Advertisement

ಕನ್ನಡ ರ್ಯಾಪರ್‌ ಜೊತೆ ಸೂಪರ್‌ ಕನ್ನಡದ ಕೋಗಿಲೆ 

02:25 PM May 26, 2018 | |

ನೀವು ನಿಜಕ್ಕೂ ಚೆನ್ನಾಗಿ ಹಾಡ್ತೀರಾ? ನಿಮ್ಮ ಪ್ರತಿಭೆಯನ್ನು ಯಾರೂ ಪ್ರೋತ್ಸಾಹಿಸುತ್ತಿಲ್ಲ ಅಂತ ಕೊರಗುತ್ತಿದ್ದೀರಾ? ಇಲ್ಲಿದೆ ನೋಡಿ ಅವಕಾಶದ ಬಾಗಿಲು. ಕನ್ನಡ ರ್ಯಾಪರ್‌ ಚಂದನ್‌ ಶೆಟ್ಟಿ ಗೊತ್ತಲ್ವಾ?

Advertisement

ಅವರು ಕಲರ್ ಸೂಪರ್‌ ವಾಹಿನಿಯಲ್ಲಿ “ಕನ್ನಡದ ಕೋಗಿಲೆ’ ಎಂಬ ಹೊಚ್ಚ ಹೊಸ ಸಂಗೀತ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಅದರಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಳ್ಳಬಯಸುವವರಿಗಾಗಿ ಆಡಿಷನ್‌ ಹಮ್ಮಿಕೊಳ್ಳಲಾಗಿದೆ.

6ರಿಂದ 60 ವರ್ಷದೊಳಗಿನವರು ಆಡಿಷನ್‌ನಲ್ಲಿ ಭಾಗವಹಿಸಬಹುದು. ಸ್ಪರ್ಧಿಗಳು ತಮ್ಮೊಡನೆ 5 ಪಾಸ್‌ಪೋರ್ಟ್‌ ಪೋಟೋ ಮತ್ತು ಪೋಟೋ ಐ.ಡಿಯನ್ನು ಕಡ್ಡಾಯವಾಗಿ ತರಬೇಕು. ಆಯ್ಕೆಯಾದವರಿಗೆ ಚಂದನ್‌ ಶೆಟ್ಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ.

ಎಲ್ಲಿ?: ಮ್ಯಾಕ್ಸ್‌ಮುಲ್ಲರ್‌ ಪಬ್ಲಿಕ್‌ ಶಾಲೆ, 8ನೇ ಮುಖ್ಯರಸ್ತೆ, 2ನೇ ಕ್ರಾಸ್‌, ಬಸವೇಶ್ವರನಗರ
ಯಾವಾಗ?: ಮೇ 27, ಬೆಳಗ್ಗೆ 9- ಮಧ್ಯಾಹ್ನ 3
ಹೆಚ್ಚಿನ ಮಾಹಿತಿಗೆ: 9148843006

Advertisement

Udayavani is now on Telegram. Click here to join our channel and stay updated with the latest news.

Next