Advertisement

ಶ್ರೀಕೃಷ್ಣ ವೇಷ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೋಣದ ಸೊಗಸ್

03:05 PM Sep 04, 2018 | |

ನವಿಮುಂಬಯಿ: ಸಾಹಿತ್ಯ ಬಳಗ ಮುಂಬಯಿ ಹಾಗೂ ನವಿ ಮುಂಬಯಿ ಕನ್ನಡ ಸಂಘ ವಾಶಿ ಇವರ ಜಂಟಿ ಅಯೋಜನೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೋಣದ ಸೊಗಸ್‌ ವೈಶಿಷ್ಟéಪೂರ್ಣ ಕಾರ್ಯಕ್ರಮವು ಆ.  25 ಮತ್ತು 26 ರಂದು ಎರಡು ದಿನಗಳ ಕಾಲ  ನವಿ ಮುಂಬಯಿಯ ಕನ್ನಡ ಸಂಘ ವಾಶಿಯ ಸಭಾಗೃಹದಲ್ಲಿ ಜರಗಿತು.

Advertisement

ಆ. 25  ರಂದು ಶ್ರಾವಣ ಕವಿಗೋಷ್ಠಿ ಸೋಣದ ಸೊಗಸ್‌  ಕಾರ್ಯಕ್ರಮವು ಡಾ|  ಕೆ. ಗೋವಿಂದ ಭಟ್‌ ಅವರ ಅಧ್ಯಕ್ಷತೆಯಲ್ಲಿ ಗೀತಾಲಕ್ಷ್ಮೀ ಅವರ ನಿರೂಪಣೆಯಲ್ಲಿ ನಿನ್ನ ನಾಮದ ಬಲವೊಂದಿದ್ದರೆ ಸಾಕು ವಿಷಯದ ಮೇಲೆ ನಡೆಯಿತು. ನಗರದ ಕವಿಗಳಾದ ಸಾ. ದಯಾ, ಡಾ|  ಕರುಣಾಕರ ಶೆಟ್ಟಿ, ಪಣಿಯೂರು, ಪ್ರಕಾಶ್‌ ತದಡಿಕರ, ಪ್ರಮೋದ ಮಾಡ, ಬಿ. ಎಚ್‌. ಕಟ್ಟಿ, ರಶ್ಮಿ ಭಟ್‌, ಪೊಳಲಿ ಮಹೇಶ್‌ ಹೆಗ್ಡೆ ಪುಣೆ, ತಾರಾ ಬಂಗೇರ, ಡಾ| ಜಿ. ಪಿ. ಕುಸುಮಾ, ಅಮಿತಾ ಭಾಗವತ್‌. ಕುಮುದಾ ಆಳ್ವ, ನಳಿನಿ ಪ್ರಸಾದ್‌, ಶೋಭಾ ಶೆಟ್ಟಿ, ಶಾರದಾ ಅಂಬೆಸಂಗೆ, ಶಾಂತಾ ಶೆಟ್ಟಿ, ಶಾಂತಾ ಶಾಸ್ತ್ರಿ, ಅಶೋಕ್‌ ವಳದೂರು, ಗೀತಾ ಲಕ್ಷ್ಮೀಕೃಷ್ಣ ಭಗವಾನ್‌ ಅವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಕವಿಗೋಷ್ಠಿಯ ನಂತರ ಜರಗಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣಾಮೃತ ಪೌಂಡೇಶನ್‌ ಇದರ ಸಂಸ್ಥಾಪಕ ಎನ್‌. ಆರ್‌. ರಾವ್‌ ಅವರು ವಹಿಸಿದ್ದು,  ಮುಖ್ಯ ಅಭ್ಯಾಗತರಾಗಿ ಬಿಲ್ಲವರ ಅಸೋಸಿಯೇಶನ್‌ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಆಗಮಿಸಿದ್ದರು.  ಸಾಹಿತ್ಯ ಬಳಗದ ಅಧ್ಯಕ್ಷ ಎಚ್‌. ಬಿ. ಎಲ್‌. ರಾವ್‌ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಧುಸೂದನ್‌ ಟಿ. ಆರ್‌. ಅವರು ಜೇಷ್ಠ ನಾಗರಿಕರಿಗಾಗಿ ಕೃಷ್ಣನು ಮನೆಗೆ ಬಂದರೆ ನಾನೇನು ಮಾಡುವೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದರು.
ಆನಂತರ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕಾವ್ಯಾ ಭಾಗವತ್‌, ಕಲಾ ಭಾಗವತ್‌, ಹೇಮಾ ಹೆಗ್ಡೆ, ಮೇಧಾ ಹೆಗ್ಡೆ, ದಿವ್ಯಾ ರಾವ್‌, ಆಶಾ ಕುಲಕರ್ಣಿ, ಸ್ವಾತಿ ಕುಲಕರ್ಣಿ, ಸುಮಾ  ನಾಯಕ್‌ ಅವರು ಭಾಗವಹಿಸಿದ್ದರು.  ಅನುರಾಧ ರಾವ್‌ ಅವರು ಕಾರ್ಯಕ್ರಮ  ನಿರ್ವಹಿಸಿದರು.

