Advertisement

ಬೆಳಗಾವಿ ಪಾಲಿಕೆಯಲ್ಲಿ ಕನ್ನಡಿಗರ ಪಾರುಪತ್ಯ

03:45 AM Jul 02, 2017 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆಯ ನಾಲ್ಕು ವಿವಿಧ ಸ್ಥಾಯಿ ಸಮಿತಿಗಳ ಪೈಕಿ ಕನ್ನಡ ಭಾಷಿಕ ಸದಸ್ಯರು ಮೂರು ಸ್ಥಾನಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹಲವು ವರ್ಷಗಳ ಬಳಿಕ ಪಾಲಿಕೆಯಲ್ಲಿ ಕನ್ನಡಿಗರು ಪಾರುಪತ್ಯ ಸಾಧಿ ಸಿದ್ದಾರೆ. 

Advertisement

ಪಾಲಿಕೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ಎಂಇಎಸ್‌ಗೆ ಕೇವಲ ಒಂದು ಸ್ಥಾನ ದೊರೆತು ಮುಖಭಂಗ ಅನುಭವಿಸಿದೆ. ಪಾಲಿಕೆಯ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಮಾತ್ರ ಎಂಇಎಸ್‌ ಪಾಲಾಗಿದೆ. ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಂಜಯ ಸವ್ವಾಶೇರಿ, ಲೆಕ್ಕಪತ್ರ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸರಳಾ ಹೇರೇಕರ, ನಗರ ಯೋಜನೆ ಹಾಗೂ ನಗರ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಿಂಟು ಸಿದ್ದಕಿ, ಎಂಇಎಸ್‌ ಸದಸ್ಯ ರಾಜು ಬಿರ್ಜೆ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next