Advertisement

ಕಾನ್ಪುರ:ಕಟ್ಟಡ ಕುಸಿದು 7ಸಾವು; SP ಲೀಡರ್‌,ಕಂಟ್ರಾಕ್ಟರ್‌ ಬಂಧನ 

02:47 PM Feb 02, 2017 | Team Udayavani |

ಕಾನ್ಪುರ : ನಗರದಲ್ಲಿ ಬುಧವಾರ ರಾತ್ರಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ 7 ಮಂದಿ ಕಾರ್ಮಿಕರು ದಾರುಣವಾಗಿ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಅವಘಡಕ್ಕೆ ಸಂಬಂಧಿಸಿ ಕಟ್ಟಡದ ಮಾಲಿಕ ಎಸ್‌ಪಿ ನಾಯಕ ಮೆಹ್‌ತಾಬ್‌ ಆಲಮ್‌ ಮತ್ತು ಕಟ್ಟಡದ ಕಂಟ್ರಾಕ್ಟರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದು, ಅವಶೇಷಗಳಡಿ ಇನ್ನು ಕೆಲವರು ಸಿಲುಕಿರುವ ಸಾಧ್ಯತೆಗಳಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ಸಿಬಂದಿಗಳು ಭಾಗಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next