Advertisement
ಕನ್ನಡಿಗರು ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಕ್ರಿಯೆ ಒಂದೆಡೆಯಾದರೆ, ಕನ್ನಡ ಕಲಿತ ಕನ್ನಡೇತರರು, ತಮ್ಮಂತೆ ಹೊರಗಿನಿಂದ ಬಂದ ಪರಭಾಷಿಗರಿಗೂ ಕನ್ನಡ ಕಲಿಸುತ್ತಿರುವುದು ವಿಶೇಷ. ಇದರ ಜತೆಗೆ ಕನ್ನಡೇತರರಲ್ಲಿ ಅನೇಕರು ಕನ್ನಡ ಕಲಿತು, ಅಧ್ಯಯನ ನಡೆಸಿ, ಕನ್ನಡದ ಕೃತಿಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಕನ್ನಡದ ಕಂಪನ್ನು ತಮ್ಮ ರಾಜ್ಯದಲ್ಲೂ ಪಸರಿಸಿದ್ದಾರೆ.
Related Articles
Advertisement
ಎಚ್‌ಎಎಲ್, ಬೆಮೆಲ್, ಇನ್ಫೋಸಿಸ್, ವಿಪ್ರೊ ಸೇರಿದಂತೆ ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಭೇಟಿ ನೀಡಿ, ಕನ್ನಡ ತರಗತಿ ನಡೆಸಿದ್ದಾರೆ. ಐಐಎಸ್ಸಿ, ಐಐಎಂ ಕೇಂದ್ರ ಸರ್ಕಾರದ ಕಚೇರಿ, ಆದಾಯ ತೆರಿಗೆ ಕಚೇರಿಯ ಕನ್ನಡೇತರ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕನ್ನಡ ಪಾಠ ಹೇಳಿಕೊಟ್ಟಿದ್ದಾರೆ. ಸದ್ಯ ಕೆಲವು ಐಎಎಸ್ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತಲ್ಲಿನರಾಗಿದ್ದಾರೆ. ಇದರ ಜತೆಗೆ ಭಾನುವಾರದ ತರಗತಿಯನ್ನೂ ನಡೆಸುತ್ತಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮುಂದಾಳತ್ವದಲ್ಲೂ ಕನ್ನಡೇತರಿಗೆ ಕನ್ನಡ ಕಲಿಸುವ ಕಾರ್ಯ ನಡೆಯುತ್ತಿದೆ.
ಕನ್ನಡ ಕಲಿತ ವಿದೇಶಿಗರು: ಕನ್ನಡ ಪ್ರಸಾರ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್ ಭವನದಲ್ಲಿ ಜರ್ಮನಿ ಮತ್ತಿತರ ದೇಶಗಳ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಕನ್ನಡ ಕಲಿಸಿದ್ದಾರೆ. ನಗರದ ಅಲಾಯನ್ಸ್ ಫ್ರಾನ್ಸ್ (ಭಾರತದಲ್ಲಿರುವ ಅಧಿಕೃತ ಫ್ರೆಂಚ್ ಕೇಂದ್ರ)ನಲ್ಲಿ, ಫ್ರಾನ್ಸ್ ಹಾಗೂ ಇತರ ದೇಶದವರಿಗೆ ಕನ್ನಡ ಕಲಿಸಿದ್ದಾರೆ. ಎನ್‌ಸಿಬಿಎಸ್‌ನಲ್ಲಿ ವಿಜ್ಞಾನಿಗಳಿಗೆ ಕನ್ನಡ ಪಾಠ ಕಲಿಸಿಕೊಡಲಾಗಿದೆ. ಈ ಮೂಲಕ ಸಾವಿರಾರು ವಿದೇಶಿಗರು ಕನ್ನಡ ಕಲಿತಿದ್ದಾರೆ.
ಶ್ರೇಷ್ಠ ಕಾದಂಬರಿ ತರ್ಜುಮೆ: ಕೇರಳದ ಕಣ್ಣೂರು ಜಿಲ್ಲೆಯಿಂದ ಬೆಂಗಳೂರಿಗೆ ಬಂದು ನೆಲೆಸಿರುವ ರಾಮತಳ ಸುಧಾಕರನ್ ರಾಮನಥಲಿ ಅವರು ಕನ್ನಡ ಕಲಿತು, ಅಧ್ಯಯನ ಮಾಡಿ, ಕನ್ನಡದ ಶ್ರೇಷ್ಠ ಗ್ರಂಥಗಳನ್ನು ಮಲಯಾಳಂಗೆ ಭಾಷಾಂತರಿಸಿ ಪ್ರಶಸ್ತಿ ಪಡೆದಿದ್ದಾರೆ. ಈವರೆಗೆ ಕನ್ನಡದ 17 ಕೃತಿಗಳನ್ನು ಮಲಯಾಳಂಗೆ ಭಾಷಾಂತರಿಸಿದ್ದಾರೆ.
ಅದರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ 5 ಕೃತಿ ಹಾಗೂ ಡಾ.ಎಸ್.ಎಲ್.ಬೈರಪ್ಪ ಅವರ 2 ಕಾದಂಬರಿ, ಯು.ಆರ್.ಅನಂತಮೂರ್ತಿಯವರ ಒಂದು ಕೃತಿ, ಕುವೆಂಪು ಅವರ “ರಾಮಾಯಣ ದರ್ಶನಂ’ನ ಆಯ್ದ ಭಾಗ ತರ್ಜುಮೆ ಮಾಡಿದ್ದಾರೆ. ಇದರ ಜತೆಗೆ ಕನಕದಾಸರ ಸಮಗ್ರ ಕೃತಿಯ ಭಾಷಾಂತರದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.
1974ರಿಂದ ಕನ್ನಡೇತರರಿಗೆ ಕನ್ನಡ ಕಲಿಸುತ್ತಿದ್ದೇವೆ. 1990ರಲ್ಲಿ ಕನ್ನಡ ಪರಿಷತ್ ಆರಂಭಿಸಿದ್ದು, ಪ್ರತಿ ಭಾನುವಾರ ಕನ್ನಡದ ತರಗತಿ ನಡೆಸುತ್ತಿದ್ದೇವೆ. ಬಹುತೇಕರು ಕನ್ನಡ ಮಾತನಾಡುವುದನ್ನು ಕಲಿಯಲು ಬರುತ್ತಾರೆ. ಅಪಾರ ಸಂಖ್ಯೆಯ ವಿದೇಶಿಗರಿಗೂ ಕನ್ನಡ ಕಲಿಸಿದ್ದೇವೆ.-ಬಿ.ವಿ.ರಾಘವನ್, ಕನ್ನಡ ಪ್ರಸಾರ ಪರಿಷತ್ ಅಧ್ಯಕ್ಷ ಕನ್ನಡ ಭಾಷೆಯ ಶ್ರೇಷ್ಠ ಕೃತಿಗಳನ್ನು ಮಲಯಾಳಂಗೆ ತರ್ಜುಮೆ ಮಾಡಿದ್ದೇನೆ. ಕೇರಳಿಗರಿಗೆ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುವುದು ಇದರ ಉದ್ದೇಶವಾಗಿದೆ.
-ಸುಧಾಕರನ್ ರಾಮನಥಲಿ * ರಾಜು ಖಾರ್ವಿ ಕೊಡೇರಿ