ಆ. 26 ರಂದು ಅಪರಾಹ್ನ 3ರಿಂದ ಶ್ರೀಕೃಷ್ಣ  ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 17 ನೇ  ವರ್ಷದ ಈ ಸ್ಪರ್ಧೆಯಲ್ಲಿ ಮುದ್ದು ಕೃಷ್ಣನಾಗಿ 7 ಮಕ್ಕಳು, ಬಾಲ ಕೃಷ್ಣನಾಗಿ 7 ಮಕ್ಕಳು ಮತ್ತು ನೃತ್ಯ ಕೃಷ್ಣ ಸ್ಪರ್ಧೆಯಲ್ಲಿ 7 ಮಂದಿ ಮಕ್ಕಳು ಭಾಗವಹಿಸಿ ಸಭಿಕರ ಮೆಚ್ಚುಗೆ ಪಡೆದರು. ತೀರ್ಪುಗಾರರಾಗಿ ರಚಿತಾ ರಾವ್‌ ಮತ್ತು ರೇಖಾ ರಾವ್‌ ಸಹಕರಿಸಿದರೆ, ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ನಡೆದ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಚಿತಾ ರಾವ್‌ ನಿರ್ದೇಶನದಲ್ಲಿ ಕಾನಾ ಸೋ ಜಾರೆ ಮತ್ತು ವಿಷ್ಣು ಸ್ತೋತ್ರಂ ಸಮೂಹ ನೃತ್ಯ ನಡೆಯಿತು. ಭಾರ್ಗವಿ ಪೋತಿ, ಪ್ರತೀûಾ ಭಟ್‌, ಸೌಮ್ಯಶ್ರೀ ಭಟ್‌, ತನ್ವಿ ರಾವ್‌, ಜಾನ್ಹವಿ ಪೋತಿ,  ಮನಸ್ವಿ ಭಾರಧ್ವಾಜ್‌ ಭಾಗವಹಿಸಿದರು. ಹಿನ್ನೆಲೆ ಗಾಯನ ಸಹನಾ ಪೋತಿ ಮತ್ತು ಸಹನಾ ಭಾರಧ್ವಾಜ್‌ ನೀಡಿದರು.    ಪದ್ಮ ಭಟ್‌ ಬಳಗದವರು ನಡೆಸಿಕೊಟ್ಟ ಸಮೂಹ ನೃತ್ಯದಲ್ಲಿ ಗುಬ್ಬಿ ಹಾಡು ಪದ್ಯಕ್ಕೆ ಪದ್ಮ ಭಟ್‌, ಸ್ಮಿತಾ ಭಟ್‌, ಸಂಧ್ಯಾ ಮೋಹನ್‌, ಶ್ವೇತಾ ಅಂಬೇಕರ್‌, ಜ್ಯೋತಿ ಪ್ರಸಾದ್‌, ಜ್ಯೊತಿ ರಾಮ್‌ ಪ್ರಸಾದ್‌ ಭಾಗವಹಿಸಿದರು.

Advertisement

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಕುಲದ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ವಹಿಸಿ ಮಾತನಾಡಿ, ಬದುಕಿನಲ್ಲಿ ಶಿಸ್ತಿನ ಮಹತ್ವ ತಿಳಿಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ನ್ಯಾಯವಾದಿ ಪ್ರಕಾಶ್‌ ಎಲ…. ಶೆಟ್ಟಿ ಅವರು ಕೃಷ್ಣನ ಬದುಕು ಅವನ ರಾಜಕೀಯ ಇಂದಿನ ನಮ್ಮ ಬದುಕಿಗೆ ಹೇಗೆ ಅನ್ವಯವಾಗುತ್ತದೆ ಎಂಬುವುದನ್ನು ವಿವರಿಸಿದರು.
ಇಸ್ಕಾನ್‌ನ ಅಕಿಂಚನ್‌ ಸ್ವಾಮೀಜಿಯವರು ನಾವು ಮಾನವನಾಗಿ ಹೇಗೆ ಬಾಳು ಸಾಗಿಸಬೇಕೆನ್ನುವ ಬಗ್ಗೆ ಉಪನ್ಯಾಸ ನೀಡಿದರು. ಮತ್ತೂಬ್ಬ ಅತಿಥಿ ಸುಧೀರ್‌ ಆರ್‌. ಎಲ್‌. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಪ್ರತಿಭಾ ರಾವ್‌ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next