ಬೆಂಗಳೂರು: ಭಾರೀ ಯಶಸ್ಸಿನೊಂದಿಗೆ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ರಿಷಭ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಿತ್ರ ಶುಕ್ರವಾರ ಜಿನೇವಾದಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಪ್ರದರ್ಶನ ಕಾಣಲಿದೆ. ಅದರಲ್ಲೂ ಅಪ್ಪು ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯ ದಿನವೇ ಪ್ರದರ್ಶನ ಕಾಣುತ್ತಿರುವುದು ವಿಶೇಷ.
ಇದನ್ನೂ ಓದಿ:ಕೆಸಿಆರ್ ಪುತ್ರಿ ಕವಿತಾ ಇಡಿ ವಿಚಾರಣೆ: ತೆಲಂಗಾಣದಲ್ಲಿ ಬಿಜೆಪಿ ವಿರುದ್ದ ಪೋಸ್ಟರ್ ವಾರ್
ಈಗಾಗಲೇ ಸ್ವಿಜರ್ಲೆಂಡ್‌ನ ಜಿನೇವಾಗೆ ಪ್ರಯಾಣ ಬೆಳೆಸಿರುವ ರಿಷಭ್ ಶೆಟ್ಟಿಯವರು, ವಿಶ್ವ ಸಂಸ್ಥೆಯ ಹಾಲ್ ನಂ.13(ಪಾಥೇ ಬಾಲೆಕ್ಸೆರ್ಟ್) ನಲ್ಲಿ ವಿಶ್ವಸಂಸ್ಥೆಯ ಸದಸ್ಯರೊಂದಿಗೆ ಸಿನಿಮಾ ವೀಕ್ಷಿಸಲಿದ್ದಾರೆ.
ಮೂಲಗಳ ಪ್ರಕಾರ, ಈಗಾಗಲೇ ರಿಷಭ್ ಶೆಟ್ಟಿಯವರು, ಸಿನಿಮಾ ಪ್ರದರ್ಶನಕ್ಕೆ ಬೇಕಾದ ಎಲ್ಲ ಸಿದ್ಧತೆ ಮುಗಿಸಿದ್ದಾರೆ. ಸಿನಿಮಾ ಮುಗಿದ ಮೇಲೆ ಈ ಚಿತ್ರಕ್ಕೂ ಮತ್ತು ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ಹೇಳಲಿದ್ದಾರೆ. ಜತೆಗೆ, ಪ್ರೇಕ್ಷಕರನ್ನು ಉದ್ದೇಶಿಸಿ ಕನ್ನಡದಲ್ಲೇ ಮಾತನಾಡಲಿದ್ದಾರೆ. ಬಳಿಕ ವಿಶ್ವಸಂಸ್ಥೆ ರಾಜತಾಂತ್ರಿಕರ ಜತೆ ಖಾಸಗಿ ಡಿನ್ನರ್ ನಲ್ಲಿಯೂ ಭಾಗಿಯಾಗಲಿದ್ದಾರೆ.
Related Articles
ರಿಷಭ್ ಶೆಟ್ಟಿಯವರ ಈ ಸಾಧನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಶ್ಲಾಘನೆ ವ್ಯಕ್ತವಾಗಿದೆ. ಬಿಜೆಪಿ ಕರ್ನಾಟಕದ ಟ್ವಿಟರ್ ಹ್ಯಾಂಡಲ್ ನಿಂದಲೂ ರಿಷಭ್ ಅವರಿಗೆ ಅಭಿನಂದನೆ ಸಲ್ಲಿಕೆಯಾಗಿದೆ.