Advertisement

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

01:29 PM May 16, 2022 | Team Udayavani |

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಶಿವಾಸ್‌ ಪರಿವಾರದ ಸಹಯೋಗದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಇದರೊಂದಿಗೆ ಅತಿಥಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯ ಕ್ರಮವು ಶನಿವಾರ ಪೂರ್ವಾಹ್ನ ಅಂಧೇರಿ ಪೂರ್ವದ ಲಕ್ಷ್ಮೀ ಇಂಡಸ್ಟ್ರೀಯಲ್‌ ಎಸ್ಟೇಟ್‌ನ ಶಿವಾಸ್‌ ಅಕಾಡೆಮಿ ಸಭಾಗೃಹದಲ್ಲಿ ಜರಗಿತು.

Advertisement

ಮುಖ್ಯ ಅತಿಥಿಯಾಗಿದ್ದ ಶಿವಾಸ್‌ ಹೇರ್‌ ಡಿಸೈನರ್ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಮಾತನಾಡಿ, ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು, ಸದೃಢ ಸಮಾಜ ರೂಪಿಸುವ ಕೆಲಸ ಮಾಡುತ್ತಾರೆ. ಇಂತಹ ಪತ್ರಕರ್ತರಿಂದ ನಾನು ಪ್ರೇರಿತನಾಗಿರುವೆ. ನಮ್ಮ ಸಮಾಜ ಸೇವೆಯ ನ್ನು ಗುರುತಿಸುವಲ್ಲಿ ಪತ್ರಕರ್ತರ ಸಹ ಯೋಗ ಮುಖ್ಯವಾದುದು ಎಂದರು.

ಪ್ರಧಾನ ಅಭ್ಯಾಗತರಾಗಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಇಂದಾಜೆ ಮಾತನಾಡಿ, ನಾವು ಮುಂಬಯಿ ಯಲ್ಲಿ ನಾಲ್ಕನೇ ಬಾರಿ ನಡೆಸುತ್ತಿರುವ ಕಾರ್ಯಕ್ರಮ ಇದಾಗಿದೆ. ಗ್ರಾಮೀಣ ಪ್ರದೇಶದ ಅದರಲ್ಲೂ ದ.ಕ. ಪತ್ರ ಕರ್ತರಿಗೆ ಮುಂಬಯಿಯಲ್ಲಿ  ವೇದಿಕೆ

ಒದಗಿಸುತ್ತಾ ಬಂದಿರುವ ಕಪಸಮ ತಂಡಕ್ಕೆ ಅದರಲೂ ಕಪಸಮದ ಅಧ್ಯಕ್ಷರ ಕಾರ್ಯ ಅಭಿನಂದನೀಯ. ಮಾತಾಪಿತರ ಸೇವೆಗೆ ಶಿವರಾಮ ಭಂಡಾರಿ ರಾಷ್ಟ್ರಕ್ಕೆ ಮಾದರಿಯಾಗಿ ದ್ದಾರೆ. ಬಡತನ ಶಾಪವಲ್ಲ, ಅದೊಂದು ವರ ಎಂದು ತೋರ್ಪಡಿಸಿದ ಸಾಧಕರೇ ಶಿವರಾಮ ಭಂಡಾರಿ. ಶಿವಾಸ್‌ ಸಲ್ಯೂಟ್‌ ರಾಷ್ಟ್ರದ ಯೋಧರಿಗೆ ತೋರುವ ಗೌರವ ನಮ್ಮೆಲ್ಲರಿಗೆ ಪ್ರೇರಕ ವಾಗಿದೆ. ಅವರು 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೇಶವಿನ್ಯಾಸದ ತರಬೇತಿ ನೀಡಿರುವುದು ಪ್ರೇರಣಾದಾ ಯಕವಾಗಿದೆ. ನಮ್ಮೂರ ಹುಡುಗರ ಮಹಾತ್ಕಾರ್ಯ ಎಲ್ಲರಿಗೂ ಸ್ಫೂರ್ತಿ ಎಂದು ತಿಳಿಸಿದರು.

ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಪತ್ರಕರ್ತರ ಒಂದು ಸಣ್ಣ ಅಧಿವೇಶನ ಇದಾಗಿದೆ. ಪತ್ರಕರ್ತರು ಚಳವಳಿಯ ರೂಪದಲ್ಲಿ ರುವುದರೊಂದಿಗೆ ಅವರಲ್ಲಿ ಸಾಮಾ ಜಿಕ ಕಳಕಳಿ ಇರಬೇಕು ಎಂದರು.

Advertisement

ಪ್ರಧಾನ ಅಭ್ಯಾಗತರಾಗಿ ಆಗಮಿ ಸಿದ್ದ ಉಪಾಧ್ಯಕ್ಷ ಭಾಸ್ಕರ್‌ ರೈ ಕಟ್ಟಾ ಮಾತನಾಡಿ, ಮುಂಬಯಿಗರು ಕರ್ಮ ಭೂಮಿಯೊಂದಿಗೆ ಜನ್ಮಭೂಮಿಗಾಗಿ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಅವರ ಕಾರ್ಯವು ಮಾನವೀಯತೆಗೆ ಮೀರಿದ್ದು, ಇದೇ ದ.ಕ ತುಳುನಾಡ ಜನರ ವೈವಿಧ್ಯತೆಯಾಗಿದೆ ಎಂದರು.

