Advertisement

ಕಣ್ಣೂರು ಬಾಂಬ್‌ ಸ್ಫೋಟ: ಪೊಲೀಸರಿಂದ ನಾಲ್ವರ ಸೆರೆ

01:38 AM Apr 07, 2024 | Team Udayavani |

ಕಣ್ಣೂರು: ಕೇರಳದ ಕಣ್ಣೂರು ಸಮೀಪದ ಪಾಣೂರು ಬಳಿ ಶುಕ್ರವಾರ ಕಚ್ಚಾ ಬಾಂಬ್‌ ಸ್ಫೋಟ ಸಂಭವಿಸಿದ ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರೂ ಘಟನೆ ನಡೆದ ವೇಳೆ ಸ್ಥಳದಲ್ಲಿದ್ದರು. ಅವರು ಸಿಪಿಎಂ ಕಾರ್ಯಕರ್ತರು ಅಥವಾ ಬೆಂಬಲಿಗರು ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರದ ಘಟನೆಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರೂ ಕೂಡ ಸಿಪಿಎಂಗೆ ಸೇರಿದವರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಪಿಎಂ ನಾಯಕ ಎಂ.ವಿ.ಗೋವಿಂದನ್‌ ಪಕ್ಷಕ್ಕೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next