Advertisement

ಕನ್ನಡ ಸಂಘ ಸಾಂತಾಕ್ರೂಜ್‌ ನೂತನ ಪದಾಧಿಕಾರಿಗಳ ಆಯ್ಕೆ

02:33 PM Sep 08, 2017 | Team Udayavani |

ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್‌ 2017-2020ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸೆ. 7 ರಂದು  ಸಂಜೆ ಸಾಂತಾಕ್ರೂಜ್‌ ಪೂರ್ವದ ವಕೋಲಾದ  ಸಂಘದ ಕಚೇರಿಯಲ್ಲಿ ನಡೆಯಿತು.

Advertisement

2017-2020ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಎಲ್‌. ವಿ.  ಅಮೀನ್‌ ಅವರನ್ನು ಸಭೆಯು ಏಳ‌ನೇ ಬಾರಿಗೆ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿಯಾಗಿ  ಆಗಿ ಸುಜಾತಾ ಆರ್‌. ಶೆಟ್ಟಿ ಅವರನ್ನು ದ್ವಿತೀಯ ಬಾರಿಗೆ ಸರ್ವಾನುಮತದಿಂದ ಪುನಾರಾಯ್ಕೆಗೊಳಿಸಿತು. ಕಳೆದ ಶನಿವಾರ ಸಂಘದ ಅರ್ವತ್ತನೇ ವಾರ್ಷಿಕ ಮಹಾಸಭೆಯು ಸಾಂತಾಕ್ರೂಜ್‌ ಪೂರ್ವದ  ಬಿಲ್ಲವ ಭವನದ ಕಿರು ಸಭಾಗƒಹದಲ್ಲಿ ನಡೆಸಲ್ಪಟ್ಟಿದ್ದು ಮಹಾಸಭೆಯ ಕಾರ್ಯಸೂಚಿಯಂತೆ ಒಟ್ಟು 556 ಸದಸ್ಯತ್ವವುಳ್ಳ ಸಂಘದ ಭವಿಷ್ಯತ್ತಿನ ಸಮಿತಿಗೆ  ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಬೇಕಿತ್ತು. ಆದರೆ ಈ ಬಾರಿ ಕಾರ್ಯಕಾರಿ ಸಮಿತಿಗೆ ಹದಿನೈದು ಸದಸ್ಯತ್ವಕ್ಕಾಗಿ ಸುಮಾರು 28 ಸದಸ್ಯರು ನಾಮಪತ್ರ ಸಲ್ಲಿಸಿರುವ ಕಾರಣ ಚುನಾವಣೆ ಮುಖೇನ ಆಯ್ಕೆ ನಡೆಸಲ್ಪಟ್ಟಿತು.

ಮತದಾನದಲ್ಲಿ ಪ್ರಸಕ್ತ ಅಧ್ಯಕ್ಷ ಎಲ್‌. ವಿ. ಅಮೀನ್‌ ಗರಿಷ್ಠ ಮತಗಳಿಂದ ಚುನಾಯಿತರಾದರು. ಅಂತೆಯೇ ಸ್ಪರ್ಧಿಸಿದ್ದ ದಿನೇಶ್‌ ಬಿ. ಅಮೀನ್‌, ಲಕ್ಷ್ಮೀ ಎನ್‌. ಕೋಟ್ಯಾನ್‌, ಬನ್ನಂಜೆ ರವೀಂದ್ರ ಅಮೀನ್‌, ಚಂದ್ರಹಾಸ ಜೆ. ಕೋಟ್ಯಾನ್‌, ಸುಜಾತಾ ಆರ್‌. ಶೆಟ್ಟಿ, ಗೋವಿಂದ ಆರ್‌. ಬಂಗೇರ, ಶಾರದಾ ಎಸ್‌. ಪೂಜಾರಿ, ಸುಮಾ ಎಂ. ಪೂಜಾರಿ, ಸುಧಾಕರ್‌ ಉಚ್ಚಿಲ್‌, ಶಕೀಲಾ ಪಿ. ಶೆಟ್ಟಿ, ವನಿತಾ ನೋಂದ, ಶಾಲಿನಿ ಎಸ್‌. ಶೆಟ್ಟಿ, ಗುಣಪಾಲ ಶೆಟ್ಟಿ ಐಕಳ, ಆರ್‌. ಪಿ. ಹೆಗ್ಡೆ ಚುನಾಯಿತರಾದರು. ಚುನಾವಣಾ ಅಧಿಕಾರಿಗಳಾಗಿ ಧರ್ಮೆàಶ್‌ ಎಸ್‌. ಸಾಲ್ಯಾನ್‌, ಬಿ. ಆರ್‌. ಪೂಂಜಾ ಮತ್ತು ವಿಜಯಕುಮಾರ್‌ ಕೆ. ಕೋಟ್ಯಾನ್‌ ಚುನಾವಣಾ ಪ್ರಕ್ರಿಯೆ ನಡೆಸಿದರು.

