Advertisement
ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಅರ್ಥಪೂರ್ಣ ಧ್ಯೇಯಯೊಂದಿಗೆ ಮೂರು ದಿನ ನಡೆದ ಯಶಸ್ವಿ ಸಮ್ಮೇಳನ, ಮುಂದಿನ ಸಾಹಿತ್ಯ ಸಮ್ಮೇಳನಗಳ ಅಚ್ಚುಕಟ್ಟು ವ್ಯವಸ್ಥೆಗೆ ಮುನ್ನುಡಿ ಹಾಕಿಕೊಟ್ಟಂತಾಗಿದೆ. ಸಮ್ಮೇಳನಾ ಧ್ಯಕ್ಷರ ಅದ್ದೂರಿ ಮೆರವಣಿಗೆ, ಅರಮನೆ ದರ್ಬಾರ್ ಮಾದರಿಯಲ್ಲಿ ರಚಿಸಿದ ಕೆಂಪು, ಹಳದಿ ಹಾಗೂ ಬಂಗಾರದ ವರ್ಣಗಳಿಂದ ನಿರ್ಮಿ ಸಿದ ವಿಶೇಷ ರಥ, ರಾಜ್ಯಾದ್ಯಂತ ಸಂಚ ರಿಸಿದ ತಾಯಿ ಭುವನೇಶ್ವರಿಯ ಸುಂದರ ಕನ್ನಡ ರಥಯಾತ್ರೆ, ಏಲಕ್ಕಿ ಕಂಪಿನ ನಗರಕ್ಕೆ ದಸರಾ ಮಾದರಿಯಲ್ಲಿ ಮಾಡಿದ ದೀಪಾಲಂಕಾರ, ಅಕರ್ಷಕ ಸಾರೋಟುಗಳ ವ್ಯವಸ್ಥೆ, ಲಕ್ಷಾಂತರ ಜನರಿಗೆ ನಿತ್ಯ ರುಚಿ-ಶುಚಿಯಾದ ವೈವಿ ಧ್ಯಮ ಯ ಖಾದ್ಯದ ಊಟ, ಯಾವುದೇ ಗದ್ದಲ ಗಲಾಟೆಗೆ ಆಸ್ಪದ ನೀಡದಿರಲು ಮಾಡಿದ 200 ಊಟದ ಕೌಂಟರ್‌ಗಳು, ವಸತಿ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Related Articles
Advertisement
ಇದು ಸಮ್ಮೇಳನ ಆತಿಥ್ಯ ಬಯಸುವ ಪುಟ್ಟ ಜಿಲ್ಲೆಗಳಲ್ಲಿ ಹೊಸ ಪ್ರೇರಣೆ ತುಂಬಿದಂತಾಗಿದೆ. ಸಾಹಿತ್ಯ ಸಮ್ಮೇಳನ ಇಷ್ಟೊಂದು ಅಚ್ಚು ಕಟ್ಟಾಗಿ, ಅರ್ಥಪೂರ್ಣವಾಗಿ ನಡೆದಿರುವುದರ ಹಿಂದೆ ಹಾವೇರಿ ಜಿಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಸಾಪ ಅಧ್ಯಕ್ಷ ಡಾ| ಮಹೇಶ ಜೋಶಿ ಅವರ ತವರು ಜಿಲ್ಲೆ ಎಂಬ ಬಲವೂ ಇತ್ತು ಎಂಬುದನ್ನು ಮರೆಯುವಂತಿಲ್ಲ.
ಜನಪದ ಜಾತ್ರೆಯಾದ ನುಡಿ ಜಾತ್ರೆಹಾವೇರಿಯಲ್ಲಿ ನಡೆದ ಅಕ್ಷರ ಜಾತ್ರೆ ಕೇವಲ ಸಾಹಿತ್ಯ-ಸಾಂಸ್ಕೃತಿಕ ಜಾತ್ರೆ ಆಗಿರಲಿಲ್ಲ. ಇದು ಅಕ್ಷರಶಃ ಜನಪದ ಜಾತ್ರೆಯಾಗಿ, ಜನಸಾಮಾನ್ಯರ ಉತ್ಸವವಾಗಿ ಅಚರಿಸಲ್ಪಟ್ಟಿತು. ಮಾತಲ್ಲಿ, ಮನದಲ್ಲಿ ಅಷ್ಠೆà ಏಕೆ, ಇಡೀ ಬದುಕಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡ ಉತ್ತರ ಕರ್ನಾಟಕದ ಅಪ್ಪಟ್ಟ ಗ್ರಾಮೀಣ ಕನ್ನಡಿಗರೇ ಸಮ್ಮೇಳನದಲ್ಲಿ ಅ ಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ, ಸಾಹಿತ್ಯ ಸಮ್ಮೇಳನ ಜನಪದ ಸಮ್ಮೇಳನದ ರಂಗು ಪಡೆದುಕೊಂಡಿದ್ದು ಸಹ ವಿಶೇಷ. ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕ. ಇಲ್ಲಿಯ ವ್ಯವಸ್ಥಿತ ಆಯೋಜನೆ ನಿಜಕ್ಕೂ ಮುಂದಿನ ಸಮ್ಮೇಳನಗಳಿಗೆ ಮಾದರಿ ಯಾಗಿದೆ. ಇಲ್ಲಿ ನಡೆದ ಗೋಷ್ಠಿಗಳಲ್ಲಿ ಜನರು ಆಸಕ್ತಿಯಿಂದ ಭಾಗವಹಿಸಿದ್ದು ನೋಡಿದರೆ ಸಮ್ಮೇಳನ ಅರ್ಥಪೂರ್ಣವಾಗಿದೆ ಎಂದೇ ಹೇಳಬೇಕು.
ಶಿವರಾಜ ಪಾಟೀಲ, ವಿಶ್ರಾಂತ ನ್ಯಾಯಮೂರ್ತಿ, ಸುಪ್ರಿಂ ಕೋರ್ಟ್ ಮೊದಲು ಸಮ್ಮೇಳನ ಹೇಗೆ ನಡೆಯುತ್ತದೆಯೋ ಎಂಬ ಆತಂಕ ಇತ್ತು. ಈಗ ಹಾವೇರಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುವ ಮೂಲಕ ಜಿಲ್ಲೆಯ ಹೆಮ್ಮೆ, ಕೀರ್ತಿ ಹೆಚ್ಚಿಸಿದೆ. ಲಕ್ಷಾಂತರ ಜನರು ಸೇರುವ ಕಾರ್ಯಕ್ರಮ ನಡೆಸಲು ಹಿಂದೇಟು ಹಾಕುತ್ತಿದ್ದ ಜಿಲ್ಲೆಯವರಿಗೆ ಈ ಸಮ್ಮೇಳನದ ಯಶಸ್ಸು ಹೊಸ ಉತ್ಸಾಹ ತುಂಬಿದೆ.
-ಎಂ.ಎಸ್. ಕೋರಿಶೆಟ್ಟರ್, ಸಾಮಾಜಿಕ ಕಾರ್ಯಕರ್ತರು, ಹಾವೇರಿ -ಎಚ್.ಕೆ.ನಟರಾಜ್