Advertisement

“ಕನ್ನಡಿಗರಿಂದಲೇ ಕನ್ನಡಕ್ಕೆ ಅಪಾಯ’

12:23 PM Nov 16, 2017 | |

ಯಲಹಂಕ: ಕನ್ನಡ ಭಾಷೆ ಬಳಸಲು ಕೀಳರಿಮೆ ಬೇಡ ಎಂದು ಹಿರಿಯ ಸಾಹಿತಿ ಹಾಗೂ ಲೇಖಕ ಬಿ.ಆರ್‌.ಲಕ್ಷ್ಮಣರಾವ್‌ ಹೇಳಿದರು. ಯಲಹಂಕ ಉಪನಗರ ಶೇಷಾದ್ರಿಪುರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಕಾರ್ಯ ಪ್ರವೃತ್ತನಾಗಬೇಕು. ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಕೇವಲ ಪ್ರತಿಷ್ಠೆಗಾಗಿ ಇಂಗ್ಲಿಷ್‌ ಅಥವಾ ಇನ್ನಿತರ ಭಾಷೆಗಳನ್ನು ಮಾತನಾಡುವುದು ಮಾತೃಭಾಷೆ ಕನ್ನಡಕ್ಕೆ ಅನ್ಯಾಯ ಮಾಡುವಂತಾಗುತ್ತದೆ ಎಂದರು.

Advertisement

ಮನೆಗಳಲ್ಲಿ ಪೋಷಕರು ಮಕ್ಕಳೊಡನೆ ಕನ್ನಡದಲ್ಲೇ ಮಾತನಾಡಿದಾಗ ಭಾಷೆ ತಂತಾನೇ ಅಭಿವೃದ್ಧಿಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ನಿರಾಭಿಮಾನದಿಂದ ಕನ್ನಡಿಗರಿಂದಲೇ ಕನ್ನಡಕ್ಕೆ ಕಂಟಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಮಾತನಾಡಿ, ಕನ್ನಡ ವಿಶ್ವದಲ್ಲೇ ಅತಿ ಪುರಾತನ ಹಾಗೂ ಶಾಸ್ತ್ರೀಯ ಭಾಷೆ. ಸಾಹಿತ್ಯ ಸಂಸ್ಕೃತಿ ಸಂಗೀತಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next