ಉಪಾಧ್ಯಕ್ಷರಾಗಿ  ಗುಣಪಾಲ ಶೆಟ್ಟಿ ಐಕಳ, ಗೌರವ ಪ್ರಧಾನ ಕೋಶಾಧಿಕಾರಿಯಾಗಿ ಸುಧಾಕರ್‌ ಉಚ್ಚಿಲ್‌, ಜತೆ ಕಾರ್ಯದರ್ಶಿಯಾಗಿ  ಚಂದ್ರಹಾಸ ಜೆ. ಕೋಟ್ಯಾನ್‌, ಜತೆ ಕೋಶಾಧಿಕಾರಿಯಾಗಿ  ದಿನೇಶ್‌ ಬಿ. ಅಮೀನ್‌ ಅವರು ನೇಮಕಗೊಂಡರು. ಗೋವಿಂದ ಆರ್‌. ಬಂಗೇರಾ, ಶಾರದಾ ಎಸ್‌. ಪೂಜಾರಿ, ಸುಮಾ ಎಂ. ಪೂಜಾರಿ, ಶಾಲಿನಿ ಎಸ್‌. ಶೆಟ್ಟಿ, ಆರ್‌. ಪಿ. ಹೆಗ್ಡೆ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕಗೊಂಡರು.

ನಾರಾಯಣ ಎಸ್‌. ಶೆಟ್ಟಿ, ಬಿ. ಆರ್‌. ಪೂಂಜಾ, ಎನ್‌. ಎಂ. ಸನೀಲ್‌ ಅವರು ಸಲಹಾ ಸಮಿತಿಯ  ಸದಸ್ಯರಾಗಿ,  ಶಿವರಾಮ ಎಂ.ಕೋಟ್ಯಾನ್‌, ಲಿಂಗಪ್ಪ ಬಿ. ಅಮೀನ್‌, ಸುರೇಶ್‌ ಎನ್‌. ಶೆಟ್ಟಿ, ವಿಜಯಕುಮಾರ್‌ ಕೆ. ಕೋಟ್ಯಾನ್‌, ಉಷಾ ವಿ. ಶೆಟ್ಟಿ, ಹರೀಶ್‌ ಜೆ. ಪೂಜಾರಿ, ಸುಜತಾ ಸುಧಾಕರ್‌ ಉಚ್ಚಿಲ್‌ ಅವರು ವಿಶೇಷ ಆಮಂತ್ರಿತ ಸದಸ್ಯರಾಗಿ ಆಯ್ಕೆಯಾದರು.

Advertisement

ಲೆಕ್ಕಪರಿಶೋಧಕರಾಗಿ ರಾಜಶೇಖರ್‌ ಎ. ಅಂಚನ್‌, ಬಾಹ್ಯ ಲೆಕ್ಕ ಪರಿಶೋಧಕರಾಗಿ  ಎಚ್‌. ಡಿ. ಪೂಜಾರಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಬನ್ನಂಜೆ ರವೀಂದ್ರ ಅಮೀನ್‌, ಕಾರ್ಯದರ್ಶಿಯಾಗಿ ಶಕೀಲಾ ಪಿ. ಶೆಟ್ಟಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ವನಿತಾ ವೈ. ನೋಂದ, ಕಾರ್ಯದರ್ಶಿಯಾಗಿ ಲಕ್ಷ್ಮೀ ಎನ್‌. ಕೋಟ್ಯಾನ್‌ ಅವರು ಆಯ್ಕೆಯಾದರು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಅಧ್ಯಕ್ಷರು ಉಪಸ್ಥಿತ ನೂತನ ಪದಾಧಿಕಾರಿಗಳಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಗೌರವ ಪ್ರಧಾನ  ಕಾರ್ಯದರ್ಶಿ ಸುಜತಾ ಆರ್‌. ಶೆಟ್ಟಿ ಸ್ವಾಗತಿಸಿ ನೂತನ ಪದಾಧಿಕಾರಿಗಳ ಯಾದಿ ಪ್ರಕಟಿಸಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next