Advertisement

ಕನ್ನಡ ಸಂಘ ಪುಣೆ ವೈಶಿಷ್ಟ್ಯ ಪೂರ್ಣ ವಾರ್ಷಿಕ ವಿಹಾರಕೂಟ

12:33 PM Jan 10, 2018 | |

ಪುಣೆ: ಪ್ರತಿ ವರ್ಷದಂತೆ ಕನ್ನಡ ಸಂಘ ಪುಣೆ ತನ್ನ ಸದಸ್ಯರು ಮತ್ತು ಪರಿವಾರದವರಿಗೆ ವೈಶಿಷ್ಟ್ಯಪೂರ್ಣ ವಾರ್ಷಿಕ ವಿಹಾರ ಕೂಟವನ್ನು ಜ. 7 ರಂದು ಆಯೋಜಿಸಿತ್ತು. ಮೊದಲಿಗೆ ಪುಣೆಯ ಪ್ರಸಿದ್ಧ ರಾಷ್ಟ್ರೀಯ ರಕ್ಷಣಾ ಪ್ರಾಧಿಕಾರ ಮತ್ತು ಘಾಡಗೆ ಫಾರ್ಮ್ ಎಂಬ ಮನೋರಂಜನ ಪಾರ್ಕಿಗೆ ಒಂದು ದಿನದ ಕಿರು ಪ್ರವಾಸವನ್ನು ಆಯೋಜಿಸಿ ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು.

Advertisement

ಭಾರತ ಮಾತ್ರವಲ್ಲದೆ ವಿಶ್ವದಲ್ಲಿ ಪ್ರಸಿದ್ಧಿ ಹೊಂದಿರುವ  ರಕ್ಷಣಾ ತರಬೇತಿ ಕೇಂದ್ರದಲ್ಲಿ ಸದಸ್ಯರಿಗೆ ಅಲ್ಲಿನ ಅಶ್ವ ಪಾಲನಾ ಮತ್ತು ತರಬೇತಿ ಕೇಂದ್ರ, ಸೈನ್ಯ, ವಾಯು ಮತ್ತು ನೌಕಾ  ಪಡೆಗಳಿಗೆ ನುರಿತ ಅಭಿಕಾರಿಗಳಿಗೆ ತರಬೇತಿ ನೀಡುವ ಪ್ರಕ್ರಿಯೆಗಳನ್ನು ವಿವರಿಸಿ ತಿಳಿಸಲಾಯಿತು. ಅದಲ್ಲದೇ ಪ್ರಾಧಿಕಾರದ ಚರಿತ್ರೆಯನ್ನು ವಿವರಿಸುವ ಸಂಗ್ರಹಾಲಯ, ಅತ್ಯಂತ ವಿಶಾಲ ಸಭಾಗೃಹದಲ್ಲಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡುವ ಕಿರುಚಿತ್ರ ಪ್ರದರ್ಶನ, ಭಾರತದ ಅತಿ ದೊಡ್ಡ 3000 ಜನರನ್ನು ಏಕಕಾಲದಲ್ಲಿ ಉಣಬಡಿಸುವ ಸ್ವಚ್ಚ ಸುಂದರ ಉಪಹಾರಗೃಹ, ವರ್ಣರಂಜಿತ ಕಾರಂಜಿ  ಹೂ ಮರಗಳನ್ನು ಹೊಂದಿರುವ ಅತ್ಯಂತ ವಿಶಾಲ ಪರಿಸರ ಎಲ್ಲವೂ ಸದಸ್ಯರ ಮನಸೂರೆಗೊಂಡಿತು.

ಭಾರತದ ರಕ್ಷಣಾ ಅಧಿಕಾರಿಗಳನ್ನು ಸಿದ್ಧಗೊಳಿಸುವ  ಸಂಸ್ಥೆಯನ್ನು ನೋಡಿ ಸದಸ್ಯರು  ಹೆಮ್ಮೆ ಪಟ್ಟು ಸಂತೋಷಗೊಂಡರು. ನಂತರ ಸಿಂಹಘಡದ ಸಮೀಪದ ರೆಸಾರ್ಟ್‌ಗೆ ಹೋಗಿ ಮಧ್ಯಾಹ್ನದ  ಭೋಜನ  ಮತ್ತು ಸದಸ್ಯರಿಂದ ವಿವಿಧ ಗುಣ ದರ್ಶನ, ತಟಬೂಲ  ಮುಂತಾದ ಕಾರ್ಯಕ್ರಮದಲ್ಲಿ 6 ರಿಂದ 86 ರವರೆಗಿನ ಸದಸ್ಯರು ಹಾಗು ಅವರ ಪರಿವಾರದವರು ಪಾಲ್ಗೊಂಡು ಸಂತಸಗೊಂಡರು.

ಈ ವೈಶಿಷ್ಟÂಪೂರ್ಣ ವಿಹಾರ ಕೂಟವನ್ನು ಆಯೋಜಿಸಿದ ಕನ್ನಡ ಸಂಘಕ್ಕೆ ಸದಸ್ಯರು  ಮೆಚ್ಚುಗೆ ವ್ಯಕ್ತ ಪಡಿಸಿ ಕೃತಜ್ಞತೆ ಸಲ್ಲಿಸಿ  ಕನ್ನಡ ಸಂಘಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮ ಆಯೋಜನೆಯಲ್ಲಿ ಸಂಘದ ಜನಸಂಪರ್ಕಾಧಿಕಾರಿ  ರಾಮದಾಸ್‌ ಆಚಾರ್ಯ, ಆಡಳಿತಾಧಿಕಾರಿ  ಪ್ರಸಾದ್‌ ಅಕೊಲ್ಕರ್‌, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಸಂಸ್ಥೆಯ ಮುಖ್ಯ ಶಿಕ್ಷಕರಾದ ಜ್ಯೋತಿ ಕಡ್ಕೊಲ್‌, ಚಂದ್ರಕಾಂತ್‌ ಹರಕುಡೆ ಮತ್ತು ಕನ್ನಡ ಸಂಘದ ಇತರ ಸದಸ್ಯರು ಆಸಕ್ತಿಯಿಂದ ಸಹಕರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next