Advertisement

ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಅಭಿಯಾನಕ್ಕೆ ಸೋನಾರೆ ಚಾಲನೆ

04:35 PM Dec 30, 2020 | Team Udayavani |

ಬೀದರ: ನಗರ ಸೇರಿದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟುಗಳ ಮೇಲಿರುವ ಕನ್ನಡೇತರ ನಾಮಫಲಕಗಳಿಗೆ ಕಪ್ಪುಮಸಿ ಬಳೆಯಲಾಗುವುದು ಎಂದು ಕನ್ನಡ ಅನುಷ್ಠಾನ ಸಮಿತಿ ಸದಸ್ಯ ವಿಜಯಕುಮಾರ ಸೋನಾರೆ ಎಚ್ಚರಿಕೆ ನೀಡಿದರು.

Advertisement

ನಗರದ ಕುಂಬಾರವಾಡಾ ಎಸ್‌ಬಿಐ ಲೀಡ್‌ ಬ್ಯಾಂಕ್‌ ಎದುರು ಕನ್ನಡಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಮಫಲಕಗಳನ್ನು ಕನ್ನಡದಲ್ಲೇ ಬರೆಸಬೇಕು. ಇತರೆ ಭಾಷೆಯ ಫಲಕಗಳಿಗೆ ಮಸಿ ಹಚ್ಚಬೇಕಾಗುತ್ತದೆ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿಮಾತನಾಡಿದರು. ಮನವಿ ಸ್ವೀಕರಿಸಿಮಾತನಾಡಿದ ಎಸ್‌ಬಿಐ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕ ಬಾಳಪ್ಪ ಕಮತಗಿ,ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಕನ್ನಡಭಾಷೆಯಲ್ಲಿಯೇ ವ್ಯವಹಾರ ಮಾಡಲು ಆಯಾ ಬ್ಯಾಂಕ್‌ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ,ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾದಎಂ.ಪಿ. ಮುದಾಳೆ, ಬಸವರಾಜಜೋಜನಾ, ಪ್ರಮುಖರಾದ ಶ್ರೀಮಂತಸಪಾಟೆ, ಸುನೀಲ ಭಾವಿಕಟ್ಟಿ, ಸಂತೋಶಏಣಕೂರು, ಶಶಿ ಹೊಸಳ್ಳಿ, ಸುಧಾಕರ ಎಲ್ಲಾನೋರ್‌ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next