Advertisement

ಪ್ರತಿ ತಾಲೂಕಿನಲ್ಲೂ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ : ಕಸಾಪ ನೂತನ ಅಧ್ಯಕ್ಷ

08:40 PM Jan 15, 2022 | Team Udayavani |

ಹುಣಸೂರು : ಜಿಲ್ಲಾ ಕಸಾಪವತಿಯಿಂದ ಪ್ರತಿ ತಾಲೂಕಿನಲ್ಲೂ ಒಂದೊಂದು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಪಡಿಸಲಾಗುವುದೆಂದು ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಪ್ರಕಟಿಸಿದರು.

Advertisement

ಹುಣಸೂರು ತಾಲೂಕು ಕಸಾಪವತಿಯಿಂದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಹಾಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು ತಮ್ಮನ್ನು ಎರಡನೇ ಬಾರಿಗೆ ಅತೀ ಹೆಚ್ಚು ಅಂತರದಿಂದ ಚುನಾಯಿಸಲು ಸಹಕರಿಸಿದ ಎಲ್ಲಾ ಕನ್ನಡದ ಕಲಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು ಈ ಬಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದು ದಾನಿಗಳ ನೆರವಿನಿಂದ ಸಮಗ್ರ ಅಭಿವೃದ್ದಿ ಪಡಿಸಲಾಗುವುದು.

ಗ್ರಂಥಾಲಯ ಸ್ಥಾಪನೆ:
ಹಳ್ಳಿಗಳಲ್ಲಿ ಗ್ರಂಥಾಲಯ ಸ್ಥಾಪಿಸಿ, ಓದುವ ಅಭಿರುಚಿ ಬೆಳೆಸಲಾಗುವುದು. ಇಲ್ಲಿ ದಿನಪತ್ರಿಕೆಗಳು, ನಿಯತಕಾಲಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅತ್ಯವಶ್ಯವಾದ ಪುಸ್ತಕಗಳನ್ನು ಪೂರೈಸುವ ಅಭಿಲಾಷೆ ಇದೆ. ಅಲ್ಲದೆ ಪ್ರತಿ ತಾಲೂಕು ಕೇಂದ್ರದಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.

ಯುವ ಬರಹಗಾರರಿಗೆ ಪ್ರೋತ್ಸಾಹ:
ಬರೆಯುವ ಛಾತಿ ಹೊಂದಿರುವ ವಿದ್ಯಾರ್ಥಿಗಳು, ಯುವ ಬರಹಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಕೃತಿ ರಚಿಸುವ ಉದ್ದೇಶ ಹೊಂದಿದ್ದು, ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಲಾಗುವುದೆಂದರು.

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ ಮಾತನಾಡಿ ಸ್ವಂತ ಭವನವಿಲ್ಲದ ತಾಲೂಕಿನ ಕಸಾಪ ಘಟಕದ ಎಲ್ಲ ಚಟುವಟಿಕೆಗಳಿಗೆ ಸಂಘವು ಬೆಂಬಲ ನೀಡುವುದಲ್ಲದೆ, ಸ್ಥಳಾವಕಾಶ ನೀಡಲಾಗುವುದೆಂದು ಪ್ರಕಟಿಸಿದರು.

Advertisement

ಸಭೆಯಲ್ಲಿ ನಿರ್ಗಮಿತ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಸಂಚಾಲಕ ವಿಜಯಕುಮಾರ್, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್, ಮಾಜಿ ಅಧ್ಯಕ್ಷರಾದ ಎಸ್.ಜಯರಾಮ್, ಉಮಾಪತಿ, ಸಾಯಿನಾಥ್, ಶಿಕ್ಷಕ ಲೋಕೇಶ್ ಮಾತನಾಡಿದರು. ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ, ಖಜಾಂಚಿ ಕುಮಾರ್ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ : ಹಾವೇರಿ : ಎರಡು ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ಚಂ.ಪಾಗೆ ಸಂತಾಪ:
ಸಭೆಗೂ ಮುನ್ನ ಅಗಲಿದ ಸಾಹಿತಿ ಚಂದ್ರಶೇಖರ ಪಾಟೀಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಾರ್ಥ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

ಅಧ್ಯಕ್ಷಗಾಧಿಗೆ ಇಬ್ಬರು ಆಕಾಂಕ್ಷಿಗಳು:
ಕಸಾಪ ಹುಣಸೂರು ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಿಕ್ಷಕ ಹರವೆ ಮಹದೇವ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನೌಕರ ರೇಣುಕಾಪ್ರಸಾದ್‌ರ ನಡುವೆ ತುರುಸಿನ ಸ್ಪರ್ಧೆ ಇದ್ದು, ಸಭೆಯಲ್ಲಿ ಈರ್ವರು ತಮ್ಮ ಕನ್ನಡದ ಕಾರ್ಯಚಟುವಟಿಕೆಗಳನ್ನು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next