Advertisement

ಕನ್ನಡಿಗರ ಮೇಲೆ ಹಲ್ಲೆ : ಕ್ರಮಕ್ಕೆ ಗೃಹ ಸಚಿವರ ಸೂಚನೆ

03:37 PM Oct 20, 2017 | Team Udayavani |

ಬೆಂಗಳೂರು: ತಮಿಳು ಚಿತ್ರನಟರ ಪೋಸ್ಟರ್‌ಗಳಿಗೆ ಆಕ್ಷೇಪ ಎತ್ತಿದ್ದ ಕನ್ನಡಿಗರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ  ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿರುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ  ಹೇಳಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಸಂಪಿಗೆ ಥಿಯೇಟರ್‌ ಬಳಿ ಯಾವ ಕಾರಣಕ್ಕಾಗಿ ಗಲಾಟೆ ನಡೆಯಿತು ಎನ್ನುವುದು ಗೊತ್ತಿಲ್ಲ.  ಮಾಧ್ಯಮಗಳ ಮೂಲಕ ಸುದ್ದಿ ತಿಳಿಯಿತು. ಹೀಗಾಗಿ ಗಲಾಟೆಯಾಗದಂತೆ ನೋಡಿಕೊಳ್ಳಲು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ. ಅಲ್ಲದೇ ಹಲ್ಲೆ ಮಾಡಿದವರ ಮೇಲೆಯೂ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.

ಇದೇ ವೇಳೆ, ಗೋವುಗಳನ್ನು ಸಾಗಿಸುವವರ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದ ಟೆಕ್ಕಿ ನಂದಿನಿ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಭೂಮಿ ಮೇಲೆ 84 ಲಕ್ಷ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಹಸು ಅಷ್ಟೇ ಅಲ್ಲ  ಎಲ್ಲ  ಜೀವಿಗಳನ್ನು ಸಮಾನವಾಗಿ ನೋಡಬೇಕು ಎಂದರು.

ದೀಪಾವಳಿ ಆಚರಣೆ ಇಲ್ಲ: ಹದಿನೇಳು ವರ್ಷಗಳ ಹಿಂದೆ ದೀಪಾವಳಿಯ ದಿನ ನಮ್ಮ ತಂದೆ ನಿಧನ ಹೊಂದಿದ ಕಾರಣ ನಮ್ಮ ಮನೆಯಲ್ಲಿ ದೀಪಾವಳಿ ಆಚರಣೆ ಮಾಡುತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next