Advertisement

ಅಕ್ಷರ ಜಾತ್ರೆ: ಬಸ್, ರೈಲ್ವೆ ನಿಲ್ದಾಣದಲ್ಲಿ ಸಹಾಯ ಕೇಂದ್ರ

09:20 AM Feb 06, 2020 | Mithun PG |

ಕಲಬುರಗಿ: ನೃಪತುಂಗನ ನಾಡು ಕಲಬುರಗಿಯಲ್ಲಿ ಇಂದಿನಿಂದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದ್ದು, ರಾಜ್ಯದ ವಿಭಾಗಗಳಿಂದ ಕನ್ನಡಾಭಿಮಾನಿಗಳು ಆಗಮಿಸತೊಡಗಿದ್ದಾರೆ.

Advertisement

ಅಕ್ಷರ ಜಾತ್ರೆಗೆ ದೂರದ ಊರುಗಳಿಂದ ಬರುತ್ತಿರುವ ಜನರು ಮತ್ತು ನೋಂದಾಯಿತ ಪ್ರತಿನಿಧಿಗಳ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನೋಂದಣಿ ಮಾಡಿಸಿಕೊಂಡ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದು, ಸಹಾಯಕ ಕೇಂದ್ರಗಳನ್ನು ಸಂಪರ್ಕಿಸುವವರಿಗೆ ಯಾವ ಸ್ಥಳದಲ್ಲಿ ವಾಸ್ತವ್ಯ ಮಾಡಲಾಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ.

ಸಾರಿಗೆ ವ್ಯವಸ್ಥೆ: ನೋಂದಾಯಿತ ಪ್ರತಿನಿಧಿಗಳಿಗೆ ಲಾಡ್ಜ್, ಸರ್ಕಾರಿ, ಖಾಸಗಿ ವಸತಿ ನಿಲಯ, ಕಲ್ಯಾಣ ಮಂಟಪಗಳು ಸೇರಿ 113 ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಬಂದಿಳಿಯುವವರಿಗೆ ಸಹಾಯ ಕೇಂದ್ರದ ಮೂಲಕ ವಸತಿ ಸ್ಥಳಕ್ಕೆ ಹೋಗಲು ಉಚಿತ ಸಾರಿಗೆ ವ್ಯವಸ್ಥೆ ಸಹ ಮಾಡಲಾಗಿದೆ.

ಸಹಾಯ ಕೇಂದ್ರಗಳ ಜೊತೆಗೆ ಸಹಾಯವಾಣಿಯನ್ನೂ ತೆರೆಯಲಾಗಿದೆ.

ಮೊಬೈಲ್ ಸಂಖ್ಯೆ: 90085 42950, 81055 42950, 72595 42950 ಮತ್ತು 96195 42950ಗೆ ಸಂಪರ್ಕಿಸಬಹುದಾಗಿದೆ.

Advertisement

ವಿಶೇಷ ಸಾರಿಗೆ ಸೌಲಭ್ಯ:  ಕಲಬುರಗಿ ನಗರದ ಎಲ್ಲಾ ಬಡಾವಣೆಗಳಿಂದ ಸಮ್ಮೇಳನ ನಡೆಯುವ ಸ್ಥಳವಾದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶೇಷ ಮತ್ತು ಹೆಚ್ಚುವರಿ ನಗರ ಸಾರಿಗೆ ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ನಗರದಲ್ಲಿ ಸಂಚರಿಸುವ ಎಲ್ಲ ನಗರ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ಸ್ಥಳದಲ್ಲಿ ಹತ್ತಿ ಇಳಿದರೂ 5. ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಅಲ್ಲದೇ, ನಗರದಲ್ಲಿನ ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಕನಿಷ್ಠ 30 ಜನ ಪ್ರಯಾಣಿಕರಿದ್ದಲ್ಲಿ ಪ್ರತಿ ಪ್ರಯಾಣಿಕರಿಂದ 125 ರೂ.  ಪಡೆದು ಸಾರಿಗೆ ಸಂಸ್ಥೆಯಿಂದ ವಾಹನಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next