ನವದೆಹಲಿ:ಪ್ರವಾದಿ ಮಹಮ್ಮದ್ ಅವರ ನಿಂದನೆ ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನಡೆದ ಕಾನ್ಪುರ್ ಹಿಂಸಾಚಾರ ಪೂರ್ವ ಯೋಜಿತ ಪಿತೂರಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಇದನ್ನೂ ಓದಿ:ಅನುಕಂಪ ಗಿಟ್ಟಿಸಿಕೊಳ್ಳಲು ನಕಲಿ ಗಾಂಧಿ ಕುಟುಂಬದ ಹೊಸ ನಾಟಕ ಎಂದ ಬಿಜೆಪಿ
ಲಕ್ನೋದಲ್ಲಿ ಎರಡು ದಿನಗಳ ಕಾಲ ನಡೆದ ಸಭೆ ಮುಕ್ತಾಯಗೊಂಡ ನಂತರ ಮಾತನಾಡಿದ ವಿಎಚ್ ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಡೆ, ಇಂತಹ ಪಿತೂರಿಗಳಿಗೆ ಪೊಲೀಸರು ಮತ್ತು ಸಮಾಜ ತಕ್ಕ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿರುವುದಾಗಿ ತಿರುಗೇಟು ನೀಡಿದ್ದಾರೆ.
ಸಭೆಯಲ್ಲಿ ಸ್ವಾಮೀಜಿಗಳು ಹಿಂಸಾಚಾರದ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ದೂರಿರುವುದಾಗಿಪರಾಡೆ ತಿಳಿಸಿದ್ದಾರೆ. ಬಿಜೆಪಿಯ ನೂಪರ್ ಶರ್ಮಾ ಪ್ರವಾದಿ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೀಡಾಗಿತ್ತು.
ಜೂನ್ 03ರಂದು ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ನಡೆದ ನಂತರ ಪ್ರತಿಭಟನೆ ವೇಳೆ ಕಾನ್ಪುರ್ ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.