Advertisement

27ರಂದು ಅಥಣಿ ಕಸಾಪ ಪದಗ್ರಹಣ

05:00 PM Apr 21, 2022 | Team Udayavani |

ಅಥಣಿ: ಗಡಿ ಭಾಗದಲ್ಲಿ ನಾಡು-ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ ನಿರಂತರವಾಗಿ ಕಾರ್ಯ ಮಾಡಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಹೇಳಿದರು.

Advertisement

ಅವರು ಪಟ್ಟಣದ ಲೋಕಾಪೂರ ಮಹಾ ವಿದ್ಯಾಲಯದಲ್ಲಿ ತಾಲೂಕಾ ಕಸಾಪ ಅಧ್ಯಕ್ಷರಿಗೆ ರಾಜ್ಯ ಕಸಾಪ ಅಧ್ಯಕ್ಷರಾದ ಮಹೇಶ ಜೋಶಿ ಅವರಿಂದ ಪದಗ್ರಹಣ ಸಮಾರಂಭ ಹಾಗೂ ಮಹೇಶ ಜೋಶಿ ಅವರಿಗೆ ಅಭಿನಂದನಾ ಸಮಾರಂಭದ ಪೂರ್ವಭಾವಿಯಲ್ಲಿ ಮಾತನಾಡಿ, ಎಲೆಮರೆ ಪ್ರತಿಭೆಗಳಿಗೆ ಅವಕಾಶ, ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ, ಇನ್ನೂ ಅನೇಕ ವಿಚಾರಗಳನ್ನು ಇಟ್ಟಕೊಂಡು ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಶ್ರಮಿಸುವೆ ಎಂದು ತಿಳಿಸಿದರು.

ಆರ್‌.ಎಸ್‌.ಎಸ್‌. ಮುಖಂಡ ಅರವಿಂದರಾವ್‌ ದೇಶಪಾಂಡೆ ಮಾತನಾಡಿ, ನಾಡು-ನುಡಿ, ಗಡಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ, ಕನ್ನಡ ಭಾಷೆ ಬಳಕೆಯ ಭಾಷೆ ಆಗಬೇಕು. ಇಲ್ಲದಿದ್ದರೆ ಭಾಷೆಗೆ ಉಳಿಗಾಲವಿಲ್ಲ ಎಂದರು.

ಪದಗ್ರಹಣ ಸಮಾರಂಭ ಹಾಗೂ ಮಹೇಶ ಜೋಶ ಅವರ ಸನ್ಮಾನವನ್ನು ಅದ್ದೂರಿಯಾಗಿ ಏ. 27ರಂದು ಆರ್‌.ಎಚ್‌.ಕುಲಕರ್ಣಿ ಸಭಾ ಭವನದಲ್ಲಿ ಏರ್ಪಡಿಸಲು ನಿರ್ಧರಿಸಲಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತಿ ಬಾಳಾಸಾಬ ಲೋಕಾಪೂರ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ನುಡಿ, ಸಂಸ್ಕೃತಿ ಉಳಿವಿಗಾಗಿ ರಾಜ್ಯ ಕಸಾಪದಿಂದ ಹೆಚ್ಚಿನ ಸಹಕಾರ ನೀಡುವಂತೆ ಕೋರೋಣ ಎಂದರು.

Advertisement

ಶಿವಪುತ್ರ ಯಾದವಾಡ, ಮಹಾಂತೇಶ ಉಕ್ಕಲಿ, ರಾವಸಾಬ ಜಕನೂರ, ಅಪ್ಪಾಸಾಬ ಅಲಿಬಾದಿ, ಡಾ.ಅರ್ಚನಾ ಅಥಣಿ, ರೋಹಿಣಿ ಯಾದವಾಡ, ದೇವೇಂದ್ರ ಬಿಸ್ವಾಗರ, ಪಿ.ಎಲ್‌.ಪೂಜಾರಿ, ಉದಯ ಕುಲಕರ್ಣಿ, ಪಿ.ಎಮ್‌.ಅಣ್ಣೇಪ್ಪನವರ, ಎನ್‌.ಬಿ.ಝರೆ, ಆರ್‌.ಎ.ಜೋಷಿ, ಆರ್‌.ಎ.ನಾಯಿಕ, ವಿಜಯಕುಮಾರ ಅಡಹಳ್ಳಿ, ಡಾ.ದೊಡ್ಡನಿಂಗಾಪಗೋಳ, ಸಿ.ಎ. ಇಟ್ನಾಳಮಠ ಉಪಸ್ಥಿತರಿದ್ದರು. ಅಣ್ಣಪ್ಪಾ ತೆಲಸಂಗ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next