Advertisement

ಅಕ್ಷರ ಜ್ಞಾನದಿಂದ ಬಂಧಿಗಳ ಬಾಳಿಗೆ ಬೆಳಕಾಗಿ

12:47 PM Nov 02, 2021 | Team Udayavani |

ಬಳ್ಳಾರಿ: ಯಾವುದೋ ಒಂದು ಕೆಟ್ಟ ಘಳಿಗೆಯಿಂದ ಕಾರಾಗೃಹದಲ್ಲಿ ಬಂಧಿಯಾಗಿ ಇಡೀ ಜೀವನವೇ ಮುಗಿದುಹೋಯ್ತು ಎಂಬ ಚಿಂತೆಯಲ್ಲೇ ಕಾಲದೂಡುತ್ತಿರುವ ಬಂಧಿಗಳಿಗೆ ಅಕ್ಷರಭ್ಯಾಸ ಮಾಡಿಸುವುದರ ಮೂಲಕಅವರನ್ನು ಅಕ್ಷರಸ್ಥರನ್ನಾಗಿ ಮಾಡಿ, ಅವರ ಮುಂದಿನ ಬಾಳು ಬೆಳಕಾಗಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌.ಎಚ್‌ .ಪುಷ್ಪಾಂಜಲಿದೇವಿ ಹೇಳಿದರು.

Advertisement

ನಗರದ ಕೇಂದ್ರ ಕಾರಾಗೃಹದಲ್ಲಿ ಲೋಕಶಿಕ್ಷಣ ನಿರ್ದೇಶನಾಲಯ ಮತ್ತು ಕಾರಾಗೃಹ ಸುಧಾರಣಾ ಇಲಾಖೆ,ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ 2021-22ನೇ ಸಾಲಿನ “ಕಲಿಕೆಯಿಂದ ಬದಲಾವಣೆ’ಸಾಕ್ಷರತಾ ಕಾರ್ಯಕ್ರಮಕ್ಕೆ ಬಂಧಿಗಳಿಗೆಅಕ್ಷರ ಕಲಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕಾರಾಗೃಹದಿಂದ ಬಂಧಿಗಳು ಹೊರಹೋಗಿ ಸಮಾಜದಲ್ಲಿ ಜನರ ಜತೆಗೆ ಅತ್ಯಂತ ನೆಮ್ಮದಿಯಿಂದ ಜೀವನ ನಡೆಸುವಂತ ರೀತಿಯಲ್ಲಿ ಶಿಕ್ಷಣವನ್ನು ಕಲಿಸುವ ಕೆಲಸವನ್ನು ಮಾಡಬೇಕು. ಅನಕ್ಷರಸ್ಥ ಬಂಧಿಗಳಿಗೆ ಅಕ್ಷರ ಜ್ಞಾನ ಕಲಿಯಲು ಒಂದು ಸುವರ್ಣಾವಕಾಶ ಕಲ್ಪಿಸಲಾಗಿದ್ದು, ಇದನ್ನು ತಾವೆಲ್ಲರೂಅತ್ಯಂತ ಸದವಕಾಶ ಎಂದು ಭಾವಿಸಿಅಕ್ಷರಾಭ್ಯಾಸ ಮಾಡಿ ಅಕ್ಷರಸ್ಥರಾಗಬೇಕು ಎಂದರು.

ಜಿಪಂ ಸಿಇಒ ಕೆ.ಆರ್‌. ನಂದಿನಿ ಮಾತನಾಡಿ, ಅನಕ್ಷರಸ್ಥರಿಗೆ ಅಕ್ಷರ ಜ್ಞಾನನೀಡುವ ಹೊಸ ಕಾರ್ಯಕ್ಕೆ ಸರ್ಕಾರ ನಾಂದಿ ಹಾಡಿದೆ. ಕಾರಾಗೃಹದ ಎಲ್ಲಬಂಧಿಗಳು ಕೂಡ ಇದರಲ್ಲಿ ಭಾಗಿಯಾಗಿಅಕ್ಷರ ಜ್ಞಾನ ಪಡೆಯಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ ಮಾತನಾಡಿ, ಹುಟ್ಟಿನಿಂದ ಯಾರೂ ಅಪರಾಧ ಮಾಡಿರಲ್ಲ.ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿಮಾಡಿದ ಘಟನೆಗಳು ನಿಮ್ಮನ್ನು ಕಾರಾಗೃಹದಲ್ಲಿರುವಂತೆ ಮಾಡಿದೆ. ನಿಮ್ಮ ಜೀವನ ಇಲ್ಲಿಗೆ ಅಂತ್ಯವಲ್ಲ. ಇಲ್ಲಿ ತಪ್ಪುಗಳಮನವರಿಕೆ ಮಾಡಿಕೊಂಡು ಮುಂದಿನಬದುಕು ಉತ್ತಮವಾಗಿ ಕಟ್ಟಿಕೊಳ್ಳಲು ಅಕ್ಷರ ಜ್ಞಾನ ನೆರವಾಗಲಿದೆ ಎಂದರು.

Advertisement

ಅಪರ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ಲಾವಣ್ಯ, ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಡಿ. ಪವಿತ್ರಾ ಅವರು ಮಾತನಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಲೋಕಶಿಕ್ಷಣ ನಿರ್ದೇಶನಾಲಯ ದಿಂದ ನಿಯೋಜಿತರಾದ ಬೋಧಕರು ಮತ್ತು ಬಂಧಿಗಳಲ್ಲಿಯೇ ಅಕ್ಷರಭ್ಯಾಸ ಪಡೆದ ತರಬೇತುದಾರರು ಅನಕ್ಷರಸ್ಥ ಬಂಧಿಗಳಿಗೆ ತರಬೇತಿ ನೀಡಲಿದ್ದಾರೆ. ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಂತರ ಅಕ್ಷರಭ್ಯಾಸ ಪಡೆದ ತರಬೇತುದಾರ ಬಂಧಿಗಳಿಗೆಬಾಳಿಗೆ ಬೆಳಕು ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬಂಧಿಗಳು ಪ್ರದರ್ಶಿಸಿದ ಮದ್ಯಪಾನದಿಂದ ಉಂಟಾಗುವ ಅಪರಾಧಗಳ ಕುರಿತು ಕಿರುನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಈ ಸಂದರ್ಭದಲ್ಲಿ ಕೆಎಸ್‌ಐಎಸ್‌ ಎಫ್‌ ಬಳ್ಳಾರಿ ಘಟಕದ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ, ಸಾರ್ವಜನಿಕ ಶಿಕ್ಷಣಇಲಾಖೆ ಉಪನಿರ್ದೇಶಕ ರಾಮಪ್ಪ,ಕಾರಾಗೃಹದ ವೈದ್ಯಾಧಿ ಕಾರಿ ಗುಪ್ತಾ ಸೇರಿದಂತೆ ಕಾರಾಗೃಹದ ಬಂಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next