Advertisement
ಸಂಘದ ಸದಸ್ಯ ಬಾಂಧವರಿಗೆ ಮತ್ತು ಪ ರಿಸರದ ತುಳು-ಕನ್ನಡಿಗಾಗಿ ಆಯೋಜಿಸಲಾಗಿದ್ದ ಈ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು, ನಾವು ಕೇವಲ ಸಮಾಜ ಸೇವೆಯಲ್ಲಿ ಮಾತ್ರ ಸೀಮಿತವಾಗಿಸಿಕೊಳ್ಳಬಾರದು. ಅದರೊಂದಿಗೆ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕು. ಈ ಉದ್ಧೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಸಂಸ್ಥೆಯು ಇತ್ತೀಚೆಗೆ ಸುವರ್ಣ ಮಹೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಭವಿಷ್ಯದಲ್ಲೂ ಕನ್ನಡಿಗರ ಶ್ರೇಯೋಭಿವೃದ್ಧಿಗೆ ಸಂಘವು ಸದಾ ಶ್ರಮಿಸಲಿದೆ. ಇಂದಿನ ಶಿಬಿರದಲ್ಲಿ ಹೆಚ್ಚಿನ ಸದಸ್ಯ ಬಾಂಧವರು ಪಾಲ್ಗೊಂಡಿರುವುದು ಸಂತೋಷದ ವಿಷಯ. ನಾವೆಲ್ಲರೂ ಒಂದಾಗಿ ಸಂಸ್ಥೆಯನ್ನು ಬೆಳೆಸೋಣ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ. ಆರೋಗ್ಯದತ್ತ ಹೆಚ್ಚಿನ ಗಮನ ಹರಿಸೋಣ ಎಂದರು.
ಶಿಬಿರದಲ್ಲಿ ಮಧುಮೇಹ ತಪಾಸಣೆ, ರಕ್ತದೊತ್ತಡ ಹಾಗೂ ಆರೋಗ್ಯ ಸಮಸ್ಯೆಗಳ ನಿವಾರಣೆಯ ಬಗ್ಗೆ ಮಾಹಿತಿ, ದೇಹದ ತೂಕ ಹೆಚ್ಚಳ, ಸಮತೋಲನೋಪಾಯ, ನೇತ್ರ ತಪಾಸಣೆ ಇನ್ನಿತರ ಆರೋಗ್ಯ ಸಂಬಂಧಿ ತಪಾಸಣೆಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿತ್ತು.
Related Articles
Advertisement
ರಂಗಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ ಅವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷ ನವೀನ್ ಶೆಟ್ಟಿ ಅವರು ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿದರು. ಸದಸ್ಯ ಬಾಂಧವರು ಸೇರಿದಂತೆ ನೂರಾರು ಮಂದಿ ತುಳು-ಕನ್ನಡಿಗರು ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗಪಡಿಸಿಕೊಂಡರು.