Advertisement

ಕಟೀಲು ಶ್ರೀದೇವಿ ಚರಿತೆ : ಕನ್ನಡ ಧಾರಾವಾಹಿಗೆ ನಾಳೆ ಮುಹೂರ್ತ

03:40 AM Jul 04, 2017 | Team Udayavani |

ಹೆಬ್ರಿ: ಚೆಲ್ಲಡ್ಕ ಚಂದ್ರಹಾಸ್‌ ಆಳ್ವ ಅವರ ನಿರ್ದೇಶನದ ಮತ್ತೂಂದು ಮಹೋನ್ನತ ಪೌರಾಣಿಕ ಕನ್ನಡ – ತುಳು ಧಾರಾವಾಹಿ ‘ಕಟೀಲು ಶ್ರೀದೇವಿ ಚರಿತೆ’ಯ ಚಿತ್ರೀಕರಣಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಜು. 5ರಂದು ಬೆಳಗ್ಗೆ 10.30ಕ್ಕೆ ಚಾಲನೆ ದೊರೆಯಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಕೆಮರಾ ಚಾಲನೆ ನೀಡಲಿದ್ದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ. ಸಚಿವ ಬಿ. ರಮಾನಾಥ ರೈ, ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಅಭಯಚಂದ್ರ ಜೈನ್‌, ಐಕಳ ಹರೀಶ್‌ ಶೆಟ್ಟಿ, ಮಾಲಾಡಿ ಅಜಿತ್‌ ಕುಮಾರ್‌ ರೈ, ಡಾ| ಮೋಹನ ಆಳ್ವ ಮೊದಲಾವರು ಭಾಗವಹಿಸಲಿದ್ದಾರೆ.

Advertisement

ಮುಂಬಯಿ ಉದ್ಯಮಿ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ ಅವರ ವಿಶೇಷ ಪ್ರೋತ್ಸಾಹದೊಂದಿಗೆ ಚೆಲ್ಲಡ್ಕ ದಡ್ಡಂಗಡಿ ಭವಾನಿ ಕ್ರಿಯೇಶನ್ಸ್‌ ನಿರ್ಮಾಣದ ಧಾರಾವಾಹಿಯಲ್ಲಿ ದಡ್ಡಂಗಡಿ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ದಡ್ಡಂಗಡಿ ಚೆಲ್ಲಡ್ಕ ಪ್ರಕಾಶ್‌ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಕೋಟಿ ಚೆನ್ನಯ ಧಾರಾವಾಹಿಯಲ್ಲಿ ಚೆನ್ನಯನ ಪಾತ್ರದಲ್ಲಿ ಗಮನ ಸೆಳೆದ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲು ವಿಶೇಷ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ತುಳುನಾಡಿನ ಹೊಸ ಪ್ರತಿಭೆಗಳು ನಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next