Advertisement

Bade Miyan Chote Miyan ಟ್ರೇಲರ್‌ನಲ್ಲಿ ಅಕ್ಷಯ್‌-ಟೈಗರ್‌ ಅಬ್ಬರ

02:07 PM Mar 31, 2024 | Team Udayavani |

ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌  ಹಾಗೂ ಟೈಗರ್‌ ಶ್ರಾಫ್ ನಟನೆಯ ಬಡೆ ಮಿಯಾನ್‌ ಚೋಟೆ ಮಿಯಾನ್‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್‌ ಇರುವ ಟ್ರೇಲರ್‌ನಲ್ಲಿ ಅಕ್ಷಯ್‌ ಹಾಗೂ ಟೈಗರ್‌ ಭರ್ಜರಿ ಆ್ಯಕ್ಷನ್‌ ಮೂಲಕ ಅಬ್ಬರಿಸಿದ್ದಾರೆ.

Advertisement

ಬಡೆ ಮಿಯಾನ್‌ ಚೋಟೆ ಮಿಯಾನ್‌ ಟ್ರೇಲರ್‌ನಲ್ಲಿ ಮೈ ಜುಮ್‌ ಎನಿಸುವ ಹೈ ಆ್ಯಕ್ಷನ್‌ ಸೀಕ್ವೆನ್ಸ್‌ ಹೈಲೆಟ್‌ ಆಗಿವೆ. ಖಳನಾಯಕನಾಗಿ ಪೃಥ್ವಿರಾಜ್‌ ಸುಕುಮಾರನ್‌ ಕಾಣಿಸಿಕೊಂಡಿದ್ದು, ಆದ್ರೆ ಟ್ರೇಲರ್‌ನಲ್ಲಿ ಅವರ ಮುಖವನ್ನೇ ರಿವೀಲ್‌ ಮಾಡದೇ ಚಿತ್ರತಂಡ ಸೀಕ್ರೆಟ್‌ ಕಾಯ್ದುಗೊಂಡಿದೆ. ಬಾಲಿವುಡ್‌ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್‌, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮುಂಬೈ, ಲಂಡನ್‌, ಅಬುಧಾಬಿ, ಸ್ಕಾಟ್ಲೆಂಡ್‌ ಮತ್ತು ಜೋರ್ಡಾನ್‌ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಿಗ್‌ ಬಜೆಟ್‌ನಲ್ಲಿ “ಬಡೇ ಮಿಯಾನ್‌ ಚೋಟೆ ಮಿಯಾನ್‌’ ಅನ್ನು ನಿರ್ಮಿಸಲಾಗಿದೆ. ಟೈಗರ್‌ ಜಿಂದಾ ಹೈ, ಸುಲ್ತಾನ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಟಾಸ್‌ ಜಫ‌ರ್‌ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next