Advertisement
ದಾಖಲಾತಿ ಬಿರುಸುರಾಜ್ಯೋತ್ಸವ ಸಂದರ್ಭದಲ್ಲೇ ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗುತ್ತಿದೆ ಎಂಬುದು ಸದ್ಯದ ಸಿಹಿ ಸುದ್ದಿ. ಸರಕಾರಿ ಶಾಲೆಗಳ ಪ್ರವೇಶ ದರ ಶೇ.15 ರಿಂದ 20ರ ವರೆಗೆ ಏರಿದೆ. ಕೊರೊನಾ ಸಂಕಷ್ಟ ಅದೆಷ್ಟೋ ಮಂದಿ ಹಳ್ಳಿಗಳಿಗೆ ವಾಪಸ್ ಹೋಗುವಂತೆ ಮಾಡಿದ್ದು, ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ. ಅದೆಷ್ಟೋ ಕಡೆಗಳಲ್ಲಿ ಗ್ರಾಮಸ್ಥರೇ ಶಾಲೆಗಳನ್ನು ದತ್ತು ಪಡೆದು ಸರಕಾರಿ ಶಾಲೆಗಳ ಅಭಿವೃದ್ಧಿಗೂ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇನ್ನಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ 2020-21ನೇ ಸಾಲಿಗೆ ಸರಕಾರಿ ಶಾಲೆಗಳಲ್ಲಿ ಶೇ.15ರಿಂದ 20ರಷ್ಟು ದಾಖಲಾತಿ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲೂ ಸರಕಾರಿ ಶಾಲೆಗಳಿಗೆ ಸೇರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ ಜವಾಬ್ದಾರಿ ಸರಕಾರ ಮತ್ತು ಶಿಕ್ಷಣ ಇಲಾಖೆಯ ಮೇಲಿದೆ. ಶಾಲೆಯ ಭೌತಿಕ ಸೌಲಭ್ಯಗಳನ್ನು ಕೂಡ ಉನ್ನತ ಮಟ್ಟಕ್ಕೇರಿಸುವ ಅಗತ್ಯವಿದೆ. ಸಶಕ್ತೀಕರಣ ಹೇಗೆ?
Related Articles
Advertisement
– ಮಕ್ಕಳ ಸುರ ಕ್ಷೆಗಾಗಿ ತರಗತಿ ಕೊಠಡಿಗಳ ದುರಸ್ತಿ.– ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭ.
– ಶಿಕ್ಷಕರನ್ನು ಕಲಿಕೆಗೆ ಮಾತ್ರ ಸೀಮಿತವಾಗಿಸುವುದು.
– ಹೊಸ ಶಿಕ್ಷಕರ ನೇಮಕಾತಿ.
– ತಂತ್ರಜ್ಞಾನ ಬಳಕೆಗೆ ಒತ್ತು. ದತ್ತು ಯೋಜನೆ ಅನುಷ್ಠಾನ
ಕನ್ನಡ ಶಾಲೆಗಳ ಗುಣಮಟ್ಟ ಹೆಚ್ಚಳಕ್ಕೆ ಈಗಾಗಲೇ ಸರಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಲೇ ಬಂದಿದೆ. ಇದರಲ್ಲಿ ಒಂದು ಸರಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ| ಎಂ.ಆರ್.ದೊರೆಸ್ವಾಮಿ ಅವರ ಸಲಹೆಯಂತೆ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಸರಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಅಭಿವೃದ್ಧಿಪಡಿಸುವುದು. ಇದರ ಅಡಿಯಲ್ಲಿ ಈಗಾಗಲೇ ಬಹುತೇಕ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 3ರಿಂದ 5 ಸರಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಕನ್ನಡ ಶಾಲೆಗಳ ಬೆಳವಣಿಗೆ ಹೇಗೆ?
– ಮಕ್ಕಳ ಸೇರ್ಪಡೆ ಸರಕಾರಿ ಶಾಲೆಗಳಿಗೆ ಸಿಕ್ಕ ತಾತ್ಕಾಲಿಕ ಬೇಡಿಕೆಯಷ್ಟೇ. ಮುಂದೆ ವಾಪಸ್ ಹೋಗುತ್ತಾರೆ ಎಂಬ ಭಾವನೆ ಬೇಡ.
– ಒಮ್ಮೆ ಬಂದ ಮಕ್ಕಳನ್ನು ಸಂಪೂರ್ಣವಾಗಿ ಅಲ್ಲಿಯೇ ಉಳಿಸಿಕೊಳ್ಳಲು ಶ್ರಮಿಸಬೇಕು.
– ಶಾಲೆಗಳ ಮೂಲಸೌಲಭ್ಯ, ಕೊಠಡಿ, ಶೌಚಾಲಯ ವ್ಯವಸ್ಥೆ, ಮೈದಾನದ ವ್ಯವಸ್ಥೆ ಮಾಡಬೇಕು.
– ಶಿಕ್ಷಕರಿಲ್ಲದ ಕಡೆಗಳಲ್ಲಿ ಅತ್ಯಂತ ತ್ವರಿತವಾಗಿ ನೇಮಕಾತಿ ಆಗಬೇಕು.
– ಗ್ರಾಮಗಳ ಮಟ್ಟದಲ್ಲೇ ಶಾಲೆಗಳನ್ನು ದತ್ತು ಪಡೆಯಲು ಉತ್ತೇಜಿಸಬೇಕು.
– ಶೈಕ್ಷಣಿಕ ಗುಣಮಟ್ಟದಲ್ಲಿ ಖಾಸಗಿ ಶಾಲೆಗಳ ಜತೆ ಸ್ಪರ್ಧೆಗೆ ಸಿದ್ಧವಾಗಬೇಕು.
– ಗಡಿ ಭಾಗದ ಶಾಲೆಗಳನ್ನೂ ಬೆಳೆಸುವ ಯೋಜನೆಗಳು ಆಗಬೇಕು.
– ಆನ್ ಲೈನ್, ಡಿಜಿಟಲ್ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು.
– ಪಠ್ಯ ಕ್ರಮಯೇತರ ಚಟುವಟಿಕೆಗಳನ್ನು ಹೆಚ್ಚಿಸಿ ಮಕ್ಕಳನ್ನು ಸೆಳೆಯಬೇಕು.
– ಕೇಂದ್ರೀಕೃತ ಕಲಿಕೆಗೆ ಒತ್ತು ನೀಡುವುದು. ಚಂದನ, ಯುಟ್ಯೂಬ್ ಪರಿಣಾಮಕಾರಿ ಬಳಕೆ.