Advertisement

ಕನ್ನಡ ಗ್ರಾಮಗಳ ಹೆಸರು ಬದಲು: ಖಂಡನೆ

06:04 PM Jun 27, 2021 | Team Udayavani |

ಬೆಂಗಳೂರು: ಕೇರಳ ಸರ್ಕಾರ ರಾಜ್ಯದಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕನ್ನಡಗ್ರಾಮಗಳ ಹೆಸರನ್ನು ಬದಲಾಯಿಸಲು ಹೊರಟಿರುವ ಕ್ರಮವನ್ನು ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಖಂಡಿಸಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಕನ್ನಡಪ್ರದೇಶ ಗ್ರಾಮಗಳ ಐತಿಹಾಸಿಕ ಹೆಸರು ಬದಲಾವಣೆಸಲ್ಲದು. ಶತಮಾನಗಳ ಹಿಂದೆಯೇ ಕರ್ನಾಟಕದಸಾಹಿತ್ಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಒಗ್ಗೂಡಿಸಿ,ಆ ಗ್ರಾಮಗಳಿಗೆ ಕನ್ನಡದಹೆಸರುಗಳನ್ನು ನಾಮಕರಣ ಮಾಡಲಾಗಿದೆ.

ಆದರೆ ಈಗ ಅದನ್ನು ಬದಲಾಯಿಸಲು ಹೊರಟಿರುವ ಕೇರಳಸರ್ಕಾರದಕ್ರಮ ಸರಿಯಿಲ್ಲ ಎಂದು ತಿಳಿಸಿದ್ದಾರೆ.ಹಾಗೆಯೇ ಆ ಪ್ರದೇಶದಲ್ಲಿ ಕನ್ನಡ ಭಾಷೆಯನ್ನುಮಾತನಾಡುವವರು ಹೆಚ್ಚಿನಸಂಖ್ಯೆಯಲ್ಲಿದ್ದಾರೆ. ಅಂತಹ ಗ್ರಾಮಗಳ ಹೆಸರನ್ನು ಬದಲಾವಣೆಮಾಡುವ ಮೂಲಕ ಕನ್ನಡಿಗರಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಕೇರಳ ಸರ್ಕಾರ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಗಡಿಭಾಗದ ಯಾವುದೇ ಸಮಸ್ಯೆಗಳಿಗೆಸಂಬಂಧಿಸಿದಂತೆ ಅತ್ಯಂತ ಸೂಕ್ಷ ¾ತೆ ಮತ್ತುಬದ್ಧತೆಯಿಂದ ನಡೆದುಕೊಳ್ಳ ಬೇಕಾಗಿರುವುದುಎರಡು ರಾಜ್ಯಗಳ ಜವಾಬ್ದಾರಿಯಾಗಿದೆ. ಇದನ್ನುಕೇರಳ ರಾಜ್ಯ ಅರಿತುಕೊಳ್ಳಬೇಕು. ಈ ಪ್ರಕ್ರಿಯೆಯನ್ನುಮುಂದುವರಿಸಿದರೆ ಕರ್ನಾಟಕ ಗಡಿ ಅಭಿವೃದ್ಧಿಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಸಂಘಟನೆಗಳೊಂದಿಗೆ ಜತೆಗೂಡಿ ಹೋರಾಟದ ಹಾದಿಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next