Advertisement
ನಗರದ ದಾನೇಶ್ವರಿ ನಗರದ ಜಿಲ್ಲಾ ಪದವಿ ಪೂರ್ವ ನೌಕರರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಜಿಲ್ಲಾ ಕಸಾಪ ಘಟಕದ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಬರಹಗಾರರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಧಾರವಾಡದ ಸಾಹಿತಿ ಶಾಮಸುಂದರ ಬಿದರಕುಂದಿ ಮಾತನಾಡಿ, ಧಾರವಾಡದಲ್ಲಿ ನಡೆದ ಸಮ್ಮೇಳನದಲ್ಲಿ ಹಲವು ಮೌಲಿಕ ಕೃತಿಗಳನ್ನು ಹೊರತಂದಿದ್ದು, ಸ್ಥಳೀಯ ಸಾಹಿತಿ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಿಲಾಗಿತ್ತು. ಹೊಸಬರು ಹೆಚ್ಚಾಗಿದ್ದರೂ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಂಡಿರಲಿಲ್ಲ. ಆದ್ದರಿಂದ ಸಂಗ್ರಹಯೋಗ್ಯ ಪುಸ್ತಕಗಳು ಹೊರಬಂದವು. ಆದಷ್ಟು ಸ್ಥಳೀಯ ಹೋರಾಟಗಾರರು, ಸಾಹಿತಿಗಳು, ಸಮಾಜ ಸೇವಕರು ಹಾಗೂ ಜಿಲ್ಲೆಯ ಸಮಗ್ರ ಮಾಹಿತಿಯುಳ್ಳ ಜಿಲ್ಲಾ ದರ್ಶನ ಪುಸ್ತಕ ಪ್ರಕಟವಾಗಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇಂಥಹ ಕಾರ್ಯಾಗಾರದ ಮೂಲಕ ತಮ್ಮ ಪ್ರತಿಭೆ ಅನಾವರಣವಾಗಲು ಸಹಾಯಕವಾಗುತ್ತಿದೆ. ಪುಸ್ತಕ ಪ್ರಕಟಣೆಗೆ ಮುಂಚೆ ಇನ್ನೂ ಹಲವಾರು ಕಮ್ಮಟ ಏರ್ಪಡಿಸಿ ಹೆಚ್ಚಿನ ಮಾರ್ಗದರ್ಶನ ಮಾಡಲಾಗುವುದು ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಪತ್ರಕರ್ತ ಶ್ರೀಧರ ಮೂರ್ತಿ, ನಾಗರಾಜ ದ್ಯಾಮನಕೊಪ್ಪ, ಎಸ್.ಎನ್. ದೊಡ್ಡಗೌಡರ, ಕೆ.ಎಚ್. ಮುಕ್ಕಣ್ಣನವರ, ಕೆ.ಎಸ್. ಕೌಜಲಗಿ, ಶ್ರೀಶೈಲ ಹುದ್ದಾರ, ಶಶಿಧರ ಯಲಿಗಾರ, ಪ್ರಕಾಶ ಮನ್ನಂಗಿ, ಪಿ.ಟಿ. ಲಕ್ಕಣ್ಣನವರ, ಎ.ಬಿ. ರತ್ನಮ್ಮ, ನಾಗರಾಜ ಅಡಿಗ, ಪ್ರಭು ಅರಗೋಳ ಇತರರು ಇದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್. ಬೇವಿನಮರದ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ನಿರೂಪಿಸಿದರು. ಬಿ.ಪಿ. ಶಿಡೇನೂರ ವಂದಿಸಿದರು.
ನುಭವಿಗಳ ತವರೂರಾಗಿದ್ದು, ಇಲ್ಲಿಯೂ ಹಲವಾರು ಪ್ರತಿಭಾವಂತ ಬರಹಗಾರಿದ್ದಾರೆ. ಅವರನ್ನು ಮುಖ್ಯವಾಹಿಗೆ ತರಲು ಇಂತಹ ಕಾರ್ಯಾಗಾರ ಹಮ್ಮಿಕೊಂಡಿದ್ದು, ಗುಣಮಟ್ಟದ ಪುಸ್ತಕಗಳು ಪ್ರಕಟವಾಗುವ ಆಶಾಭಾವನೆಯಿದೆ. –ಮಹೇಶ ಜೋಶಿ, ಕಸಾಪ ಅಧ್ಯಕ್ಷ