Advertisement
ಹೌದು, ಮುಂಬೈ ಇಂಡಿಯನ್ಸ್ ಬೌಲರ್ ಜಸ್‌ಪ್ರೀತ್ ಬುಮ್ರಾ ಹೋಲುವ ಬೌಲಿಂಗ್ ಶೈಲಿಯಲ್ಲೇ ದೊಡ್ಡಬಳ್ಳಾಪುರದ ಪಿ. ಮಹೇಶ್ ಕುಮಾರ್ ಕೂಡ ಬೌಲಿಂಗ್ ಮಾಡುತ್ತಾರೆ. ಸ್ವತಃ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಎಲ್ಲ ಆಟಗಾರರು ಒಂದು ಕ್ಷಣ ಮಹೇಶ್ ಕುಮಾರ್ ಬೌಲಿಂಗ್ ಕಂಡು ಅಚ್ಚರಿಪಟ್ಟಿದ್ದಾರೆ. ಮಾತ್ರವಲ್ಲ ಬುಮ್ರಾ ಕೂಡ ಮಹೇಶ್ ಬೌಲಿಂಗ್ ಶೈಲಿಗೆ ಮರುಳಾಗಿ ಒಂದು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.
22 ವರ್ಷದ ಮಹೇಶ್ ಅಂಡರ್-19 ಕರ್ನಾಟಕ ತಂಡದಲ್ಲಿ ಆಡಿದ್ದಾರೆ. ಮಹೇಶ್ ಆರ್‌ಸಿಬಿ ಕ್ಯಾಂಪ್‌ನಲ್ಲಿ ಕಾಣಿಸಿ ಕೊಂಡಿರುವುದು ಇದು ಎರಡನೇ ಸಲ. ನೆಟ್‌ನಲ್ಲಿ ಅಭ್ಯಾಸದ ಬಳಿಕ ಮಾಧ್ಯಮ ದವರೊಂದಿಗೆ ಮಾತಾಡಿದ ಮಹೇಶ್, “ನಾನು 8ನೇ ತರಗತಿಯಲ್ಲೇ ನನ್ನದೇ ಶೈಲಿಯ ಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದೆ. ಬುಮ್ರಾ ಶೈಲಿಯನ್ನು ನಾನು ಅನುಕರಿಸಿಲ್ಲ. ಅವರು ಕೂಡ ನನ್ನದೇ ಬೌಲಿಂಗ್ ಶೈಲಿ ನಡೆಸುವುದನ್ನು ನೋಡಿ ಅಚ್ಚರಿಪಟ್ಟಿದ್ದೆ’ ಎಂದರು.