Advertisement

ದ್ವಿತೀಯ ಪಿಯುಸಿ : ಪಿಸಿಎಂಬಿ ಪಠ್ಯಪುಸ್ತಕ ಕನ್ನಡ ಅವತರಣಿಕೆ ಲಭ್ಯ

11:28 AM Aug 24, 2020 | Hari Prasad |

ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ.

Advertisement

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪಿಸಿಎಂಬಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಹಾಗೂ ಜೀವಶಾಸ್ತ್ರ) ಪಠ್ಯ ಪುಸ್ತಕಗಳು ಕನ್ನಡ ಅವತರಣಿಕೆಯಲ್ಲೇ ಲಭ್ಯವಾಗಲಿವೆ.

ಪ್ರಸ್ತುತ ಪದವಿಪೂರ್ವ ಶಿಕ್ಷಣದ ವಿಜ್ಞಾನ ವಿಭಾಗದಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಪಿಸಿಎಂಬಿ ಪುಸ್ತಕಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯ ಇವೆ.

ಈ ಹಿಂದೆ ಕನ್ನಡದಲ್ಲಿ ಭಾಷಾಂತರಿಸುವ ಪ್ರಯತ್ನಗಳೂ ನಡೆದಿದ್ದವು.

ಆದರೆ, 2018ರಲ್ಲಿ ಪರಿಷ್ಕರಣೆಗೊಂಡ ಪಠ್ಯಕ್ರಮಕ್ಕೆ ಅನುಗುಣವಾಗಿ ಕನ್ನಡಕ್ಕೆ ತರ್ಜುಮೆಗೊಂಡು ವಿದ್ಯಾರ್ಥಿಗಳ ಕೈ ಸೇರುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

Advertisement

ಸದ್ಯ ಕನ್ನಡದಲ್ಲಿ ಪುಸ್ತಕಗಳು ಲಭ್ಯವಿಲ್ಲದ್ದರಿಂದ ಕನ್ನಡದಲ್ಲಿ ಪರೀಕ್ಷೆ ಬರೆಯುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಕೂಡ ತುಂಬಾ ವಿರಳ. ಪ್ರತಿ ವರ್ಷ ಇಡೀ ರಾಜ್ಯದಲ್ಲಿ 200-300 ಮಂದಿ ಈ ವರ್ಗದವರಿದ್ದಾರೆ ಎನ್ನಲಾಗಿದೆ.

ಕನ್ನಡಕ್ಕೆ ಭಾಷಾಂತರಗೊಂಡ ಈ ಪಿಸಿಎಂಬಿ ಪುಸ್ತಕಗಳು ಆದ್ಯತೆ ಮೇರೆಗೆ ಸರಕಾರಿ ಪಪೂ ಕಾಲೇಜು, ಗ್ರಂಥಾಲಯಗಳಿಗೆ ಪೂರೈಕೆ ಆಗಲಿವೆ. ಅನಂತರ ಮಾರುಕಟ್ಟೆಯಲ್ಲಿ ಸಿಗಲಿವೆ.

ಪಿಯುಸಿ ಪಿಸಿಎಂಬಿ ಪಠ್ಯಪುಸ್ತಕಗಳು ಇಂಗ್ಲಿಷ್‌ನಲ್ಲಿ ಇರುವುದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಎನ್‌ಇಎಸ್‌ಆರ್‌ಟಿಸಿ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅರ್ಪಿಸಲಾಗುತ್ತಿದೆ’ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next