Advertisement
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವಿಜಯಕುಮಾರ ಸೋನಾರೆ ನಿವಾಸದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಜನಪದ ಕಲಾವಿದರ ಬಳಗದ ಅಭಿನಂದನೆಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಪಡೆಯಸದಸ್ಯನಾಗಿ ಕನ್ನಡದ ಕಾಯಕ ಮಾಡಲು ಮುಂದಾಗುವಂತೆ ಮಾಡಬೇಕು. ಕನ್ನಡದ ಕೆಲಸ ಅಂದರೆ ಅದು ನಮ್ಮ ಕೆಲಸ, ನಮ್ಮ ಮನೆಯ ಕೆಲಸ ಎಂಬ ಭಾವನೆ ಎಲ್ಲರಲ್ಲಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು.
Related Articles
Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ರಾಮ ಸಿಂಧೆ, ಜೆಎನ್ ಡಫಳಾಪೂರ, ಶ್ರೀಮಂತ ಸಪಾಟೆ,ರವಿ ನೇಳಗೆ, ಮಹೇಶ ಹಳೆಯಂಬುರೆ,ಚಂದ್ರಾವತಿ ಘಂಟೆ, ಖುಷಿ ಘಟೆ ಇದ್ದರು.ಎಂ.ಪಿ ಮುದಾಳೆ ಸ್ವಾಗತಿಸಿದರು. ಚಂದ್ರಕಾಂತ ಹಳೆಂಬುರೆ ನಿರೂಪಿಸಿದರು. ಸುನೀಲ ಭಾವಿಕಟ್ಟಿ ವಂದಿಸಿದರು.
ಬದ್ಧತೆ ಮನಸ್ಸುಗಳಿದ್ದರೆ ಕನ್ನಡ ಕಟ್ಟಲು ಸಾಧ್ಯ :
ಬೀದರ: ನಗರದ ರಂಗಮಂದಿರದಲ್ಲಿ ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಜಿಲ್ಲೆಯ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಸಾಹಿತಿ, ಚಿಂತಕರ ಜತೆ ಸಭೆ ನಡೆಸಿ,ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಲು ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದು ಕೋರಿದರು.
ಈ ವೇಳೆ ಹಿರಿಯ ಜಾನಪದ ವಿದ್ವಾಂಸ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಜಾನಪದ ವಿಶ್ವಕೋಶ
ಪ್ರಕಟಿಸಬೇಕು. ಬೀದರದಂತಹ ಗಡಿ ಜಿಲ್ಲೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ಅಭ್ಯಾಸ ಮಾಡುವವರಿಗೆ 2,000 ಪ್ರೋತ್ಸಾಹ ಧನ ನೀಡಬೇಕು. ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬೀದರನಲ್ಲಿ ಮರಾಠಿ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವ ಶಿಕ್ಷಕರ ಕೊರತೆ ಇದೆ. ಅಗತ್ಯಕ್ಕನುಸಾರ ಕನ್ನಡಭಾಷಾ ಶಿಕ್ಷಕರ ನೇಮಕವಾಗಬೇಕು. ಎಲ್ಲಾ ಅಂಗಡಿಗಳಲ್ಲಿ ಕನ್ನಡದಲ್ಲಿಯೇನಾಮಫಲಕ ಇರುವಂತಾಗಬೇಕು ಎಂದು ಸಲಹೆ ಮಾಡಿದರು.
ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ಕನ್ನಡ ಕಾರ್ಯಕ್ರಮಗಳುಬರಿ ಬೆಂಗಳೂರಿಗೆ ಸೀಮಿತವಾಗದಿರಲಿ. ಬೀದರದಂತಹ ಗಡಿ ಜಿಲ್ಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚಿನರೀತಿಯಲ್ಲಿ ನಡೆಯಲು ಅವಕಾಶ ನೀಡಬೇಕು ಎಂದರು. ಪತ್ರಕರ್ತ ವಿರೂಪಾಕ್ಷ ಗಾದಗಿ ಮಾತನಾಡಿ, ಅಧೀನ ನ್ಯಾಯಾಲಯಗಳಲ್ಲಿ ಹೊರಡಿಸುವ ಆದೇಶ-ಸುತ್ತೋಲೆಗಳು ಕನ್ನಡ ಭಾಷೆಯಲ್ಲಿ ಇರಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಟಿ.ಎಸ್‌ನಾಗಾಭರಣ ಅವರು, ಕನ್ನಡವನ್ನು ಬಲಪಡಿಸಲು ಒತ್ತು ಕೊಡಲಾಗುವುದು.ಇದಕ್ಕೆ ಪೂರಕವಾದ ಎಲ್ಲ ಕಾರ್ಯಗಳನ್ನು ನಡೆಸಲಾಗುವುದು. ನಾವುಕನ್ನಡವನ್ನು ಗೌರವ ಪ್ರೀತಿಯಿಂದಕಾಪಾಡಬೇಕು. ಸಮಸ್ಯೆಗಳಿಗೆ ಉತ್ತರಕಂಡುಕೊಳ್ಳೋಣ. ಗಡಿಯಲ್ಲಿಬರೀ ಶಿಕ್ಷಕರನ್ನು ನೇಮಿಸಿದರಷ್ಟೇಸಮಸ್ಯೆ ಪರಿಹಾರವಾಗದು. ಮೂಲತೊಂದರೆಯನ್ನು ಹೇಗೆ ನಿವಾರಿಸಬಹುದು ಎಂಬುದರ ಬಗ್ಗೆ ಯೋಚಿಸೋಣ. ಮನ ಪರಿವರ್ತನೆ ಕೆಲಸ ಮಾಡೋಣ. ಕೇವಲಕಾನೂನು ಆದೇಶ, ಸುತ್ತೋಲೆಗಳಿಂದಕನ್ನಡ ಕಟ್ಟಲು ಆಗುವುದಿಲ್ಲ ಎಂಬುದುನಮಗೀಗ ಅರಿವಿಗೆ ಬಂದಿದೆ. ಕನ್ನಡವನ್ನುಕಟ್ಟುವ ಬದ್ದತೆಯ ಮನಸುಗಳಿದ್ದಾಗಕನ್ನಡ ಕಟ್ಟಲು ಸಾಧ್ಯವಾಗಲಿದೆ ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ ಮಾತನಾಡಿದರು. ಪ್ರೊ|ಎಸ್.ವಿ.ಕಲ್ಮಠ, ಶಂಭುಲಿಂಗ ವಾಲದೊಡ್ಡಿ,ರಾಜಕುಮಾರ ಹೆಬ್ಟಾಳೆ, ಸಂತೋಷ ಜೋಳದಾಪಕೆ ಅವರು ಸಲಹೆಗಳನ್ನು ನೀಡಿದರು. ಸುರೇಶ ಬಡಿಗೇರ, ರಮೇಶ ಬಿರಾದಾರ, ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ ಇದ್ದರು.