸ್ತುಗಳಿಂದ ಪರಿಸರದ ಅರೆಹೊಳೆ ಹಾಗೂ ಉಳ್ಳೂರಿಗೆ ಸಾಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ಇಲ್ಲಿ ರಸ್ತೆ ಪುನರ್‌ ನಿರ್ಮಾಣ ಮಾಡಿಕೊಡಬೇಕು ಹಾಗೂ ಈ ಪ್ಲಾಂಟ್‌ ಸುತ್ತ  ಮೆಸ್‌ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಐಆರ್‌ಬಿ ಕಂಪನಿಯ ಕಾಮಗಾರಿ ಮೇಲುಸ್ತುವಾರಿ ಯೋಗೀಂದ್ರ ಅವರು ಈ ಬಗ್ಗೆ  ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹದಿನೈದು ದಿನದ ಒಳಗೆ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಹಕ್ಕಾಡಿ ಜಗದೀಶ ಪೂಜಾರಿ, ಪ್ರಕಾಶ್‌ ದೇವಾಡಿಗ, ಕಿಶೋರ್‌ ಶೆಟ್ಟಿ, ಸುಕೇಶ ದೇವಾಡಿಗ, ದಿನೇಶ್‌ ಆಚಾರ್‌, ರೋಶನ್‌ ಪೂಜಾರಿ ನೇತೃತ್ವ ವಹಿಸಿದ್ದು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next