Advertisement
ಕೋರಮಂಗಲದ ಕೇಂದ್ರೀಯ ಸದನದ ಕನ್ನಡ ಸಂಘವು ವ್ಯವಸ್ಥೆ ಮಾಡಿದ್ದ ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿ ಶತಮಾನೋತ್ಸವ ಮತ್ತು ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡ ಬಳಕೆ ಮಾಡದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅಪಚಾರವಾಗುತ್ತದೆ. ತ್ರಿಭಾಷಾ ಸೂತ್ರದನ್ವಯ ಆಯಾ ರಾಜ್ಯದ ಭಾಷೆಗಳಿಗೆ ಆದ್ಯತೆ ಇರಬೇಕು. ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳು ಇದನ್ನು ಪಾಲಿಸಬೇಕು. ಬೇರೆ ರಾಜ್ಯದಿಂದ ಬಂದವರೂ ಕೂಡ ಕನ್ನಡ ಕಲಿಯಬೇಕು ಎಂದರು.
ಕನ್ನಡ ಚಿಂತಕ ರಾ.ನಂ.ಚಂದ್ರಶೇಖರ ಮಾತನಾಡಿ, ಮ.ರಾಮಮೂರ್ತಿಯವರು ಧೀರೋದತ್ತ ಕನ್ನಡ ಕೆಲಸಗಳನ್ನು ವಿವರಿಸಿ ಇತ್ತೀಚೆಗೆ ಕಣ್ಮರೆಯಾದ ಕೆ.ಎಸ್. ಅಚ್ಯುತನ್ ಮತ್ತು ಕನ್ನಡ ಪರಿಚಾರಕ ಕೆ.ಎಚ್. ನರಸಿಂಹಮೂರ್ತಿಯವರ ಕನ್ನಡ ಕೆಲಸಗಳನ್ನು ನೆನಪಿಸಿಕೊಂಡರು. ಸಂಘದ ಅಧ್ಯಕ್ಷ ಮ.ಚಂದ್ರಶೇಖರ, ಹೆಚ್ಚುವರಿ ಮಹಾನಿರ್ದೇಶಕ ಪುನಿತ್ ಕುಮಾರ್ ವತ್ಸ, ಕನ್ನಡ ಪರಿಚಾರಕರಾದ ಜಿ.ಎಸ್. ಸತ್ಯಮೂರ್ತಿ, ಎಚ್.ಎನ್. ರಮೇಶ ಬಾಬು, ಬಿ. ರವಿಕುಮಾರ್, ಕೇಂದ್ರೀಯ ಸದನದ ಅಧಿಕಾರಗಳಾದ ಕೃಷ್ಣಮೂರ್ತಿ ಮಯ್ಯ, ವಿಶ್ವೇಶ್ವರಯ್ಯ, ನೌಕರರಾದ ಮಲ್ಲಿಕಾರ್ಜುನ, ಮಲರ್ ಸೆಲ್ವಂ ಮೊದಲಾದವರು ಇದ್ದರು.