Advertisement

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ :ಕ್ರಿಕೆಟ್‌ ಪಂದ್ಯಾಟ

04:01 PM Jan 28, 2018 | Team Udayavani |

ಮುಂಬಯಿ: ಇಂದಿನ ಬದಲಾವಣೆಯ ತಾಂತ್ರಿಕ ಯುಗದಲ್ಲಿ ಪಾರಂಪರಿಕ ವೈಶಿಷ್ಟéಗಳನ್ನು ಕಾಪಿಡುವಲ್ಲಿ ಪತ್ರಕರ್ತರ ಸಹಕಾರ ಅನಿವಾರ್ಯವಾಗಿದೆ. ಶಿಸ್ತು, ಪ್ರಮಾಣಿಕತೆಯಿಂದ ದುಡಿಯುವ ಮನಸ್ಸು ನಮ್ಮದಾಗಿರಲಿ. ಕುಂದು ಕೊರತೆಗಳನ್ನು ನಿವಾರಿಸಿ ಯಶಸ್ಸಿನ ದಾರಿಯಾದ ಸಾಮಾಜಿಕ ಸಂಘಟನೆಗೆ ಕೈಜೋಡಿಸೋಣ ಎಂದು ಮೀರಾ-ಭಾಯಂದರ್‌ ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಜ. 26 ರಂದು ಭಾಯಂದರ್‌ ಪೂರ್ವದ ಸಚಿನ್‌ ತೆಂಡೂಲ್ಕರ್‌ ಮೈದಾನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಮಾನೋತ್ಸವದ ಅಂಗವಾಗಿ ಸದಸ್ಯರಿಗೆ ಆಯೋಜಿಸಿದ್ದ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಾಟವನ್ನು ಉದ್ಘಾಟಿಸಿ  ಮಾತನಾಡಿ,  ತುಳು-ಕನ್ನಡಿಗರ ಎಲ್ಲಾ ಕಾರ್ಯಕ್ರಮಗಳನ್ನು ಚಾಚುತಪ್ಪದೆ ಮರುದಿನ ಕನ್ನಡಿಗರ ಕೈಗೆ ತಲುಪಿಸುವ ಪತ್ರಕರ್ತ ಹೊಣೆಗಾರಿಕೆಯನ್ನು ಮೆಚ್ಚಬೇಕು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಒಗ್ಗಟ್ಟು ಮೂಡುತ್ತದೆ. ಸಂಸ್ಥೆಯ ದಶಮಾನೋತ್ಸವದ ಕಾರ್ಯಯೋಜನೆಗಳು ಯಶಸ್ಸನ್ನು ಕಾಣುವಂತಾಗಲಿ ಎಂದು ನುಡಿದರು.

ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿದ ಮೀರಾ-ಭಾಯಂದರ್‌ ಬಂಟ್ಸ್‌ ಫೋರಂನ ಅಧ್ಯಕ್ಷ ಜಯಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ದೈಹಿಕ, ಮಾನಸಿಕ, ಬೌದ್ಧಿಕ, ಸಮತೋಲನಗಳು ಕ್ರೀಡೆ ಮತ್ತು ವ್ಯಾಯಾಮದಿಂದ ಲಭಿಸುತ್ತದೆ. ಒತ್ತಡ ನಿವಾರಣೆಯ ಇಂತಹ ಕಾರ್ಯಕ್ರಮಗಳು ಪ್ರತೀ ವರ್ಷ ನಡೆಯುತ್ತಿರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ್‌ ಪಾಲೆತ್ತಾಡಿ ಇವರು ಧ್ವಜಾರೋಹಣಗೈದು ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿ ಮಾತನಾಡಿ, ದಿನಪೂರ್ತಿ ನಡೆದ ಪಂದ್ಯಾಟವು ಒಗ್ಗಟ್ಟಿನ ಸಂಕೇತವಾಗಿ ಎಂದು ನುಡಿದು ಕ್ರೀಡಾರ್ಥಿಗಳಿಗೆ ಶುಭಹಾರೈಸಿದರು.

ಸ್ಥಳೀಯ ಮಾಜಿ ನಗರ ಸೇವಕ ರಾಜೇಶ್‌ ವೇತೋಸ್ಕರ್‌, ಪೊಲೀಸ್‌ ನಿರೀಕ್ಷಕ ಸುರೇಶ್‌ ಗಗಂಜೆ, ನಗರ ಸೇವಕಿ ಅರ್ಚನಾ ಕದಂ, ಶಿವಸೇನಾ ಪ್ರಮುಖ ಅರುಣ್‌ ಕದಂ, ಮಧುಕರ್‌ ಶೆಟ್ಟಿ, ವಿಲಾಸ್‌ ಜಾಧವ್‌, ಡಿ. ಜಿ. ಶೆಟ್ಟಿ, ಪ್ರದೀಪ್‌ ಹೆಗ್ಡೆ, ಭಾಯಂದರ್‌ ಸೈಂಟ್‌ ಆ್ಯಗ್ನೇಸ್‌ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯಾಧ್ಯಕ್ಷ ಅರುಣೋದಯ ರೈ ಉಪಸ್ಥಿತರಿದ್ದು ಶುಭಹಾರೈಸಿದರು.

Advertisement

ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಬಾಬು ಕೆ. ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮ್‌ ಎಂ. ಹಂದೆ, ವಿಶ್ವನಾಥ್‌ ಪಿ. ಅಮೀನ್‌ ನಿಡ್ಡೋಡಿ, ಗುರುದತ್ತ್ ಎಸ್‌. ಪೂಂಜಾ, ಸಲಹಾ ಸಮಿತಿಯ ಸದಸ್ಯ ಪಂಡಿತ್‌ ನವೀನ್‌ಚಂದ್ರ ಆರ್‌. ಸನಿಲ್‌, ಆಮಂತ್ರಿತ ಸದಸ್ಯ ಶ್ರೀಧರ ಉಚ್ಚಿಲ್‌, ಪತ್ರಕರ್ತ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಎಂ. ಮೂಡಿಗೆರೆ, ಸುರೇಶ್‌ ಶೆಟ್ಟಿ ಯೆಯ್ನಾಡಿ, ಉಮೇಶ್‌ ಕುಮಾರ್‌ ಅಂಚನ್‌, ಸವಿತಾ ಎಸ್‌. ಶೆಟ್ಟಿ, ವಿದ್ಯಾ ಎಂ. ಭಂಡಾರಿ, ತಾರಾ ಆರ್‌. ಬಂಟ್ವಾಳ್‌ ಮತ್ತಿತರರು ಸಹಕರಿಸಿದರು.

ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಪೂಜಾರಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್‌ ಬಂಟ್ವಾಳ್‌ ಅವರು ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಗೌರವ ಕೋಶಾಧಿಕಾರಿ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ವಂದಿಸಿದರು. ಉಪಾಧ್ಯಕ್ಷ ದಯಾಸಾಗರ್‌ ಚೌಟ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆನಂತರ ಪತ್ರಕರ್ತರ ಸಂಘದ ಸದಸ್ಯರಿಗೆ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಾಟ ನಡೆಯಿತು. 

ಚಿತ್ರ- ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next