Advertisement

ಪ್ಯಾನ್ ಇಂಡಿಯಾ ಫಿಕ್ಸ್ : ‘ಕಾಂತಾರ’ಹಿಂದಿ ಟ್ರೈಲರ್ ರೆಡಿ

07:24 PM Oct 06, 2022 | Team Udayavani |

ಬೆಂಗಳೂರು : ರಿಷಬ್ ಶೆಟ್ಟಿ ಅಭಿನಯದ ದೈವ ಶಕ್ತಿಯನ್ನು ಸಾರುವ ಸೂಪರ್ ಹಿಟ್ ಚಲನ ಚಿತ್ರ ‘ಕಾಂತಾರ’ಪ್ಯಾನ್ ಇಂಡಿಯಾ ಸಿನಿಮಾವಾಗುವತ್ತ ದಾಪುಗಾಲಿಡುತ್ತಿದ್ದು ಹಿಂದಿ ಟ್ರೈಲರ್ ಬಿಡುಗಡೆಗೆ ಸಿದ್ಧವಾಗಿದೆ.

Advertisement

”ದೈವತ್ವದಿಂದ ಮಂತ್ರಮುಗ್ಧರಾಗಲು ಸಿದ್ಧರಾಗಿ. ಸಾಕ್ಷಿ ಮತ್ತು ದೈವಿಕ ಶಕ್ತಿಯನ್ನು ಅನುಭವಿಸಿ. ಕಾಂತಾರ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9 ರಂದು ಬೆಳಗ್ಗೆ 9. 10 ಕ್ಕೆ ಬಿಡುಗಡೆ ಮಾಡಲಾಗುವುದು” ಎಂದು ಹೊಂಬಾಳೆ ಫಿಲ್ಮ್ಸ್ ಗುರುವಾರ ಟ್ವೀಟ್ ಮಾಡಿದೆ.

ಇದನ್ನೂ ಓದಿ :ಕಾಂತಾರ-2 ದೈವೇಚ್ಛೆಗೆ ಬಿಟ್ಟದ್ದು: ನಟ,ನಿರ್ದೇಶಕ ರಿಷಬ್‌ ಶೆಟ್ಟಿ

ಕರಾವಳಿ ಸೇರಿ ಬೆಂಗಳೂರಿನಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಹಲವರು ಟಿಕೆಟ್ ಸಿಗದೇ ನಿರಾಶರಾಗುತ್ತಿದ್ದಾರೆ.

“ನಾನು ಈ ಚಿತ್ರವನ್ನು ಹಾಕಿದ ದಿನ ಚಿತ್ರ ಥಿಯೇಟರ್‌ನಲ್ಲಿ ಹೌಸ್‌ಫುಲ್ ಆಗಿತ್ತು, ಇಂದೂ ಅದು ಹೌಸ್‌ಫುಲ್ ಆಯಿತು ಮತ್ತು ನಾನು ಈ ಚಿತ್ರವನ್ನು ಮುಂದುವರಿಸಲಿದ್ದೇನೆ ಎಂದು ಕಾಂತಾರ ಕುರಿತು ಮುಂಬೈ ಪ್ರದರ್ಶಕ ಮನೋಜ್ ದೇಸಾಯಿ ಹೇಳಿದ್ದಾರೆ. ಚಿತ್ರಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಇತರ ಭಾಷೆಗಳಿಗೂ ಶೀಘ್ರ ಡಬ್ಬಿಂಗ್ ನಡೆಯಲಿದೆ ಎನ್ನಲಾಗಿದೆ.

Advertisement

ಮಲಯಾಳ, ತೆಲುಗು, ತಮಿಳು ಭಾಷೆಗಳವರಿಂದ ಆ ಭಾಷೆಗಳಿಗೆ ಡಬ್ಬಿಂಗ್‌ಗೆ ಬೇಡಿಕೆ ಬರುತ್ತಿದ್ದು, ನಮ್ಮ ಪ್ರೊಡಕ್ಷನ್‌ ಹೌಸ್‌ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next