Advertisement

ಆದರ್ಶ ರೈಲು ನಿಲ್ದಾಣವಾಗಿ ಕಾಣಿಯೂರು: ನಳಿನ್‌

12:30 AM Jan 18, 2019 | Team Udayavani |

ಕಾಣಿಯೂರು: ಜಿಲ್ಲೆಯ 2ನೇ ಆದರ್ಶ ರೈಲು ನಿಲ್ದಾಣವಾಗಿ ಕಾಣಿಯೂರು ರೈಲ್ವೇ ನಿಲ್ದಾಣ ಅಭಿವೃದ್ದಿಗೊಳ್ಳಲಿದೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

Advertisement

ಅವರು ಗುರುವಾರ ಕಾಣಿಯೂರು ಲಕ್ಷ್ಮೀನರಸಿಂಹ ಭಜನ ಮಂದಿರದ‌ಲ್ಲಿ ನಡೆದ ಬೆಳಂದೂರು ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಜಿಲ್ಲೆಯ ಮೊದಲ ಆದರ್ಶ ರೈಲ್ವೇ ನಿಲ್ದಾಣವಾಗಿ ಕಬಕ-ಪುತ್ತೂರು ಅಭಿವೃದ್ದಿಯಾಗಿದೆ.2 ನೇ ಆದರ್ಶ ರೈಲ್ವೇ ನಿಲ್ದಾಣವಾಗಿ ಕಾಣಿಯೂರು ರೈಲ್ವೇ ನಿಲ್ದಾಣ ಅಭಿವೃದ್ದಿಯಾಗಲಿದೆ.ಮಂಗಳೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ ರೈಲು ಓಡಾಟ ಶೀಘ್ರದಲ್ಲೆ ಆಗಲಿದೆ.ಕೆಲವೊಂದು ತಾಂತ್ರಿಕ ತೊಂದರೆಗಳು ನಿವಾರಣೆಯಾದ ಬಳಿಕ ಈ ಪ್ರಕ್ರಿಯೆಗೆ ವೇಗ ಸಿಗಲಿದೆ ಎಂದರು.

ಜ.25 :  ಜಿಲ್ಲೆಗೆ  ಧರ್ಮೇಂದ್ರ ಪ್ರಧಾನ್‌
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ  ಅಡುಗೆ ಅನಿಲ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶ ಜ.25ರಂದು ಬಿಸಿರೋಡಲ್ಲಿ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಪಾಲ್ಗೊಳ್ಳುವರು.ಕೇಂದ್ರ ಸರಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರಿಗೆ ಇದೆ.ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ .ಕೇಂದ್ರ ಸರಕಾರದ ಯೋಜನೆಯ ಸವಲತ್ತುಗಳು ವಿವಿಧ ಯೋಜನೆಗಳ ಮೂಲಕ  ಪ್ರತೀ ಮನೆಮನೆಗೂ ತಲುಪಿದೆ ಎಂದರು.

ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಗೋಪಾಲಕೃಷ್ಣ  ಹೇರಳೆ ಮುಂದಿನ ಚುನಾವಣೆಯ ಕಾರ್ಯಯೋಜನೆ ಹಾಗೂ ಉಜ್ವಲ ಸಮಾವೇಶದ ಕುರಿತು ವಿವರಣೆ ನೀಡಿದರು.

Advertisement

ವೇದಿಕೆಯಲ್ಲಿ  ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್‌ ವಳಲಂಬೆ,ಬೆಳಂದೂರು ಶಕ್ತಿ ಕೇಂದ್ರದ ವಿವಿಧ ಬೂತ್‌ಗಳ ಪ್ರಭಾರಿಗಳಾದ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್‌ ರೈ ಕೆಡೆಂಜಿ,ಮಂಡಲ ಕಾರ್ಯದರ್ಶಿ ದಿನೇಶ್‌ ಮೆದು,ಗ್ರಾ.ಪಂ.ಸದಸ್ಯ ಗಣೇಶ್‌ ಉದನಡ್ಕ ಉಪಸ್ಥಿತರಿದ್ದರು.

ಸಭೆಯಲ್ಲಿ ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ್‌,ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ,ತಾ.ಪಂ.ಸದಸ್ಯೆ ಲಲಿತಾ ಈಶ್ವರ್‌,ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುನಂದಾ ಬಾರ್ಕುಳಿ,ಉಪಾಧ್ಯಕ್ಷ ಸದಾನಂದ ಆಚಾರ್ಯ,ಬಿಜೆಪಿ ಮಂಡಲ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಶ್ರಫ್‌ ಕಾಸಿಲೆ,ಕಾಣಿಯೂರು ,ಸವಣೂರು,ಬೆಳಂದೂರು ಗ್ರಾ.ಪಂ.ಸದಸ್ಯರು ,ಸವಣೂರು ಸಿಎ ಬ್ಯಾಂಕ್‌,ಚಾರ್ವಾಕ ಸಿಎ ಬ್ಯಾಂಕ್‌,ಆಲಕಾರು ಸಿ.ಎ ಬ್ಯಾಂಕ್‌, ಸವಣೂರು,ಚಾರ್ವಾಕ,ಕಾಣಿಯೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಳಂದೂರು ಶಕ್ತಿ ಕೇಂದ್ರ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು ಸ್ವಾಗತಿಸಿ,ಕಾರ್ಯದರ್ಶಿ ದಯಾನಂದ ಆಲಡ್ಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next