Advertisement

ವಿವಿಧೆಡೆ ರಾಜ್ಯೋತ್ಸವ ಆಚರಣೆ ವೈಭವ

04:08 PM Nov 02, 2020 | Suhan S |

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಸರಳವಾಗಿ ಆಚರಿಸಲಾಯಿತು.

Advertisement

ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯದಿಂದ ಕನ್ನಡಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಜಿಲ್ಲಾಧ್ಯಕ್ಷವೆಂಕಟಗಿರಿ ಸಾಗರ್‌ ಧ್ವಜಾರೋಹಣ ಮಾಡಿದರು. ಮುಖಂಡರಾದ ಶಿವರಾಜ್‌ ಪಾಟೀಲ್‌, ಸುರೇಂದ್ರಬಾಬು, ವೆಂಕಣ್ಣ, ಶಂಶಾಲಂ ಮಾತನಾಡಿದರು.

ಈ ವೇಳೆ ವೆಂಕಟೇಶ್‌ ಉಪ್ಪಾರ, ಹನುಮೇಶ ದಂಡ್‌, ಜೂಕುರು ಶ್ರೀನಿವಾಸ, ರವಿ ಸಾಗರ್‌, ಆಂಜನೇಯ, ರಾಘವೇಂದ್ರ ರೆಡ್ಡಿ, ಶಿವರಾಜ ಸೇರಿದಂತೆ ಗ್ರಾಮಸ್ಥರಿದ್ದರು. ಕರವೇ (ಶಿವರಾಮೇಗೌಡ ಬಣ): ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ (ಶಿವರಾಮೇಗೌಡ ಬಣ) ನಗರದ ಮಾವಿನ ಕೆರೆಯ ದಡದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಭೀಮರೆಡ್ಡಿ ಸಂಗವಾರ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಸೂರ್ಯವಂಶಿ ಸಮಾಜದ ಅಧ್ಯಕ್ಷ ಏಗನೂರ ಸತ್ಯನಾರಾಯಣ, ರವೀಂದ್ರಗೌಡ, ಉರಗತಜ್ಞ ಅಫ್ಸರ್ ಹುಸೇನ್‌ ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾಧ್ಯಕ್ಷ ಅಶೋಕಕುಮಾರ ಸಿ.ಕೆ, ಜೈನ್‌,ಗೋವಿಂದರಾಜ, ಮಲ್ಲು, ಕಿಶನರಾವ್‌, ಸಂಜಯ ವೈಷ್ಣವ, ನಾಗರಾಜ, ಆಸಿಫ್‌, ಅಜಿಜ್‌ ಸೇರಿದಂತೆ ಇತರರು ಇದ್ದರು.

ಕನ್ನಡ ಕಲಾ ಯುವ ವೇದಿಕೆ: ನಗರದ ಶೆಟ್ಟಿಬಾವಿ ವೃತ್ತದಲ್ಲಿ ಕನ್ನಡ ಕಲಾ ಯುವ ವೇದಿಕೆಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

Advertisement

ಈ ವೇಳೆ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಮುಖಂಡರಾದ ವಾಜೀದ್‌ಷಾ, ಗ್ರೀನ್‌ ರಾಯಚೂರು ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಶಿವಾಳೆ, ಶೇಖರಪ್ಪ ಸೇರಿದಂತೆ ಅನೇಕರಿದ್ದರು. ಸಂಘದ ಅಧ್ಯಕ್ಷ ಎಸ್‌. ರವೀಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ. ಮಹ್ಮದ್‌, ಕೆ.ಸಿ. ವೀರೇಶ ವಕೀಲರು, ಹರ್ಷವರ್ಧನ, ಚಂದ್ರಶೇಖರ, ಹೊನ್ನಪ್ಪ, ಸೋಮು, ಪ್ರಭು ಯಾದವ್‌, ಶ್ರೀಕಾಂತ್‌ ಸೇರಿದಂತೆ ಇತರರಿದ್ದರು.

ಗಡಿನಾಡು ಕನ್ನಡಿಗರ ಸಮಸ್ಯೆಗೆ ಸ್ಪಂದಿಸಿ :

ರಾಯಚೂರು: ಜಿಲ್ಲೆಯ ಗಡಿಭಾಗ ಮತ್ತು ಹೊರರಾಜ್ಯದ ಕನ್ನಡಿಗರು ಎದುರಿಸುತ್ತಿರುವ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕೃಷ್ಣಾದ ಗಡಿನಾಡು ಕನ್ನಡ ಸಂಘದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಗೆ ರವಿವಾರ ಮನವಿ ಸಲ್ಲಿಸಿದರು.

ತೆಲಂಗಾಣ ರಾಜ್ಯದ ನಾರಾಯಣ ಪೇಟೆ ಜಿಲ್ಲೆಯ ಕೃಷ್ಣಾ ಸೇರಿದಂತೆ 13 ಗ್ರಾಮಗಳು ಇಂದಿಗೂ ಅನೇಕ ಸಮಸ್ಯೆ ಎದುರಿಸುತ್ತಿವೆ. ಭಾಷಾವಾರು ಪ್ರಾಂತ ವಿಂಗಡಣೆ ವೇಳೆ ಭೌಗೋಳಿಕವಾಗಿ ಕರ್ನಾಟಕದಿಂದ ಹೊರಗುಳಿದರೂ ಅಲ್ಲಿನ ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ, ಕಾಲೇಜು ವ್ಯಾಸಂಗಕ್ಕೆ ರಾಯಚೂರು ಜಿಲ್ಲೆಗೆ ಬರಬೇಕಿದ್ದು, ಇಲ್ಲಿಪ್ರವೇಶ ಕಲ್ಪಿಸುತ್ತಿಲ್ಲ ಎಂದು ದೂರಿದರು.

2011ರಲ್ಲಿ ಸರ್ಕಾರ ಹೊರಡಿಸಿದ ಆದೇಶಾನುಸಾರ ಪ್ರಾಥಮಿಕ ಶಿಕ್ಷಣ ಯಾವುದೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸುವಂತೆ ತಿಳಿಸಿದೆ. ಆದರೆ, ಇಂದಿಗೂ ಜಾರಿಯಾಗಿಲ್ಲ. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಾಂಗಕ್ಕೆ ಶಕ್ತಿನಗರ ಹಾಗೂ ರಾಯಚೂರು ನಗರಕ್ಕೆ ಬರಲು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಎಸ್‌.ರಾಮಲಿಂಗಪ್ಪ ಕುಣಿÕ, ಅಧ್ಯಕ್ಷ ನಿಜಾಮುದ್ದೀನ್‌, ಉಪಾಧ್ಯಕ್ಷ ಅಮರ ಕುಮಾರ ದೀಕ್ಷಿತ್‌, ಪ್ರಧಾನ ಕಾರ್ಯದರ್ಶಿ ನಾಗಭೂಷಣ್‌ ಸೇರಿ ಅನೇಕರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next