Advertisement

ಗಾಯಕ ಎಲ್‌.ಎನ್‌.ಶಾಸ್ತ್ರಿಗೆ ಅನಾರೋಗ್ಯ

07:10 AM Aug 19, 2017 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ಎಲ್‌. ಎನ್‌.ಶಾಸ್ತ್ರಿ ಅವರು ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕಳೆದ ಜೂನ್‌ನಿಂದಲೂ ಆನಾರೋಗ್ಯದಿಂದ ಬಳಲುತ್ತಿದ್ದ ಎಲ್‌.ಎನ್‌.ಶಾಸ್ತ್ರಿ , ಮೊದಲು ಎಚ್‌ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಆ ಬಳಿಕ ಮಲ್ಲಿಗೆ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು. ಸದ್ಯ, ಜೈನ್‌ ಆಸ್ಪತ್ರೆಯ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರು, ಮನೆಯಲ್ಲಿದ್ದುಕೊಂಡು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಲ್‌.ಎನ್‌.ಶಾಸ್ತ್ರಿ ಅವರ ಪತ್ನಿ ಸುಮಾ ಶಾಸ್ತ್ರಿ ತಿಳಿಸಿದ್ದಾರೆ.

Advertisement

ಎಲ್‌.ಎನ್‌.ಶಾಸ್ತ್ರಿ ಕನ್ನಡದ ಬಹುತೇಕ ಸಿನಿಮಾಗಳಿಗೆ ಹಾಡಿದ್ದಾರೆ. “ಎ’, “ಜನುಮದ ಜೋಡಿ’,  “ಸಿಪಾಯಿ'”ಜೋಡಿಹಕ್ಕಿ’ಸೇರಿದಂತೆ ನೂರಾರು ಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕರಾಗಿ ಸುಮಾರು 15 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. “ಜನುಮದ ಜೋಡಿ’ ಚಿತ್ರದ “ಕೋಲು ಮಂಡೆ …’ ಗಾಯನಕ್ಕಾಗಿ ರಾಜ್ಯಪ್ರಶಸ್ತಿ ಕೂಡ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next