ಪ್ರಧಾನ ಅಭ್ಯಾಗತರಾಗಿದ್ದ ಕೋಶಾಧಿಕಾರಿ ಬಿ.ಎನ್‌. ಪುಷ್ಪರಾಜ್‌ ಮಾತನಾಡಿ, ಮುಂಬಯಿಗರು ಕರಾವಳಿ ಜನತೆಗೆ ಸ್ಫೂರ್ತಿದಾಯಕ. ಅಕ್ಷಿ ಸಾಕ್ಷಿ ಪತ್ರಕರ್ತರಿಗೆ ಮುಖ್ಯ ವಾದಾಗ ಪತ್ರಿಕಾ ಗೌರವ, ಘನತೆ ಹೆಚ್ಚುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್‌ ಬಂಟ್ವಾಳ್‌ ಮಾತನಾಡಿ, ಪತ್ರಕರ್ತರಲ್ಲಿ ಮತ ಭೇದಗಳು ಸಲ್ಲದು. ನಾಡನ್ನು ತಿದ್ದುವ ಪತ್ರಕರ್ತರು ಬುದ್ಧಿವಂತ ಪ್ರಜೆಗಳಾಗಬೇಕು. ಬರವಣಿಗೆ ಮೂಲಕ ಬದಲಾವಣೆ, ಸಾಮರಸ್ಯದ ಮೂಲಕ ಸಾಂಘಿಕತೆಗೆ ಕಾರಣಕರ್ತರಾಗಬೇಕು ಎಂದರು.

ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ದಯಾ ಕುಕ್ಕಾಜೆ, ಲಕ್ಷ್ಮೀ ನಾರಾಯಣ ರಾವ್‌, ಖಲೀಂ ಸೇರಾಜೆ, ಜೀವನ್‌ ಬಿ.ಎಸ್‌., ಮೋಹನ್‌ ಕುತ್ತಾರ್‌, ಶಶಿಧರ್‌ ಡಿ. ಬಂಗೇರ, ಸಂದೀಪ್‌ ಸಾಲ್ಯಾನ್‌, ಆರಿಫ್‌ ಕಲಕಟ್ಟಾ, ವಿಭಾ ಎಸ್‌. ನಾಯಕ್‌ ಸಂವಾದದಲ್ಲಿ ಭಾಗವಹಿ ಸಿದ್ದರು. ಇತ್ತೀಚೆಗೆ ಷಷ್ಠ Âಬ್ಧಪೂರ್ತಿ ಸಂಭ್ರಮ ಆಚರಿಸಿದ ಶಿವರಾಮ ಭಂಡಾರಿ ಅವರನ್ನು ಪತ್ರಕರ್ತರು ಸಮ್ಮಾನಿಸಿದರು.

ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಎಸ್‌. ಸುವರ್ಣ ಸ್ವಾಗತಿಸಿ, ಪ್ರಸ್ತಾವನೆಗೈದು, ಕಳೆದ 12 ವರ್ಷಗಳಿಂದ ಕಾರ್ಯನಿರ್ವ ಹಿಸುತ್ತಾ ಬಂದ ಪತ್ರಕರ್ತ ಸಂಘವು ಸದಸ್ಯರ ಸಮಸ್ಯೆ ಬಗೆಹರಿಸುವ ಕಾರ್ಯದಲ್ಲಿಯೂ ನಿರತವಾಗಿದೆ. ಕೊರೊನಾ ಅವಧಿಯಲ್ಲಿಯೂ ಸಂಘವು ಸದಸ್ಯರ ಬೆಂಬಲದಲ್ಲಿ  ಆರ್ಥಿಕ ನೆರವು ನೀಡುವ ಕಾರ್ಯ ಮಾಡಿದೆ ಎಂದರು.

ಗುಲಾಬಿ ಕೃಷ್ಣ ಟ್ರಸ್ಟ್‌ನ ವಿಶ್ವಸ್ತ ಸದಸ್ಯೆ , ಕಪಸಮ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್‌ ಪೂಜಾರಿ ನಿಡ್ಡೋಡಿ, ಅನಿತಾ ಪಿ. ಪೂಜಾರಿ ತಾಕೋಡೆ, ವಿಶೇಷ ಆಮಂತ್ರಿತ ಸದಸ್ಯೆ ಸವಿತಾ ಎಸ್‌. ಶೆಟ್ಟಿ, ಸದಸ್ಯರಾದ ಶ್ರೀನಿವಾಸ ಜೋಕಟ್ಟೆ, ಗುಲಾಬಿ ಕೃಷ್ಣ ಟ್ರಸ್ಟ್‌ನ ವಿಶ್ವಸ್ತ ಸದಸ್ಯೆಯರಾದ ಅನುಶ್ರೀ ಎಸ್‌. ಭಂಡಾರಿ, ಶ್ವೇತಾ ರಘು ಭಂಡಾರಿ, ಶಿವಾಸ್‌ ಪರಿವಾರದ ರಘು ಭಂಡಾರಿ, ರವಿ ಭಂಡಾರಿ, ಮೆಲಿಸಾ ಡಿ’ಕೋಸ್ಟಾ, ಸಿಸಿಲಿಯಾ ಸಿಕ್ವೇರಾ, ಮೊಹ್ಮದ್‌ ಇಲಿಯಾಸ್‌ ಮತ್ತಿತರರಿದ್ದರು.

ದಿ| ಗುಲಾಬಿ ಕೃಷ್ಣ ಭಂಡಾರಿ ಅವರಿಗೆ ಮಾಲಾರ್ಪಣೆ ಕಾರ್ಯ ಕ್ರಮ ನಡೆಯಿತು. ವಿಶೇಷ ಆಮಂತ್ರಿತ ಸದಸ್ಯ ಸಾ. ದಯಾ (ದಯಾನಂದ್‌ ಸಾಲ್ಯಾನ್‌) ಅತಿಥಿ ಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಕಪಸಮ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್‌ ಪೂಜಾರಿ ನಿಡ್ಡೋಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next