Advertisement

Roopesh Shetty ‘ಅಧಿಪತ್ರ’ದಲ್ಲಿ ಕರಾವಳಿ ಸೊಗಡು

03:09 PM May 13, 2024 | Team Udayavani |

ರೂಪೇಶ್‌ ಶೆಟ್ಟಿ ನಾಯಕರಾಗಿರುವ “ಅಧಿಪತ್ರ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಕರಾವಳಿ ಭಾಗದ ಕಥೆ ಹೊತ್ತು ಬಂದಿರುವ ಅಧಿಪತ್ರ ಸಿನಿಮಾ ಮೊದಲ ತುಣುಕಿನಲ್ಲಿ ಕರಾವಳಿ ಭಾಗದ ವಿಶೇಷ ಆಚರಣೆ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತದ ಅಂಶಗಳನ್ನು ಒಳಗೊಂಡಿದ್ದು, ರೂಪೇಶ್‌ ಶೆಟ್ಟಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಯನ್‌ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.

Advertisement

ಚಿತ್ರದಲ್ಲಿ ಪ್ರಕಾಶ್‌ ತುಮಿನಾಡು, ಎಂ.ಕೆ. ಮಠ, ರಘು ಪಾಂಡೇಶ್ವರ್‌, ದೀಪಕ್‌ ರೈ, ಕಾರ್ತಿಕ್‌ ಭಟ್, ಅನಿಲ್‌ ಉಪ್ಪಾಲಹ, ಪ್ರಶಾಂತ್‌ ತಾರಾಬಳಗದಲ್ಲಿದ್ದು, ಜಾಹ್ನವಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಕೆ.ಆರ್‌. ಸಿನಿಕಂಬೈನ್ಸ್‌ ಬ್ಯಾನರ್‌ನಡಿ ದಿವ್ಯಾ ನಾರಾಯಣ್‌, ಕುಲದೀಪ್‌ ರಾಘವ್‌ ಲಕ್ಷ್ಮೇ ಗೌಡ ಚಿತ್ರ ನಿರ್ಮಾಣ ಮಾಡಿದ್ದು, ಕಾರ್ತಿಕ್‌ ಶೆಟ್ಟಿ ಹಾಗೂ ಸತೀಶ್‌ ಶೆಟ್ಟಿ ಸಹ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. ಶೂಟಿಂಗ್‌ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿಯೇ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next