Advertisement
ಹೌದು, “ರಾಬರ್ಟ್’ ಚಿತ್ರದಲ್ಲಿ ಬರುವ “ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ… ನೀನಾ ಹೇಳಲೇ ಮಗನ, ನಿನ್ನ ನೋಡಿ ಸುಮ್ನೆ ಹೆಂಗಿರ್ಲಿ…’ ಎಂಬ ಉತ್ತರ ಕನ್ನಡ ಸೊಗಡಿನ ಹಾಡನ್ನು ನೀವೆಲ್ಲ ಕೇಳಿರುತ್ತೀರಿ. ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಇದೀಗ ಈ ಹಾಡಿನ ಲಿರಿಕಲ್ ವಿಡಿಯೋ ಯು-ಟ್ಯೂಬ್‌ನಲ್ಲಿ ಎರಡು ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.
Related Articles
Advertisement
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಶ್ರೇಯಾ ಘೋಷಾಲ್, “ಕಣ್ಣು ಹೊಡಿಯಾಕ… ಹಾಡು 20 ಮಿಲಿಯನ್ ವೀವ್ಸ್ ಪಡೆದು ಕೊಂಡಿದೆ. ಮೊದಲ ಬಾರಿಗೆ ನಾನು ಉತ್ತರ ಕರ್ನಾಟಕದ ಶೈಲಿಯಲ್ಲಿ ಈ ಹಾಡು ಹೇಳಿದ್ದೇನೆ. ಎಂತಹ ಸುಂದರವಾದ ಭಾಷೆ ಇದು. ಈ ಹಾಡಿನಿಂದ ನಾನು ತುಂಬ ಖುಷಿಪಟ್ಟಿದ್ದೇನೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಹಾಡು ಬರೆದ ಯೋಗರಾಜ್ ಭಟ್, ನಟ ದರ್ಶನ್, ನಟಿ ಆಶಾ ಭಟ್ ಅವರಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.
ಇನ್ನು ಶ್ರೇಯಾ ಘೋಷಾಲ್ ಟ್ವೀಟ್‌ಗೆ ಪ್ರತಿಯಾಗಿ ರೀ-ಟ್ವೀಟ್ ಮಾಡಿರುವ ನಿರ್ದೇಶಕ ಯೋಗರಾಜ್ ಭಟ್ ಕೂಡ “ಅಸಾಧಾರಣ ಕಂಠದ ಒಡತಿ, ಸರಳ ಸುಂದರಿ, ನಾಡಿನ ಅತ್ಯಂತ ನೆಚ್ಚಿನ ಗಾಯಕಿ ಶ್ರೇಯಾ ಘೋಷಾಲ್ ಅವರಿಗೆ ಈ ಹಾಡು ಹಾಡಿದ್ದಕ್ಕೆ ನಮನ ಮತ್ತು ಧನ್ಯವಾದ’ ಎಂದಿದ್ದಾರೆ. ಇನ್ನು ಶ್ರೇಯಾ ಘೋಷಾಲ್ ಅವರಿಗೆ ಧನ್ಯವಾದ ಹೇಳಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, “ನಿಮ್ಮ ಅದ್ಭುತ ಧ್ವನಿಯಿಂದ ಇಂತಹ ಮ್ಯಾಜಿಕ್‌ಗಳು ಸೃಷ್ಟಿಯಾಗುತ್ತವೆ’ ಎಂದಿದ್ದಾರೆ. “ರಾಬರ್ಟ್’ ನಾಯಕ ನಟಿ ಆಶಾ ಭಟ್ ಕೂಡ “ನಿಮ್ಮ ಧ್ವನಿ ಮತ್ತೂಮ್ಮೆ ಮ್ಯಾಜಿಕ್ ಮಾಡಿದೆ’ ಎಂದಿದ್ದಾರೆ. ಶ್ರೇಯಾ ಖುಷಿಯಿಂದ ಮಾಡಿದ ಟ್ವೀಟ್‌ಗೆ ಚಿತ್ರತಂಡ ಕೂಡ ಅಭಿನಂದನೆ ತಿಳಿಸಿದೆ.
ಒಟ್ಟಾರೆ ಶ್ರೇಯಾ ಉತ್ತರ ಕರ್ನಾಟಕ ಶೈಲಿಯ ಹಾಡು ಸೂಪರ್ ಹಿಟ್ ಆಗಿದ್ದು, ಮುಂದಿನ ದಿನಗಳಲ್ಲಿ ಶ್ರೇಯಾ ಧ್ವನಿಯಲ್ಲಿ ಇನ್ನಷ್ಟು ಇಂಥದ್ದೇ ಹಾಡುಗಳು ಮೂಡಿಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಕೇಳುಗರು.