Advertisement

ಶ್ರೀ ಆದಿಶಕ್ತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ

04:55 PM Mar 08, 2017 | |

ಥಾಣೆ: ಆದಿಶಕ್ತಿ ಕನ್ನಡ ಸಂಘ ಥಾಣೆ ಸಂಚಾಲಕತ್ವದ ಶ್ರೀ ಆದಿಶಕ್ತಿ ಕನ್ನಡ ಮಾಧ್ಯಮಿಕ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರಗಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆಯ ಅಧ್ಯಕ್ಷ ಶಿಮಂತೂರು ಶಂಕರ್‌ ಶೆಟ್ಟಿ ಮಾತನಾಡಿ, ಜೀವನದಲ್ಲಿ ನೀವು ಉತ್ತಮ ಸಂಸ್ಕಾರವನ್ನು ಪಡೆದು, ಆದರ್ಶ ಪ್ರಜೆಗಳಾಗಿ ಬಾಳಬೇಕು. ಗುರುಗಳ ಭಕ್ತಿಯಿಂದ ನಿಮಗೆ ಶಕ್ತಿ ದೊರೆಯುತ್ತದೆ ಎಂದು ನುಡಿದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಕಾಣುವಂತಾಗಬೇಕು ಎಂದು ಹಾರೈಸಿದರು. ಸಂಘದ

ಉಪಾಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿ
ಗಳು ಶ್ರದ್ಧೆಯಿಂದ ಅಭ್ಯಾಸಗೈದು ಶೇ. 100 ಫಲಿ
ತಾಂಶ ತಂದು ಶಾಲೆಗೆ ಕೀರ್ತಿ ತರಬೇಕು ಎಂದರು.
ಸಂಘದ ಸಲಹೆಗಾರ ರಮನಾಥ ಐಲ್‌ ಮತ್ತು ಆದಿಶಕ್ತಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಜಯರಾಮ ಜಿ. ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಶುಭ ಕೋರಿದರು. 
ಮಾಧ್ಯಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ, ಮಾಧ್ಯಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಭಟ್‌, ಸಹ ಶಿಕ್ಷಕರಾದ ಪ್ರಮೋದಾ ಎಸ್‌. ಮಾಡ, ವೆಂಕಟರಮಣ ಶೆಣೈ, ಮಮತಾ ಶೆಟ್ಟಿ, ಸಂತೋಷ್‌ ದೊಡ್ಮನಿ, ಸುಜಯಾ ಜೈನ್‌ ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಶುಭ ಹಾರೈಸಿದರು.ಸಂಘದ ಕೋಶಾಧಿಕಾರಿ ಕೇಶವ ಎಂ. ಆಳ್ವ ಉಪಸ್ಥಿತರಿದ್ದರು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಕ್ಷ ಶಂಕರ್‌ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಜಯರಾಮ ಜಿ. ಶೆಟ್ಟಿ ಲೇಖನಿ ವಿತರಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಕಿರುಕಾಣಿಕೆಯನ್ನು ನೀಡಿ ತಮ್ಮ ಅನುಭವ ಹಂಚಿಕೊಂಡರು. 9ನೇ ತರಗತಿಯ ವಿದ್ಯಾರ್ಥಿಗಳಾದ ಸುಷ್ಮಿತಾ ಪೂಜಾರಿ, ಭಕ್ತಿ ಧೋತ್ರೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಊರ್ಮಿಳಾ ಚೌಹಾಣ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next