ಮುಂಬಯಿ: ಕನ್ನಡ ಸೇವಾ ಸಂಘ ಭಾಯಂದರ್ ಇದರ ನೂತನ ಕಚೇರಿಯ ಉದ್ಘಾಟನ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6.30ರಿಂದ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆಯು ಮೀರಾರೋಡ್‌ನ ರಾಮಚಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಿತು. ಪೂಜಾ ವಿಧಿ-ವಿಧಾನಗಳಲ್ಲಿ ಮಾಧವ ಶೆಟ್ಟಿ ಮತ್ತು ರತ್ನಾಕರ ಪೂಜಾರಿ ದಂಪತಿ ಪಾಲ್ಗೊಂಡರು.
ಪೂರ್ವಾಹ್ನ 10ರಿಂದ ತೀರ್ಥ ಪ್ರಸಾದ ವಿತರಣೆ, ಬಳಿಕ ಹನುಮಾನ್ ಭಜನ ಮಂಡಳಿಯ ಶ್ರೀಧರ ಶೆಟ್ಟಿ ಅವರ ನೇತೃತ್ವದಲ್ಲಿ ಭಜನ ಕಾರ್ಯಕ್ರಮ ನೆರವೇರಿತು. ಮಹಿಳೆಯರು, ತುಳು-ಕನ್ನಡಿಗ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆನಂತರ ಕನ್ನಡ ಸೇವಾ ಸಂಘದ ಸದಸ್ಯರು ಭಜನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಧ್ಯಾಹ್ನನ 12.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಪರಿಸರದ ಹೊಟೇಲ್ ಉದ್ಯಮಿಗಳಾದ ಪದ್ಮನಾಭ ಪಯ್ಯಡೆ, ಜಯ ಶೆಟ್ಟಿ, ಜಯಪ್ರಕಾಶ್ ಭಂಡಾರಿ ಅವರು ಆಗಮಿಸಿ ಶುಭ ಹಾರೈಸಿದರು. ಆನಂದ ಕುಕ್ಕುಂದೂರು, ಕವಿ, ಲೇಖಕ ಭುಜಂಗ ಕುರ್ಕಾಲ್, ಶಿವರಾಮ ರೈ, ಜಯರಾಮ ಶೆಟ್ಟಿ, ನಗರ ಸೇವಕ ಗಣೇಶ್ ಶೆಟ್ಟಿ, ಪರಿಸರದ ನಗರ ಸೇವಕ, ಸುಧೀರ್ ಪುತ್ರನ್ ಅವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಆನಂದ ಎ. ಶೆಟ್ಟಿ, ವಿಶ್ವನಾಥ ಮೆಂಡನ್, ಸದಾನಂದ ಕರ್ಕೇರ, ರೋಹಿತ್ ಸುವರ್ಣ, ಮಾಧವ ಶೆಟ್ಟಿ, ಪ್ರಭಾಕರ ಶೆಟ್ಟಿ, ಲೋಕೇಶ್ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಲಕ್ಷ್ಮಣ್ ಕರ್ಕೇರ, ಗೋಪಾಲ್ ಸುವರ್ಣ, ಸದಾಶಿವ ಸಾಲ್ಯಾನ್, ಪುರುಷೋತ್ತಮ ಕಾಂಚನ್, ರಾಮಚಂದ್ರ ಉಚ್ಚಿಲ, ಜಗನ್ನಾಥ ಪುತ್ರನ್, ಕೆ. ಎಂ. ಕೋಟ್ಯಾನ್, ಅಪ್ಪು ಶೆಟ್ಟಿ, ಬಿ. ಡಿ. ಶೆಟ್ಟಿ, ಲೋಕನಾಥ ಕಾಂಚನ್, ರಾಮಪ್ಪ ಕೋಟ್ಯಾನ್, ಕರುಣಾಕರ ಮೈಂದನ್ ಮೊದಲಾದವರು ಸಹಕರಿಸಿದರು.
ಡಿವೈನ್‌ಪಾರ್ಕ್‌ನ ಜಯಂತಿ ಉಚ್ಚಿಲ್, ಸುಮಿತ್ರಾ ಕರ್ಕೇರ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಅಧ್ಯಕ್ಷೆ ಆನಂದಿ ಬಂಗೇರ ಮತ್ತು ಇಂದಿರಾ ಆನಂದಿ ಶೆಟ್ಟಿ ಅವರ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಇಂದಿರಾ ಸಾಲ್ಯಾನ್, ಅಂಬಾ ಶೆಟ್ಟಿ, ಶೋಭಾ ಶೆಟ್ಟಿ ಸುಧಾ ಕೋಟ್ಯಾನ್, ಸಂಧ್ಯಾ ಶೆಟ್ಟಿ, ಕುಸುಮಾ ಪೂಜಾರಿ, ಮೋಹಿನಿ ಪೂಜಾರಿ, ಜ್ಯೋತಿ ಪೂಜಾರಿ, ಪ್ರೇಮಾ ಶೆಟ್ಟಿ ಅವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪರಿಸರದ ಎಲ್ಲಾ ಜಾತಿಯ ಬಾಂಧವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಉಪಾಧ್ಯಕ್ಷ ಸದಾನಂದ ಕರ್ಕೇರ ಅವರ ವತಿಯಿಂದ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.