Advertisement
1987ರಲ್ಲಿ ನಾನು ಕನ್ನಡ ಕಿರುತೆರೆ ಪ್ರವೇಶಿಸಿ ದಾಗ ಇದ್ದಿದ್ದು ದೂರದರ್ಶನ(ಡಿಡಿ)ಮಾತ್ರ. ಇಲ್ಲಿ ದಿನಕ್ಕೆ ಕೆಲವೇ ಗಂಟೆಗಳಷ್ಟು ಹೊತ್ತು ಮಾತ್ರ ಕನ್ನಡದ ಕಾರ್ಯಕ್ರಮಗಳು ಪ್ರಸಾರ ವಾಗುತ್ತಿದ್ದವು. ವಾರಕ್ಕೆ ಒಂದು ಎಪಿಸೋಡ್‌ನಂತೆ 30 ನಿಮಿಷದ ಅವಧಿಯ ಒಂದೊಂದು ಧಾರಾವಾಹಿ ಮಾತ್ರ ಬರುತ್ತಿತ್ತು. ಆಗ ಧಾರಾ ವಾಹಿಯ ಒಂದು ಸಂಚಿಕೆ ಸಿದ್ಧಪಡಿಸುವುದೇ ನಿರ್ಮಾಪಕರು, ನಿರ್ದೇಶಕರು ಮತ್ತು ತಂಡಕ್ಕೆ ದೊಡ್ಡ ಸವಾಲಾಗಿತ್ತು.
Related Articles
Advertisement
ಕೇವಲ 35 ವರ್ಷದ ಹಿಂದೆ ನೂರಾರು ಜನ ಕೆಲಸ ಮಾಡುತ್ತಿದ್ದ, ಕೆಲವು ಲಕ್ಷಗಳಷ್ಟೇ ವೀಕ್ಷಕರಿದ್ದ ಕಿರುತೆರೆಯಲ್ಲಿ, ಇಂದು ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆಯನ್ನು ನೋಡುವ ವೀಕ್ಷಕರ ಸಂಖ್ಯೆ ಈಗ 3-4 ಕೋಟಿ ದಾಟಿದೆ! ಕನ್ನಡ ಕಿರುತೆರೆಯಲ್ಲಿ ಈಗ ತಂತ್ರಜ್ಞಾನವೂ ಸ್ಮಾರ್ಟ್ ಆಗಿದೆ. ಕನ್ನಡ ಕಿರುತೆರೆಯ ಮೂಲಕ ಪ್ರತೀ ದಿನ ಹೊಸ ಹೊಸ ಕಲಾವಿದರು, ತಂತ್ರಜ್ಞರು, ಬರಹಗಾರರು ಕನ್ನಡಿಗರಿಗೆ ಪರಿ ಚಯವಾಗುತ್ತಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕನ್ನಡ ಕಿರುತೆರೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ಆಶ್ರಯಿಸಿದ್ದಾರೆ. ಕಲಾ ವಿದರು, ತಂತ್ರಜ್ಞರಿಗೂ ಒಳ್ಳೆಯ ಸಂಭಾವನೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.
ಇಂದು ಕನ್ನಡ ಕಿರುತೆರೆಯ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲೂ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ತೆಲುಗಿನಲ್ಲಿ ಕನ್ನಡದ 280ಕ್ಕೂ ಹೆಚ್ಚಿನ ಕಲಾವಿದರು ಅಭಿನಯಿ ಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು!
ರವಿಕಿರಣ್, ಕಿರುತೆರೆ ನಟ, ನಿರ್ಮಾಪಕ ಮತ್ತು ನಿರ್ದೇಶಕ