ಮುಂಬಯಿ: ಕನ್ನಡ ಸಂಘ ಸಾಂತಾಕ್ರೂಜ್ ಇದರ 60ನೇ ವಾರ್ಷಿಕ ಮಹಾಸಭೆಯು ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್ ಅಧ್ಯಕ್ಷತೆಯಲ್ಲಿ ಜರಗಿತು.
ನಮ್ಮ ಹಿರಿಯರು ನಮ್ಮ ಮತ್ತು ನಮ್ಮ ಭವಿಷ್ಯದ ಜನತೆಯ ಹಿತಕ್ಕಾಗಿ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಯಾವುದೋ ಪುಣ್ಯದ ಫಲವಾಗಿ ಈ ಸಂಘದ ಸಾರಥ್ಯ ವಹಿಸಿ ಮುನ್ನಡೆಸುವ ಭಾಗ್ಯ ನಮ್ಮ ಪಾಲಿಗೆ ಒದಗಿದೆ. ಇದನ್ನು ನಾವು ಪ್ರಾಮಾಣಿಕವಾಗಿ ಮುನ್ನಡೆಸಬೇಕೇ ಹೊರತು ನಮ್ಮ ಖಾಸಗಿತನ ಅಥವಾ ಸ್ವಾರ್ಥಕ್ಕಾಗಿ ಸದ್ಭಳಕೆ ಮಾಡಬಾರದು. ಸಂಘ ಸಂಸ್ಥೆಗಳಲ್ಲಿ ಎಂದಿಗೂ ವೈಯಕ್ತಿಕ ಸ್ವಾರ್ಥ ಸಲ್ಲದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎಲ್.ವಿ. ಅಮೀನ್ ನುಡಿದರು.
ಸೂಕ್ತ ಸಲಹೆ ಸೂಚನೆಗಳಿಂದ ಸಂಘ ಸಂಸ್ಥೆಗಳು ಪ್ರಾಮಾಣಿಕವಾಗಿ ಮುನ್ನಡೆಯುವುದು. ನಮ್ಮ ಸಂಘವು ಸದಸ್ಯರ ಮಾನ್ಯತೆ ಅಂತೆಯೇ ಮುನ್ನಡೆಯುತ್ತಿದೆ. ಇದರಿಂದ ಸಾರ್ಥಕ 60 ವರ್ಷದ ಸೇವೆಗೆ ಅಣಿಯಾಗಿದೆ. ಸಂಸ್ಥೆ ಹುಟ್ಟು ಹಾಕಿದವರ ಕನಸು ನನಸಾಗುತ್ತಿದೆ. ಹಿರಿಯರ ಚಿಂತನೆಗೆ ನಾವೂ ಬದ್ಧರಾಗಿ ಭವಿಷ್ಯತ್ತಿನ ಪೀಳಿಗೆಗೆ ಈ ಸಂಸ್ಥೆಯನ್ನು ಮುನ್ನಡೆಸಬೇಕಾಗಿದೆ. ಮಕ್ಕಳು ಶಿಕ್ಷಣವಂಚಿತರಾಗಬಾರದು ಎಂದು ದತ್ತಿ ಸ್ವೀಕಾರದ ಮುಖೇನ ಶೈಕ್ಷಣಿಕವಾಗಿ ಪ್ರೋತ್ಸಾಹಿಸುತ್ತಿದೆ. ದಾನಿಗಳ ಪ್ರೋತ್ಸಾಹದಿಂದ ಸಂಘವು ಬಲಾಡ್ಯವಾಗುತ್ತಿದ್ದು, ಇದನ್ನು ಸಮಾಜಮುಖೀ ಸೇವೆಗೆ ವಿನಿಯೋಗಿಸುತ್ತೇವೆ ಎಂದು ಎಲ್.ವಿ ಅಮೀನ್ ಅವರು ತಿಳಿಸಿದರು.
ಜೊತೆ ಕೋಶಾಧಿಕಾರಿ ಆರ್.ಪಿ ಹೆಗ್ಡೆ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ವೇದಿಕೆಯಲ್ಲಿ ಆಸೀನರಾಗಿದ್ದು, ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿಮರಾಮ ಕೋಟ್ಯಾನ್, ಜಿ.ಆರ್ ಬಂಗೇರ, ಸುಧಾಕರ್ ಉಚ್ಚಿಲ್, ಲಕ್ಷ್ಮೀ ಎನ್.ಕೋಟ್ಯಾನ್, ಸುಮಾ ಎಂ.ಪೂಜಾರಿ, ವನಿತಾ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಸಲಹಾ ಸಮಿತಿ ಸದಸ್ಯರಾದ ನಾರಾಯಣ ಎಸ್.ಶೆಟ್ಟಿ, ಬಿ.ಆರ್ ಪೂಂಜಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಾರದಾ ಎಸ್.ಪೂಜಾರಿ, ಲೆಕ್ಕ ಪರಿಶೋಧಕ ದಿನೇಶ್ ಅಮೀನ್, ವಿವಿಧ ಉಪ ಸಮಿತಿಗಳ ಪ್ರಸನ್ನ ಶೆಟ್ಟಿ, ಶಿವರಾಮ ಕೋಟ್ಯಾನ್, ಲಿಂಗಪ್ಪ ಬಿ.ಅಮೀನ್, ಉಷಾ ಪಿ.ಶೆಟ್ಟಿ, ಚಂದಯ್ಯ ಪೂಜಾರಿ, ಶಾಲಿನಿ ಜಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಲಕ್ಷ್ಮಿ à ಎನ್.ಕೋಟ್ಯಾನ್ ಅವರು ಪ್ರಾರ್ಥನೆ ಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜಾತಾ ಆರ್.ಶೆಟ್ಟಿ ಅವರು ಸ್ವಾಗತಿಸಿ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್