Advertisement

ಕನ್ನಡರಾಜ್ಯೋತ್ಸವ: ಗಮನ ಸೆಳೆದ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮ ಸ್ಥಬ್ಧಚಿತ್ರ

01:10 PM Nov 01, 2019 | Suhan S |

ಗಂಗಾವತಿ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲೂಕು ಆಡಳಿತ ಸಂಭ್ರಮದಿಂದ ಆಚರಿಸಿತು. ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳು ಮಾಡಿದ್ದ ಸ್ಥಬ್ಧಚಿತ್ರಗಳು ನೋಡುಗರ ಗಮನ ಸೆಳೆದವು.

Advertisement

ನಾಡಿಗೆ ದಸರಾ ಹಬ್ಬವನ್ನು ಕೊಡುಗೆಯಾಗಿ ನೀಡಿದ ಗಂಡುಗಲಿ ಕುಮಾರ ರಾಮನ ಕುಮ್ಮಟದುರ್ಗದ ಸ್ಥಬ್ಧಚಿತ್ರ ‌ಅತ್ಯುತ್ತಮವಾಗಿ ಮೂಡಿಬಂದಿತ್ತು. ಪರನಾರಿ ಸಹೋದರ ಹಾಗೂ ಕನ್ನಡ ನಾಡಿನ ಕುರಿತು ಕುಮ್ಮಟದುರ್ಗದ ಕೋಟೆ ಮೇಲೆ ಬರೆದ ಬರವಣಿಗೆ ಕನ್ನಡನಾಡಿನ ಕುರಿತು ಮಾಹಿತಿ ನೀಡಿತ್ತು. ಚನ್ನಬಸವಸ್ವಾಮಿ ಹಿರಿಯಪ್ರಾಥಮಿಕ ಶಾಲೆಯ ಮಕ್ಕಳು ಈ ಸ್ಥಬ್ಧಚಿತ್ರವನ್ನು ತಯಾರಿಸಿದ್ದರು. ಕೊಂಡಮಿ ವಿನಾಯಕ ಶಾಲೆಯ ಮಕ್ಕಳು ಸಾಧನೆ ಮಾಡಿದ ಮಹನೀಯರ ಸ್ಥಬ್ಧಚಿತ್ರ, ಹಿರೇಜಂತಗಲ್ ಸರಕಾರಿ ಪ್ರೌಢಶಾಲೆಯಿಂದ ಅನುಭವಮಂಟಪ, ಲಿಟಲ್ ಹಾರ್ಟ್ ಶಾಲೆಯ ಮಕ್ಕಳು ವೀರ ಮಹಿಳೆಯರ ಸ್ಥಬ್ಧಚಿತ್ರ ಸಾರ್ವಜನಿಕರ ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next