Advertisement

ಕುಂದಾಪುರ: ಸಂಚಲನ ಕಿರುಚಿತ್ರ ಬಿಡುಗಡೆ

06:15 AM Sep 05, 2017 | Team Udayavani |

ಕುಂದಾಪುರ: ಇಲ್ಲಿನ ಪರಿಸರ ಸಾಕಷ್ಟು ಸಾಹಿತ್ಯ, ಕಲೆ,ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ  ಇಲ್ಲಿನ ಯುವಕರು ಸಂಘಟಿತರಾಗಿ ನಿರ್ಮಿಸಿದ ಈ ಸಂಚಲನ ಕಿರುಚಿತ್ರವೇ ಸಾಕ್ಷಿಯಾಗಿದೆ. ಯುವಕರಿಗೆ ಸಾಕಷ್ಟು ಅವಕಾಶ ನೀಡಿದ್ದಲ್ಲಿ ಯಾವುದೇ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ  ಆಡಳಿತಾಧಿಕಾರಿ ಡಾ| ಎಚ್‌.ಶಾಂತಾರಾಮ್‌ ಹೇಳಿದರು.

Advertisement

ಅವರು ಶನಿವಾರ ಸಂಜೆ  ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ   ಕುಂದಾಪುರದ ಯುವಕರು ನಿರ್ಮಿಸಿದ ಕಿರುಚಿತ್ರ ಸಂಚಲನದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಹಿರಿಯ ನ್ಯಾಯವಾದಿ ಎ.ಎಸ್‌.ಎನ್‌. ಹೆಬ್ಟಾರ್‌ ಅವರು  ಕಿರುಚಿತ್ರದ ಟಿಸರ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ  ಬಂಟರ ಯಾನೆ ನಾಡವರ  ಮಾತೃಸಂಘ ಮಂಗಳೂರು ಇದರ ಕುಂದಾಪುರ ತಾಲೂಕು ಸಮಿತಿಯ ಸಹ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ,  ಉದ್ಯಮಿಗಳಾದ ಕಾರ್ತಿಕೇಯ  ಮಧ್ಯಸ್ಥ, ಹಕೂìರು ಚಿತ್ತರಂಜನ್‌ ಹೆಗ್ಡೆ,  ವಿಲಾಸ್‌ ನಾಯಕ್‌,  ನಿಯೋಜಿತ ರೋಟರಿ ಗವರ್ನರ್‌ ಅಭಿನಂದನ್‌ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಶೆಟ್ಟಿ,  ಚಿತ್ರದ ನಿರ್ಮಾಪಕ ರಾಘವೇಂದ್ರ ಶೇರುಗಾರ್‌, ಹಿರಿಯ ನ್ಯಾಯವಾದಿ ರವಿಕಿರಣ್‌ ಮುಡೇìಶ್ವರ, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್‌,  ನಿರ್ದೇಶಕ ಅರ್ಜುನ್‌ ದಾಸ್‌, ಚಿತ್ರದ ನಟ ರಥಿಕ್‌ ಮುಡೇìಶ್ವರ, ನಟಿ ಶ್ರೀನಿಧಿ ಶೆಟ್ಟಿ, ರಾಧಾಕೃಷ್ಣ ಬಸೂÅರು, ಪ್ರಶಾಂತ್‌ ಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು.ಸಿಟಿ ಜೇಸಿಸ್‌ ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ ಸ್ವಾಗತಿಸಿದರು. ಸಂದೇಶ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next